ಸುಭಾಷಿತ :

Monday, February 24 , 2020 2:02 AM

SSLC,PUC, DEGREE ಆದವರಿಗೆ ಸಿಹಿ ಸುದ್ದಿ: ರಾಜ್ಯದ ವಿವಿಧ ಜಿಲ್ಲೆಗಳ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ


Monday, January 20th, 2020 7:17 pm

ಬೆಂಗಳೂರು : ಪದವಿ, ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಹೊಂದಿದ ಅರ್ಹ ಅಭ್ಯರ್ಥಿಗಳಿಂದ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವಂತ ಜೂನಿಯರ್ ಅಕೌಂಟ್, ಪೋಸ್ಟಲ್/ಸ್ಟ್ರೋಟಿಂಗ್ ಅಸಿಸ್ಟೆಂಟ್ ಹಾಗೂ ಪೋಸ್ ಮ್ಯಾನ್ ಹುದ್ದೆಗಳಿಗಾಗಿ ಸ್ಪೋರ್ಟ್ಸ್ ಮ್ಯಾನ್ ಕೋಟಾದ ಅಡಿಯಲ್ಲಿ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು ಕೇಂದ್ರ ಪೋಸ್ಟ್ ಆಫೀಸ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಅಂಚೆ ಕಚೇರಿಯಲ್ಲ ಖಾಲಿ ಇರುವಂತ 27 ಹುದ್ದೆಗಳ ನೇಮಕಕ್ಕಾಗಿ ಸ್ಪೋರ್ಟ್ಸ್ ಮನ್ ಕೋಟಾದಡಿಯಲ್ಲಿ ಸೂಕ್ತ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ – 27

ವಿದ್ಯಾರ್ಹತೆ

  • ಜೂನಿಯರ್ ಅಕೌಂಟ್ – ಅಂಗೀಕೃತ ವಿಶ್ವ ವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ
  • ಪೋಸ್ಟಲ್/ಸ್ಟ್ರೋಲಿಂಗ್ ಅಸಿಸ್ಟೆಂಟ್ – ಎಸ್ ಎಸ್ ಎಲ್ ಸಿ ಇಲ್ಲವೇ, 12th ಪಾಸ್
  • ಪೋಸ್ಟ್ ಮ್ಯಾನ್ – 12th ಪಾಸ್

ವೇತನ ಶ್ರೇಣಿ

  • ಜೂನಿಯರ್ ಅಕೌಂಟ್ – ರೂ.25,500 – ರೂ.81,100
  • ಪೋಸ್ಟಲ್/ಸ್ಟ್ರೋಲಿಂಗ್ ಅಸಿಸ್ಟೆಂಟ್ – ರೂ.25,500 ರಿಂದ ರೂ.81,100
  • ಪೋಸ್ಟ್ ಮ್ಯಾನ್ – ರೂ.21,700ರಿಂದ ರೂ.69,100

ವಯೋಮಿತಿ – ಕನಿಷ್ಠ 18 ವರ್ಷ ಗರಿಷ್ಠ 27 ವರ್ಷ. ಓಬಿಸಿಗೆ 3 ವರ್ಷ ಸಡಿಲಿಕೆ, ಎಸ್ಸಿ, ಎಸ್ಟಿ ವರ್ಗದವರಿಗೆ 5 ವರ್ಷ ಸಡಿಲಿಕೆ

ಅರ್ಜಿ ಸಲ್ಲಿಕೆ ಹಾಗೂ ಇತರೆ ಮಾಹಿತಿಗಾಗಿ https://www.karnatakapost.gov.in/ ಅಥವಾ https://www.indiapost.gov.in/ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-02-2020 ಆಗಿರುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ಅಟೆಸ್ಟೆಡ್ ಮಾಡಿಸಿ, The Assistant Director ( R&E), O/o Chief Postmaster General, Karnataka Circle, Bangaluru-560001 ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಇಲ್ಲವೇ ರಿಜಿಸ್ಟರ್ ಪೋಸ್ಟ್ ನಲ್ಲಿ ಕಳುಹಿಸಿಕೊಡಲು ತಿಳಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions