ಬೆಂಗಳೂರು: ಬೆಳಗಾವಿ ಗಡಿಯ ಸಂಬಂಧ ಮಹಾರಾಷ್ಟ್ರ ಕ್ಯಾತೆ ತೆಗೆದ ಬೆನ್ನಲ್ಲೇ, ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲ್ ನೇಮಸಿ ಆದೇಶಿಸಿದೆ.

‘ಶರಾವತಿ ಸಂತ್ರಸ್ತ’ರಿಗೆ ತೊಂದರೆಯಾಗದಂತೆ ಕ್ರಮ – ಸಿಎಂ ಬಸವರಾಜ ಬೊಮ್ಮಾಯಿ

ಈ ಕುರಿತಂತೆ ರಾಜ್ಯ ಸರ್ಕಾರದ ಜಂಟಿ ಕಾರ್ಯದರ್ಶಿ ಜಿ ವೆಂಕಟೇಶ್ ಅಧಿಸೂಚನೆ ಹೊರಡಿಸಿದ್ದಾರೆ. ಈ ಪ್ರತಿ ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದೆ. ಅದರಲ್ಲಿ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲ್ ಇವರನ್ನು, ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ ಎಂದಿದ್ದಾರೆ.

ಸಿಎಂ ಬೊಮ್ಮಾಯಿ ಅಣಕು ಶವಯಾತ್ರೆ ನಡೆಸಿ ಪುಂಡಾಟ ಮೆರೆದ ಶಿವಸೇನೆ ಕಾರ್ಯಕರ್ತರು

ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ವಿವಾದ ತಾರಕಕ್ಕೇರಿದೆ. ಕರ್ನಾಟಕದ ಒಂದಿಂಚೂ ಗಡಿಯನ್ನು ಬಿಟ್ಟುಕೊಡುವುದಿಲ್ಲ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಬೆನ್ನಲ್ಲೇ, ಅವರ ಅಣಕು ಶವಯಾತ್ರೆ ನಡೆಸಿ ಶಿವಸೇನೆಯ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ.

BIG BREAKING NEWS: ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ’ಯ ‘ಅಂತಿಮ ಕೀ ಉತ್ತರ’ ಪ್ರಕಟ | KARTET-2022

ಬೆಳಗಾವಿಯ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮತ್ತೆ ತಾರಕಕ್ಕೇರಿದೆ. ಜತ್ತ ತಾಲೂಕಿನ 40 ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕು ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿರುವಂತ ಹೇಳಿಕೆಗೆ ಮರಾಠಿಗರ ಆಕ್ರೋಶ ತೀವ್ರಗೊಂಡಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸರ್ವಪಕ್ಷಗಳ ಸಭೆ ಕರೆದ ಕೇಂದ್ರ ಸರ್ಕಾರ

ಗಡಿವಿವಾದದ ಕಾರಣ ಮಹಾರಾಷ್ಟ್ರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಗಳಿಗೆ ಕಪ್ಪು ಮಸಿ ಬಳಿದು ಮರಾಠಿ ಭಾಷಿಗಳು ಪುಂಡಾಟಿಕೆ ಮೆರೆದ ಬೆನ್ನಲ್ಲೇ, ಸಿಎಂ ಬಸವರಾಜ ಬೊಮ್ಮಾಯಿ ಅವರ ಅಣಕು ಶವ ಯಾತ್ರೆ ನಡೆಸಿರೋದು ತಿಳಿದು ಬಂದಿದೆ. ಈ ಮೂಲಕ ಗಡಿ ವಿವಾದದ ಕಿಚ್ಚು ಹತ್ತಿಸುವಂತ ಕೆಲಸ ಮಾಡಿದ್ದಾರೆ.

Share.
Exit mobile version