ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ: 2000 ರ ದಶಕದ ಭಾರತದ ಪಂದ್ಯಗಳು ಡಿಡಿ ಸ್ಪೋರ್ಟ್ಸ್ ನಲ್ಲಿ ಪ್ರಸಾರ – Kannada News Now


Cricket Other Sports Sports

ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ: 2000 ರ ದಶಕದ ಭಾರತದ ಪಂದ್ಯಗಳು ಡಿಡಿ ಸ್ಪೋರ್ಟ್ಸ್ ನಲ್ಲಿ ಪ್ರಸಾರ

 

ನವದೆಹಲಿ : ಕೊರೋನಾವೈರಸ್ ನಿಂದಾಗಿ ಇಡೀ ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿದ್ದು, ಈ ನಡುವೆ ಕ್ರಿಕೆಟ್‌ ಪ್ರಿಯರಿಗಾಗಿ ಬಿಸಿಸಿಐ ಸಿಹಿ ಸುದ್ದಿಯೊಂದು ನೀಡಿದೆ. ಹೌದು, 2000 ರ ಕ್ರಿಕೆಟ್ ರಿವೈಂಡ್ ! ಬಿಸಿಸಿಐ ಮತ್ತು ಭಾರತ ಸರ್ಕಾರ ನಿಮಗೆ ಹಿಂದಿನ ಕ್ರಿಕೆಟ್ ಮುಖ್ಯಾಂಶಗಳನ್ನು ತರುತ್ತಿದ್ದು, ಮನೆಯಲ್ಲಿಯೇ ಇದ್ದುಕೊಂಡು ಕ್ರಿಕೆಟ್ ಆನಂದಿಸಿ # ಸ್ಟೇಹೋಮ್ ಸ್ಟೇ ಸೇಫ್ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಈ ಪಂದ್ಯಗಳಲ್ಲಿ 2003 ರಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ತ್ರಿಕೋನ ಸರಣಿ ಪಂದ್ಯಗಳು, 2002 ರಲ್ಲಿ ವೆಸ್ಟ್ ಇಂಡೀಸ್‌ನ ಭಾರತ ಪ್ರವಾಸ ಮತ್ತು 2005 ರಲ್ಲಿ ಶ್ರೀಲಂಕಾದ ಭಾರತ ಪ್ರವಾಸದ ಪಂದ್ಯಗಳು, 2000 ರಲ್ಲಿ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ, 2001 ರಲ್ಲಿ ಆಸ್ಟ್ರೇಲಿಯಾದ ಭಾರತ ಪ್ರವಾಸದ ಪಂದ್ಯಗಳು. ಜಗತ್ತಿನಾದ್ಯಂತ ಕರೋನವೈರಸ್ ಹರಡಿದ ನಂತರ ಕ್ರಿಕೆಟ್ ಪಂದ್ಯಾವಳಿಗಳನ್ನು ಸ್ಥಗಿತಗೊಂಡಿದೆ. ಭಾರತದಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್‌ನ 13 ನೇ ಆವೃತ್ತಿಯನ್ನು ಏಪ್ರಿಲ್ 15 ರವರೆಗೆ ಅಮಾನತುಗೊಳಿಸಲಾಗಿದೆ,