ಸುಭಾಷಿತ :

Tuesday, February 18 , 2020 1:53 PM

GOOD NEWS: ಇನ್ಮುಂದೆ ಗುತ್ತಿಗೆ ಕಾರ್ಮಿಕರಿಗೂ ಸಿಗಲಿದೆ ‘PF’ : ಸುಪ್ರೀಂಕೋರ್ಟ್ ನಿಂದ ‘ಮಹತ್ವದ ತೀರ್ಪು’


Monday, January 20th, 2020 6:44 am

ನವದೆಹಲಿ : ಗುತ್ತಿಗೆ ಕಾರ್ಮಿಕರ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಉದ್ಯೋಗಿಗಳ ಭವಿಷ್ಯ ನಿಧಿ ಕಾಯ್ದೆ ಅನ್ವಯ ಸಾಂದರ್ಭಿಕ ಕಾರ್ಮಿಕರು ಕೂಡಾ ಸಾಮಾಜಿಕ ಭದ್ರತಾ ಪ್ರಯೋಜನಗಳಿಗೆ ಅರ್ಹರು ಎಂದು ಹೇಳಿದೆ.

ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ಮಲ್ಹೋತ್ರಾ ಅವರನ್ನೊಳಗೊಂಡ ನ್ಯಾಯಾಪೀಠ, ಇಪಿಎಫ್ ಕಾಯ್ದೆಯ ಸೆಕ್ಷನ್-2 (ಎಫ್) ಅನ್ವಯ ಉದ್ಯೋಗದಾತರು ಕಾಯಂ ಉದ್ಯೋಗಿಗಳ ಮತ್ತು ಗುತ್ತಿಗೆ ಕಾರ್ಮಿಕರ ನಡುವೆ ತಾರತಮ್ಯ ಅನುಸರಿಸುವಂತಿಲ್ಲ, ಉದ್ಯೋಗಿಗಳ ಭವಿಷ್ಯ ನಿಧಿ ಕಾಯ್ದೆ ಅನ್ವಯ ಸಾಂದರ್ಭಿಕ ಕಾರ್ಮಿಕರೂ ಕೂಡಾ ಸಾಮಾಜಿಕ ಭದ್ರತಾ ಪ್ರಯೋಜನಗಳಿಗೆ ಅರ್ಹರು ಎಂದು ತೀರ್ಪು ನೀಡಿದೆ.

ಎಲ್ಲ ಗುತ್ತಿಗೆ ಕಾರ್ಮಿಕರು ಭವಿಷ್ಯ ನಿಧಿ ಸೌಲಭ್ಯದಡಿ ಬರುತ್ತಾರೆ ಹಾಗೂ ಅವರಿಗೆ 2017ರ ಜನವರಿಯಿಂದ ಸೌಲಭ್ಯಗಳನ್ನು ನೀಡಬೇಕು ಎಂದು ಕಾರ್ಮಿಕ ಸಂಘ ಸುಪ್ರೀಂಕೋರ್ಟ್ ಗೆ ಮನವಿ ಮಾಡಿತ್ತು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions