ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮನಸ್ಸಿನ ಅನೇಕಾನೇಕ ಚಟುವಟಿಕೆಗಳಲ್ಲಿ ಒದಾಗಿರುವ ಏಕಾಗ್ರತೆಗೆ ಅದರದೇ ಆದ ವೈಶಿಷ್ಟವಿದೆ. ಏಕಾಗ್ರತೆ ಎನ್ನುವುದು ಬೇರೆಲ್ಲಿಂದಲೋ ತಂದು ಕೊಳ್ಳುವಂಥದ್ದಲ್ಲ ಅದು ನಿಮ್ಮಲ್ಲೇ ಇದ್ದು, ನಿಮ್ಮ ಇಷ್ಟಾನುಗುಣವಾಗಿ ಹೆಚ್ಚು ಕಮ್ಮಿಯಾಗುತ್ತದೆ.

ಯಾವ ವಿದ್ಯಾರ್ಥಿಗಳಿಗೇ ( Students ) ಆಗಲಿ, ತಾನು ಓದಿದ್ದನ್ನು ಅರ್ಥ ಮಾಡಿಕೊಂಡು ನೆನಪಿನಲ್ಲಿರಿಸಿಕೊಳ್ಳಬೇಕೆಂದರೆ ಏಕಾಗ್ರತೆಯಿಂದ ಓದುವುದು ( Reading ) ಅತ್ಯಗತ್ಯ. ಪ್ರತಿಯೊಬ್ಬರಿಗೂ ಮನಸ್ಸಿನಲ್ಲಿ ಹಲವಾರು ರೀತಿಯ ಆಲೋಚನೆಗಳು ಸುಳಿದಾಡುತ್ತಿರುತ್ತವೆ. ಇನ್ನೂ, ಯಾವುದಾದರೊಂದು ಕೆಲಸಕ್ಕೆ ತೊಡಗಿಕೊಂಡಾಗ ಅದಕ್ಕೆ, ಸಂಬಂಧಿಸಿದ ಆಲೋಚನೆಗಳನ್ನಷ್ಟೇ ಮನಸ್ಸಿನಲ್ಲಿ ತುಂಬಿಕೊಂಡು, ಉಳಿದವುಗಳನ್ನು ಹೊರದುಡುವುದು ಸ್ವಾಭಾವಿಕ. ಓದುವಾಗ ಕೂಡ ಅದಕ್ಕೆ ಸಂಬಂಧಿಸಿದ ವಿಚಾರಗಳನ್ನಷ್ಟೆ ಮನಸ್ಸಿನಲ್ಲಿರಿಸಿಕೊಂಡರೆ ಏಕಾಗ್ರತೆ ( Concentration ) ಮೂಡುತ್ತದೆ.

BREAKING NEWS : ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಆರೋಪ : ಜೆಡಿಎಸ್ ನ ಇಬ್ಬರು ಶಾಸಕರಿಗೆ ನೋಟಿಸ್ ಜಾರಿ

ಓದತೊಡಗುವ ಮುನ್ನ, ಆ ವಿಷಯದ ಬಗ್ಗೆ ಏಕಾಗ್ರತೆ ಮೂಡವಂತೆ ಮಾಡಲು ಧೃಢಸಂಕಲ್ಪವಿರಬೇಕಾದುದು ಅಗತ್ಯ “ನಾನು ಚೆನ್ನಾಗಿ ಓದಿ, ಉತ್ತಮ ಅಂಕಗಳನ್ನು ಪಡೆದು ಉನ್ನತ ದರ್ಜೆಯಲ್ಲಿ ಪಾಸಾಗಬೇಕು, ಹಾಗಾದರೆ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ” ಎನ್ನುವಂಥ ಇತ್ಯಾತ್ಮಕ ಆಲೋಚನೆಗಳೊಂದಿಗೆ ಓದಲು ಕುಳಿತುಕೊಂಡರೆ ಮನಸ್ಸು ಅತ್ತಿತ್ತ ಹರಿದಾಡುವುದು ಕಮ್ಮಿಯಾಗುತ್ತದೆ.

ಇನ್ನೂ, ಪ್ರತಿನಿತ್ಯ ಇಷ್ಟು ತಾಸಿನವರೆಗೆ ಓದಲೇಬೇಕು ಏನ್ನುವುದನ್ನು ಕಡ್ಡಾಯವಾಗಿ ರೂಢಿಸಿಕೊಂಡರೆ, ಕೆಲವೇ ದಿನಗಳಲ್ಲಿ ಏಕಾಗ್ರತೆ ಸಿದ್ದಿಸುತ್ತದೆ. ಇಲ್ಲದಿದ್ದರೆ, ಓದಲು ಕುಳಿತ ಪ್ರತಿಸಲವೂ ಏಕಾಗ್ರತೆ ಮೂಡಿಸಿಕೊಳ್ಳಲು ಓದ್ದಾಡಬೇಕಾಗಿರುತ್ತದೆ.

