ಬೆಂಗಳೂರು ಕಳೆದ ಎರಡು ದಿನಗಳ ಹಿಂದೆ ಅಮಾನತುಗೊಂಡಿದ್ದ ಇನ್ಸ್‌ ಪೆಕ್ಟರ್‌ ನಂದೀಶ್‌ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

BIGG NEWS: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಪ್ರಮೋದ್‌ ಮುತಾಲಿಕ್‌ ಖಚಿತ; ಯಾವ ಪಕ್ಷದಿಂದ ಗೊತ್ತಾ? ಇಲ್ಲಿದೆ ಮಾಹಿತಿ

 

ಆದರೆ ನಂದೀಶ್‌ ಅವರು ಅಮಾನತು ಮಾಡಿರುವ ಕುರಿತು ಗೊಂದಲ ಮೂಡಿತ್ತು. ಇದಕ್ಕೆ ಈಗ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.ಹೃದಯಾಘಾತದಿಂದ ನಂದೀಶ್‌ ನಿಧನರಾಗಿದ್ದಾರೆಂದು ಮಾಹಿತಿ ಇದೆ. ಆದರೆ ಯಾವ್ಯಾವುದಕ್ಕೋ ಲಿಂಕ್​ ಮಾಡಿ ಮಾತಾಡುವುದು ಸರಿಯಲ್ಲ. ಕ್ಯಾಬರೆ, ಇಸ್ಪೀಟ್​ ಕ್ಲಬ್, ಕ್ಯಾಸಿನೋ ಬಂದಾಗಬೇಕೆಂದು ಸೂಚನೆ ನೀಡಲಾಗಿತ್ತು. ಕೆಲವು ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಓಪನ್​ ಮಾಡುವ ಕೆಲಸ ನಡೆದಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

BIGG NEWS: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಪ್ರಮೋದ್‌ ಮುತಾಲಿಕ್‌ ಖಚಿತ; ಯಾವ ಪಕ್ಷದಿಂದ ಗೊತ್ತಾ? ಇಲ್ಲಿದೆ ಮಾಹಿತಿ

 

ಬೆಂಗಳೂರಿನಲ್ಲಿ ಅಕ್ರಮ ಚಟುವಟಿಕೆ ಬಂದ್​ ಆಗಬೇಕೆಂದು ಸೂಚನೆ ನೀಡಲಾಗಿತ್ತು. ಅಕ್ರಮ ನಡೆಯುತ್ತಿದ್ರೆ ಸ್ಥಳೀಯ ಅಧಿಕಾರಿ ಹೊಣೆಮಾಡುವಂತೆ ಹೇಳಿದ್ದೆ. ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಅಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು. ಪಾರ್ಟಿಯಲ್ಲಿ ಸೂಡಾನ್​ ದೇಶದ 20 ಪ್ರಜೆಗಳು ಭಾಗವಹಿಸಿದ್ದರು. ಸಿಸಿಬಿ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಕಮಿಷನರ್,​ ನಂದೀಶ್ ಅವರನ್ನು​ ಅಮಾನತು ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು ನನಗೆ ಮಾಹಿತಿ ನೀಡಿದ್ರು ಎಂದು ಸ್ಪಷ್ಟಪಡಿಸಿದರು

Share.
Exit mobile version