ಸ್ಪೇನ್‌ : ಮ್ಯಾಡ್ರಿಡ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯಲ್ಲಿ ಅನುಮಾನಾಸ್ಪದ ಲಕೋಟೆ ಪತ್ತೆಯಾಗಿದ್ದು,  ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸ್ಪ್ಯಾನಿಷ್ ಅಧಿಕಾರಿಗಳು ತಿಳಿಸಿದ್ದಾರೆ.

BREAKING NEWS : ICSE 10ನೇ ತರಗತಿ, ISC 12ನೇ ತರಗತಿ ಬೋರ್ಡ್ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ ; ಇಲ್ಲಿದೆ ಡಿಟೈಲ್ಸ್ |ICSE 10th, ISC Class 12 Board Exam 2023

ಪೋಸ್ಟಲ್ ಪ್ಯಾಕೇಜ್‌ಗಳಲ್ಲಿ ಬಚ್ಚಿಟ್ಟ ಇತರ ಸ್ಫೋಟಕ ಸಾಧನಗಳನ್ನು ಕಳೆದ ಎರಡು ದಿನಗಳಲ್ಲಿ ಸ್ಪೇನ್‌ ರಕ್ಷಣಾ ಸಚಿವಾಲಯ, ಸ್ಪೇನ್‌ನಲ್ಲಿರುವ ಯುರೋಪಿಯನ್ ಯೂನಿಯನ್ ಉಪಗ್ರಹ ಕೇಂದ್ರ ಗ್ರೆನೇಡ್‌ಗಳನ್ನು ತಯಾರಿಸುವ ಶಸ್ತ್ರಾಸ್ತ್ರ ಕಾರ್ಖಾನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುಎಸ್ ರಾಯಭಾರ ಕಚೇರಿಯಲ್ಲಿ ಪತ್ತೆಯಾದ ಲಕೋಟೆಯನ್ನು ಪೊಲೀಸರು ಸ್ಫೋಟಿಸಿದ್ದು, ಯಾವುದೇ ಗಾಯಗಳ ವರದಿಯಾಗಿಲ್ಲ ಎಂದು ಸ್ಪ್ಯಾನಿಷ್ ಆಂತರಿಕ ಸಚಿವಾಲಯ ತಿಳಿಸಿದೆ.

ನವೆಂಬರ್ 24 ರಂದು ಇದೇ ಮಾದರಿಯಲ್ಲೇ ಅನುಮಾನಸ್ಪದ ವಸ್ತುವನ್ನು ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್‌ಗೆ ಅಂಚೆ ಮೂಲಕ ರವಾನಿಸಲಾಗಿತ್ತು. ಬಾಂಬ್ ಸ್ಕ್ವಾಡ್ ತಜ್ಞರು ಅದನ್ನು ವಿಲೇವಾರಿ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ದೇಶದಾದ್ಯಂತ ಅಂಚೆ ಮೂಲಕ ಕಳುಹಿಸಲಾದ ಸ್ಫೋಟಕ ಸಾಧನಗಳ ಸಂಖ್ಯೆ ಏರಿಕೆಯಾಗುತ್ತಿವೆ.

ಮ್ಯಾಡ್ರಿಡ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಗೆ ಗುರುವಾರ ಪತ್ರ ಬಾಂಬ್‌ಗಳನ್ನು ಖಂಡಿಸಿದೆ. ಯಾವುದೇ ಬೆದರಿಕೆ ಅಥವಾ ಭಯೋತ್ಪಾದಕ ದಾಳಿಗಳು, ವಿಶೇಷವಾಗಿ ರಾಜತಾಂತ್ರಿಕ ಕಾರ್ಯಾಚರಣೆಗಳಿಗೆ ನಿರ್ದೇಶಿಸಲ್ಪಟ್ಟಿರುವುದು ಸಂಪೂರ್ಣವಾಗಿ ಖಂಡನೀಯ ಎಂದು ಟ್ವೀಟ್‌ನಲ್ಲಿ ಹೇಳಿದೆ.

ನಿನ್ನೆ ಉಕ್ರೇನಿಯನ್ ರಾಯಭಾರ ಕಚೇರಿಗೆ ಇದೀ ರೀತಿಯ ಪ್ಯಾಕೇಜ್ ಬಂದಿತ್ತು. ಅದನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದೇಶದಲ್ಲಿರುವ ಎಲ್ಲಾ ಉಕ್ರೇನಿಯನ್ ರಾಯಭಾರ ಕಚೇರಿಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ತ್ವರಿತವಾಗಿ ಆದೇಶಿಸಿದ್ದರು.

ಸ್ಪೇನ್‌ನ ರಾಷ್ಟ್ರೀಯ ನ್ಯಾಯಾಲಯವು ಘಟನೆಯನ್ನು ಭಯೋತ್ಪಾದಕ ಕೃತ್ಯವೆಂದು ತನಿಖೆ ನಡೆಸುತ್ತಿದೆ ಮತ್ತು ಉಕ್ರೇನ್ ರಾಯಭಾರ ಕಚೇರಿಗೆ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದೆ.

BREAKING NEWS : ‘ಪ್ರಮೋದ್ ಮುತಾಲಿಕ್’ ಗೆ ಜೀವ ಬೆದರಿಕೆ ಸಂದೇಶ : ದೂರು ದಾಖಲು

Share.
Exit mobile version