ಧಾರವಾಡ :  ರಾಜ್ಯ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ (Droupadi Murmu ಮುರ್ಮು  ಇಂದು ವಿದ್ಯಾಕಾಶಿ ಧಾರವಾಡಕ್ಕೆ ಆಗಮಿಸಿದ್ದರು.

ಐಐಐಟಿ ಉದ್ಘಾಟನೆ ಮಾಡಿದ ರಾಷ್ಟ್ರಪತಿ ಮುರ್ಮು ಅವರಿಗೆ ಸುಧಾ ಮೂರ್ತಿಯವರು ಕೌದಿ ಕೊಟ್ಟು ಗೌರವಿಸಿದ್ದಾರೆ. ವೇದಿಕೆ ಮೇಲೆ ರಾಷ್ಟ್ರಪತಿ ಅವರಿಗೆ ಸ್ವಾಗತ ನೀಡಿದ ಸುಧಾ ಮೂರ್ತಿ ಅವರು, ಕೌದಿ ಜೊತೆ ರೇಷ್ಮೆ ಸೀರೆ ಕೂಡಾ ಕೊಟ್ಟಿದ್ದಾರೆ. ವಿಶೇಷ ಅಂದರೆ  ಮೂರು ಸಾವಿರ ದೇವದಾಸಿಯರಿಂದ ತಯಾರಾದ ‘ಕೌದಿ’  ಯನ್ನು ರಾಷ್ಟ್ರಪತಿಗಳಿಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ.

ರಾಯಚೂರಿನ ಮೂರು ಸಾವಿರ ದೇವದಾಸಿಯರು ಈ ಕೌದಿಯನ್ನ ತಯಾರು ಮಾಡಿದ್ದು,  ಇವರನ್ನು ಸಮಾಜಕ್ಕೆ ಮರಳಿ ತರುವಲ್ಲಿ ಸುಧಾ ಮೂರ್ತಿ ಸಾಕಷ್ಟು ಪರಿಶ್ರಮ ಹಾಕಿದ್ದರು. . ಅದಕ್ಕೆ ಆ ದೇವದಾಸಿಯರು ಇವರಿಗೆ ತಾವು ತಯಾರಿಸಿದ ಕೌದಿಯನ್ನ ಕೊಟ್ಟಿದ್ದರು. ಅದನ್ನು ಸುಧಾಮೂರ್ತಿ ಅವರು ರಾಷ್ಟ್ರಪತಿಗಳಿಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ

 ನಿಮ್ಮೆಲ್ಲರ ಪ್ರೀತಿಗೆ ನಾನು ಚಿರರುಣಿ : 

ಸಾಧಾರಣ ಕುಟುಂಬದಿಂದ ಬಂದ ನನಗೆ ಸನ್ಮಾನಿಸಿದ್ದೀರಿ. ಇದು ಕೇವಲ ನನಗೊಬ್ಬಳಿಗೆ ಮಾಡಿರೊ ಸನ್ಮಾನವಲ್ಲ. ನನ್ನ ಮೂಲಕ ಭಾರತದ ಎಲ್ಲ ಹೆಣ್ಣುಮಕ್ಕಳಿಗೆ ಅಭಿನಂದಿಸಿದ್ದೀರಿ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರರುಣಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಸಂತಸ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ- ಧಾರವಾಡ (Hubbali- Dharwad) ಮಹಾನಗರ ಪಾಲಿಕೆಯಿಂದ ಆಯೋಜಿಸಲಾಗಿದ್ದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಾಧಾರಣ ಕುಟುಂಬದಿಂದ ಬಂದ ನನ್ನನ್ನು ನಿಮ್ಮ ಊರಿಗೆ ಕರೆಯಿಸಿ ಸನ್ಮಾನ ಮಾಡಿದ್ದೀರಿ. ಇದು ನನಗೊಬ್ಬಳಿಗೆ ಮಾಡಿದ ಸನ್ಮಾನವಲ್ಲ. ಇದೇ ಭಾರತದ ಮಹಿಳಾ ಕುಲಕ್ಕೆ ಮಾಡಿದ ಸತ್ಕಾರ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು  ಸಂತಸ ವ್ಯಕ್ತಪಡಿಸಿದ್ದಾರೆ. ಐತಿಹಾಸಿಕ ನಗರದ ಭಾಗವಾಗಿರುವ ನಿಮಗೆಲ್ಲಾ ಶುಭಾಶಯಗಳು. ಕನ್ನಡ, ಮರಾಠಿ ಭಾಷೆಗಳ ಸಂಗಮ ಇಲ್ಲಿದೆ. ಎಲ್ಲಾ ಜಾತಿ ಧರ್ಮದ ಜನರು ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದೀರಿ ಎಂದು ಹೇಳಿದರು.

ಇಂದು ಜಿಮ್ ಖಾನ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪಾಲಿಕೆ ವತಿಯಿಂದ ಪೌರ ಸನ್ಮಾನ ಮಾಡಲಾಯಿತು. ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ರಾಷ್ಟ್ರಪತಿಗಳನ್ನು ಸನ್ಮಾನಿಸಿ ಗೌರವಿಸಿದರು. ಹಾಗೂ 900 ಗ್ರಾಂ ತೂಕದ ಸಿದ್ಧಾರೂಢ ಸ್ವಾಮೀಜಿಗಳ ಬೆಳ್ಳಿ ಮೂರ್ತಿ ಸ್ಮರಣಿಕೆಯಾಗಿ ಕೊಟ್ಟು ಯಾಲಕ್ಕಿ ಹಾರ ಹಾಕಿ ಸನ್ಮಾನಿಸಲಾಯಿತು.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಪೇಜಾವರ ಶ್ರೀ

‘ಮೈಸೂರು ದಸರಾ ವೀಕ್ಷಣೆ’ಗೆ ತೆರಳೋರಿಗೆ ಗುಡ್ ನ್ಯೂಸ್: KSRTCಯಿಂದ ‘450 ವಿಶೇಷ ಸಾರಿಗೆ ಬಸ್’ ವ್ಯವಸ್ಥೆ

Share.
Exit mobile version