ವಿದ್ಯಾರ್ಥಿಗಳಲ್ಲಿ ಹಗಲುಗನಸು ಕಾಣುವ ಪ್ರವೈತ್ತಿ ಇರುವುದು ಸ್ವಾಭಾವಿಕ. ಇಂಥ ಪ್ರವೈತ್ತಿ ಅಳತೆ ಮೀರಿದರೆ ಓದಿಗೆ ಅಡ್ಡಿಯುಂಟಾಗುತ್ತದೆ. ಆದ್ದರಿಂದ ಇಂಥ ಹಗಲುಗನಸು ಕಾಣುವ ಪ್ರವೈತ್ತಿಯನ್ನು ಸಾಧ್ಯವಾದಷ್ಟು ದೂರವಿಡಲು ಯತ್ನಿಸಬೇಕು. ಓದುವುದು ಕಡ್ಡಾಯ ರೂಢಿಯಾದರೆ ಇಂಥ ಹಗಲುಗನಸ್ಸು ಕಾಣುವ ಪ್ರವೈತ್ತಿ ತನ್ನಿಂತಾನೇ ದೂರವಾಗುದೆನ್ನ ಬಹುದು.

ಈಗ ಅಚ್ಛೇದಿನದ ಅಸಲಿಯೆತ್ತಿನ ಬಗ್ಗೆ ದೊಡ್ಡ ಪ್ರಶ್ನೆಯೇ ಮೂಡಿದೆ – HD ಕುಮಾರಸ್ವಾಮಿ

ಓದಿನ ಬಗ್ಗೆ ಆಸಕ್ತಿ ಇದ್ದಾಗಲೂ ಏಕಾಗ್ರತೆಯಿಂದ ಓದುವುದು ಸಾಧ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಓದಿನ ಬಗ್ಗೆ ಆಸಕ್ತಿ ಬೆಳಸಿಕೊಳ್ಳಬೇಕಾದುದು ಅನಿವಾರ್ಯ. ಓದಲು ಕುಳಿತುಕೊಳ್ಳುವ ಮುನ್ನ ಮನಸ್ಸುನ್ನು ತುಂಬಿಕೊAಡಿರುವ ಇತರ ಆಸಕ್ತಿಗಳನ್ನು ಆತ್ತ ಸರಿಸಬಲ್ಲವರಾಗಿರಬೇಕು.

ಉದಾಹರಣೆಗೆ: ನೀವು ಒಳ್ಳೆಯ ಕಾದಂಬರಿಯೊಂದನ್ನು ಓದುತ್ತಿರುತ್ತೀರಿ ಆಥವಾ ಸಿನಿಮಾದ ಬಗ್ಗೆ ಯಾರೊಂದಿಗೋ ಚರ್ಚೆ ಮಾಡುತ್ತಿರುತ್ತೀರಿ. ಆಗ ಓದಲು ಹೊತ್ತಾಯಿತೆನ್ನುವ ಕಾರಣಕ್ಕೆ ಅಂಥ ಚಟುವಟಿಕೆಗಳನ್ನು ಅರ್ಥಕ್ಕೇ ನಿಲ್ಲಿಸಿ ಓದಲು ಕುಳಿತುಕೊಳ್ಳುತ್ತೀರಿ, ಅಂಥ ಸಂದರ್ಭದಲ್ಲಿ ಅರ್ಥ ಓದಿರುವ ಕಾದಂಬರಿ, ಸಿನಿಮಾ ಚರ್ಚೆಗಳಿಗೆ ಸಂಬಂಧಿಸಿದ ಆಸಕ್ತಿ ಮೇಲುಗೈ ಸಾಧಿಸಿ ಓದಿನ ಬಗೆಗೆ ಏಕಾಗ್ರತೆಗೆ ಅಡ್ಡಿಯಂಟು ಮಾಡುತ್ತಿರುತ್ತದೆ.

