ನವದೆಹಲಿ : ದೇಶವು ತನ್ನ ಜನರ ಅಗತ್ಯಕ್ಕೆ ಅನುಗುಣವಾಗಿ ಮತ್ತು ಸಂವಿಧಾನದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತದೆ. ಯಾರೂ ಯಾರಿಗೂ ಎಚ್ಚರಿಕೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆಯನ್ನು ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕೆಲವು ಕಟ್ಟುನಿಟ್ಟಿನ ಅವಲೋಕನಗಳನ್ನು ಮಾಡಿದ ಒಂದು ದಿನದ ನಂತರ ಸಚಿವರ ಈ ಹೇಳಿಕೆ ನೀಡಿದ್ದಾರೆ.
#WATCH | I saw a media report today that stated- Supreme Court has given a warning…The Indian Constitution is our guide. No one can give a warning to anyone: Union Law Minister Kiren Rijiju in Prayagraj, UP pic.twitter.com/oyoDfzLzIS
— ANI (@ANI) February 4, 2023
ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಷನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಿಜುಜು, ಸುಪ್ರೀಂ ಕೋರ್ಟ್ ನಮಗೆ ಎಚ್ಚರಿಕೆ ನೀಡಿದೆ ಎಂದು ಹೇಳುವ ವರದಿಯನ್ನು ಓದಿದ್ದೇನೆ ಎಂದೇಳಿದರು.
ಸಾರ್ವಜನಿಕರು ಈ ದೇಶದ ಮಾಲೀಕ ಮತ್ತು ನಾವು ಸೇವಕರು. ನಾವೆಲ್ಲರೂ ಸೇವೆಗಾಗಿ ಇಲ್ಲಿದ್ದೇವೆ. ನಮ್ಮ ಮಾರ್ಗದರ್ಶಕ ಸಂವಿಧಾನವಾಗಿದೆ. ಸಂವಿಧಾನದ ಮಾರ್ಗದರ್ಶನ ಮತ್ತು ಸಾರ್ವಜನಿಕರ ಆಶಯದಂತೆ ದೇಶವನ್ನು ಆಳಲಾಗುತ್ತದೆ. ಯಾರೂ ಯಾರಿಗೂ ಎಚ್ಚರಿಕೆ ನೀಡಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.
ಈ ಭವ್ಯವಾದ ದೇಶಕ್ಕೆ ಸೇವೆ ಸಲ್ಲಿಸಲು ನಮಗೆ ಅವಕಾಶ ಸಿಕ್ಕಿರುವುದಕ್ಕೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಇಲ್ಲಿ ಕುಳಿತಿರುವವರೆಲ್ಲರೂ ವಿಶೇಷವಾದವರು, ನಿಮ್ಮ ಕಠಿಣ ಪರಿಶ್ರಮ ಮತ್ತು ಅಧ್ಯಯನದ ನಂತರ ನೀವು ವಕೀಲರು, ನ್ಯಾಯಾಧೀಶರು, ಆದ್ದರಿಂದ ನಮಗೆ ಜವಾಬ್ದಾರಿ ಸಿಕ್ಕಿರುವುದು ನಮ್ಮ ಅದೃಷ್ಟ. ದೇಶಕ್ಕಾಗಿ ಏನಾದರೂ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದೇಳಿದ್ದಾರೆ.
BIGG NEWS : ಫೆ. 6ಕ್ಕೆ ಪ್ರಧಾನಿ ಮೋದಿಯಿಂದ ತುಮಕೂರಿನ ‘HAL’ ಘಟಕ ಉದ್ಘಾಟನೆ
Good News : ಶೀಘ್ರ 38,000 ಶಿಕ್ಷಕರ ನೇಮಕ, 740 ಏಕಲವ್ಯ ಮಾದರಿ ಶಾಲೆಗಳ ಸ್ಥಾಪನೆ ; ಕೇಂದ್ರ ಸರ್ಕಾರ ಮಹತ್ವದ ಘೋಷಣೆ