ಬೆಂಗಳೂರು: ಹೆಪಟೋ ಪಲ್ಮನರಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದ 10 ವರ್ಷ ಬಾಂಗ್ಲದೇಶ ಮೂಲಕ ಬಾಲಕನಿಗೆ ಫೊರ್ಟಿಸ್ ಆಸ್ಪತ್ರೆ ( fortis hospital ) ವೈದ್ಯರು ಯಶಸ್ವಿ ಲಿವರ್ ಕಸಿ ನಡೆಸಿದ್ದಾರೆ. ಫೊರ್ಟಿಸ್ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಜಿ ಹಾಗೂ ಹೆಪಟಾಲಜಿ ಸಮಾಲೋಚಕ ಡಾ. ಕೆ.ಎಸ್. ಪ್ರಸನ್ನ ಅವರ ತಂಡ ಈ ಯಶಸ್ವಿ ಚಿಕಿತ್ಸೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಡಾ. ಪ್ರಸನ್ನ, 10 ವರ್ಷದ ಈ ಬಾಲಕ ಕೆಲ ವರ್ಷದಿಂದ ಹೆಪಟೋ ಪಲ್ಮನರಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದ. ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದಲ್ಲದೇ ಹೃದಯ ಮತ್ತು ಶ್ವಾಸಕೋಶದ ಮಧ್ಯೆ ರಕ್ತ ಸಂಚಾರಕ್ಕೆ ಸಮಸ್ಯೆ ಹೊಡ್ಡಿತ್ತು. ಇದು 10 ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ರೋಗ. ಇದರಿಂದ ಬಾಲಕನಿಗೆ ಉಸಿರಾಟದ ಸಮಸ್ಯೆ ಎದುರಾಗಿ 16 ತಿಂಗಳಿನಿಂದ ಆಮ್ಲಜನಕದ ಸಹಾಯದಿಂದ ಉಸಿರಾಡುತ್ತಿದ್ದನು. ನಮ್ಮ ವೈದ್ಯರ ತಂಡ ಮಗುವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದ ಮೇಲೆ ಕಂಜೆನಿಟಲ್ ಇಂಟ್ರಾ ಹೆಪಾಟಿಕ್ ಪೋ ಟೊ ಸಿಸ್ಟಮಿಕ್ ಸ್ಟಂಟ್ಸ್ (ಐಪಿಎಸ್‌ಎಸ್) ಪೋಟಲ್ ನರಗಳು ಬಾಧಿಸುತ್ತಿರುವುದು ಕಂಡು ಬಂದಿತು. ಈ ಎಲ್ಲದರ ಪರಿಣಾಮ ಬಾಲಕ ಲಿವರ್‌ನನ್ನು ಕಳೆದುಕೊಂಡಿದ್ದರು. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಲಿವರ್ ಫೇಲ್ಯೂರ್ ಆಗುವುದು ಅಪರೂಪ. ಹೀಗಾಗಿ ಕೂಡಲೇ ಬಾಲಕನಿಗೆ ಲಿವರ್ ಕಸಿ ಅಗತ್ಯವಿತ್ತು. ಆದರೆ, ತಂದೆ ಡಯಾಬಿಟಿಕ್ ರೋಗಿ ಹಾಗೂ ತಾಯಿ ಗರ್ಭಿಣಿಯಾದ್ದರಿಂದ ಅವರ ಸ್ವಂತ ಅತ್ತೆಯೇ ಲಿವರ್ ಭಾಗವನ್ನು ದಾನ ಮಾಡಲು ಒಪ್ಪಿದರು.
BIGG BREAKING NEWS: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯಗೆ ಕೊಲೆ ಧಮ್ಕಿ: ಪೊಲೀಸರಿಗೆ ದೂರು
ಕಸಿ ಸರ್ಜರಿ ಹಿರಿಯ ಸಲಹೆಗಾರ ಡಾ. ಮಹೇಶ್ ಗೋಪಿಶೆಟ್ಟಿ ಮಾತನಾಡಿ, ಈ ಬಾಲಕ ಲಿವರ್ ಫೇಲ್ಯೂರ್‌ನಿಂದ ಬಳಲುತ್ತಿರುವ ಜೊತೆಗೆ ಅತಿಯಾದ ಉಸಿರಾಟದ ಸಮಸ್ಯೆ ಹೊಂದಿದ್ದನು. ಪ್ರತಿಕ್ಷಣ ಅವನು ಕೃತಕ ಆಮ್ಲಜನಕವಿಲ್ಲದೆ ಉಸಿರಾಡುವುದೇ ಕಷ್ಟವಾಗಿತ್ತು. ನಮ್ಮ ತಂಡ ಶೀಘ್ರವೇ ಕಾರ್ ಯಪ್ರವೃತ್ತಿಯಾಗಿ ಮಗುವಿಗೆ ಲಿವರ್ ಕಸಿ ಮಾಡಲಾಗಿದೆ. ಬಾಲಕನಿಗೆ ಲಿವರ್ ಕಸಿ ಮಾಡುವುದು ಸವಾಲಿನ ಕೆಲಸವೇ ಆಗಿತ್ತು. ಆದರೂ ನಮ್ಮ ಹೆಚ್ಚು ಜಾಗರೂತೆ ವಹಿಸಿ ಯಶಸ್ವಿ ಕಸಿ ಮಾಡಿದ್ದೇವೆ. ಕಸಿ ಮಾಡಿದ ಮೂರು ದಿನಗಳ ನಂತರ ಬಾಲಕ ವೆಂಟಿಲೇಟರ್‌ನಿಂದ ಹೊರ ತೆಗೆಯಲಾಯಿತು. ಇದೀಗ ಬಾಲಕ ಕೃತಕ ಆಮ್ಲಜನಕವಿಲ್ಲದೇ ಉಸಿರಾಡುತ್ತಿದ್ದಾನೆ ಎಂದು ವಿವರಿಸಿದರು.