*ರಂಜಿತ

ಬೆಂಗಳೂರು : ಶಾಲಾ ವರ್ಗಾವಣೆ ಪ್ರಮಾಣಪತ್ರವನ್ನು (TC) ವಿದ್ಯಾರ್ಥಿಗೆ ಮತ್ತೊಂದು ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ವ್ಯಾಸಂಗ ಮಾಡಿದ ಸಂಸ್ಥೆಯಿಂದ ನೀಡಲಾಗುತ್ತದೆ. ಕೆಲವು ಮಂದಿ ತಮ್ಮ ಟಿಸಿಯನ್ನು ಕಳೆದುಕೊಂಡಿರುತ್ತಾರೆ.

ಅಂದ ಹಾಗೇ ವಿದ್ಯಾರ್ಥಿಯ ಜೀವನದಲ್ಲಿ TC ಯ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಆದರೆ ವಿದ್ಯಾರ್ಥಿಯು ತನ್ನ ಟಿಸಿ ಪಡೆದಿದ್ದರೂ ಕಳೆದುಹೋದರೆ, ಅವನು/ಅವಳು ನಕಲು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.
ಹಾಗಾದ್ರೇ ಎರಡನೇ ಟಿಸಿಯನ್ನು ಪಡೆದುಕೊಳ್ಳುವುದು ಹೇಗೆ ಎನ್ನುವುದು ನೋಡುವುದಾದ್ರೆ.

2 ನೇ ವರ್ಗಾವಣಿ ಪ್ರಮಾಣ ಪತ್ರವನ್ನು ಪಡೆಯಲು ಈ ಕೆಳಕಾಣಿಸಿದ ದಾಖಲೆಗಳನ್ನು ಅರ್ಜಿಯ ಜೊತೆ ಅರ್ಜಿದಾರರ ಇಲ್ಲವೇ ವಿದ್ಯಾರ್ಥೀ ಶಾಲೆಗೆ ಕಡ್ಡಾಯವಾಗಿ ಲಗತ್ತಿಸಿ ಕೊಡಬೇಕು.

1) ಟಿ.ಸಿ. ಬೇಡಿಕೆಯ ಅರ್ಜಿಯ ಪ್ರತಿ
2) ಟಿ ಸಿ. ಕಳೆದು ಹೋಗಿರುವ ಬಗ್ಗೆ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು . ದಾಖಲಿಸಿದ ಸ್ವೀಕೃತಿ ಪ್ರತಿ .
3) ಎರಡನೇ ಟಿ.ಸಿ. ಪಡೆಯುವ ಉದ್ದೇಶ ಹಾಗೂ ಮೊದಲನೆಯ ಟಿ .ಸಿ, ಕಳೆದು ಹೋಗಿರುವ ಬಗ್ಗೆ ನೋಟರಿಯಿಂದ ಅಫಿಡವಿಟ್ ಪ್ರತಿ .

4) ಡುಪ್ಲಿಕೇಟ್ 9.ಸಿ. ಪಡೆಯಲು ನಿಗದಿತ ಶುಲ್ಕ ಪಾವತಿಸಿದ ರಸೀದಿ ತರಬೇಕು .
5) ಚಲನ್ ತುಂಬುವ ಸರ್ಕಾರಿ ಖಾತೆ ಸಂಖ್ಯೆ: 0202-01-102-1-01

6) ಚಲನ್ ತುಂಬಬೇಕಾದ ಹಣ 25-00 ರೂಪಾಯಿಗಳು
7) ಶಾಲೆಯ ಡೈಸ್ ಕೋಡ್ ಸಂಖ್ಯೆ

ವಿಶೇಷ ಸೂಚನೆ
• ಟಿಸಿ ಪ್ರತಿಯ ಝರಾಕ್ಸ್ ಪ್ರತಿ ಅಥವಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವುದಕ್ಕೆ ಯಾವುದಾದರು ದಾಖಲೆಗಳು ಇದ್ದರೆ ತರುವುದು ಸೂಕ್ತ .

 

Share.
Exit mobile version