ಆದ್ದರಿಂದ ಅಂಥ ಪ್ರಸಂಗಗಳಿದ್ದಲ್ಲಿ, ಮೊದಲು ಅವುಗಳನ್ನು ಕೊನೆಗೊಳಿಸಿಯೇ ಓದಲು ಕುಳಿತು ಕೊಳ್ಳುವುದು ಸೂಕ್ತ. ಪಠ್ಯ ಪುಸ್ತಕ ಕೈಯಲ್ಲಿ ಹಿಡಿದಾಗ ಬೇರೆ ಯಾವುದೇ ಯೋಚನೆಗಳು ನಿಮ್ಮ ಮನಸ್ಸಿನಲ್ಲಿರಕೂಡದು. ಇನ್ನೂ, ತಳಮಳ, ಉದ್ವಿಗ್ನತೆಗಳು ಏಕಾಗ್ರತೆಯನ್ನು ಭಂಗಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಾಮಾನ್ಯವಾಗಿ ಮನೆಯ ವಾತಾವರಣ ಇಂಥ ಭಾವನೆಗಳಿಗೆ ಕಾರಣವಾಗುತ್ತಿರುತ್ತವೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ತಂದೆ-ತಾಯಿಯ ಸಹಕಾರ ಅಗತ್ಯವಿರುತ್ತದೆ. ಮಕ್ಕಳಿಗೆ ಓದಲು ಅನುವಾಗುವಂತಹ ವಾತಾವರಣ ಒದಗಿಸಬೇಕಿರುವುದು ಅವರ ಜವಾಬ್ದಾರಿ. ಮಕ್ಕಳು ಓದಲು ಕುಳಿತು ಕೊಂಡಾಗ ತಂದೆ-ತಾಯಿ ಕಿತ್ತಾಡಿದರೆ, ಬೈದು ಕೂಗಾಡಿದರೆ ಅಥವಾ ‘ಅದು ತಾ ಇದು ತಾ’ ಎಂದು ಮಕ್ಕಳನ್ನು ಓಡಾಡಿಸುತ್ತಿದ್ದರೆ ಓದಿದ್ದು ತಲೆಗೆ ಹತ್ತುವುದೇ ಇಲ್ಲ. ತಮ್ಮ ಮಕ್ಕಳನ್ನು ‘ಓದು ಓದು’ ಎಂದು ಒತ್ತಾಯಿಸುವ ತಂದೆ-ತಾಯಿ ಮೊದಲು ತಾವು ಅವರಿಗೆ ಅನುಕೂಲ ಮಾಡಿಕೊಡಬೇಕೆನ್ನುವುದನ್ನು ಯಾವ ಕಾಲಕ್ಕೂ ಮರೆಯಬಾರದು ಅದು ಅವರ ಕರ್ತವ್ಯ.

ಓದುವಾಗ ದೇಹ-ಮನಸ್ಸುಗಳೆರಡೂ ಚುರುಕಾಗಿರಬೇಕು. ತೀರ ಬಳಲಿದ ಸ್ಥಿತಿಯಲ್ಲಿ ಓದುವುದರಿಂದ ಪ್ರಯೋಜನವಿಲ್ಲ. ಇನ್ನೂ ಕೆಲ ವಿದ್ಯಾರ್ಥಿಗಳತೂ ಪರೀಕ್ಷೆ ಹತ್ತಿರ ಬಂತೆಂದೂ ಹಗಲೂರಾತ್ರಿ ನಿದ್ದೆಗೆಟ್ಟು ಓದತೊಡಗುತ್ತಾರೆ. ಇದು ಒಳ್ಳೆಯದಲ್ಲವೇ ಅಲ್ಲ. ಮನಸ್ಸು ನಿರುಮ್ಮಳವಾಗಿರಬೇಕೆಂದರೆ ನಡು ನಡುವೆ ತುಸು ವಿರಾಮ ಬೇಕೆ ಬೇಕು.

ಉದಾಹರಣೆ: ಒಂದು – ಒಂದೂವರೆ ತಾಸು ಓದಿದ ನಂತರ ನಡುವೆ ಕೆಲ ನಿಮಿಷಗಳ ವಿಶ್ರಾಂತಿ ನೀಡಬೇಕು. ಅದರಂತೆ ಇಡೀ ದಿನದ ಓದಿನಲ್ಲಿ ಏರಡು-ಮೂರು ತಾಸು, ಒಂದು ವಾರದ ಓದಿನಲ್ಲಿ ಒಂದು ದಿನದ ವಿಶ್ರಾಂತಿ, ತಿಂಗಳ ಓದಿನಲ್ಲಿ ನಡು ನಡುವೆ ನಾಲ್ಕೈದು ದಿನಗಳ ವಿಶ್ರಾಂತಿ ಅಗತ್ಯವಿರುತ್ತದೆ. ಇಂಥ ವಿಶ್ರಾಂತಿಯಿಂದ ಮನಸ್ಸು ನಿರಾಳವಾಗಿ ಏಕಾಗ್ರತೆ ಕುದುರುತ್ತದೆ.

ನಿಮ್ಮ ಓದು ಹೇಗಿದೆ?

ನಿಮ್ಮ ಅಧ್ಯಯನ ಯಾವ ರೀತಿಯಲ್ಲಿದೆ ಎನ್ನುವುದನ್ನು ತಿಳಿದು ಕೊಳ್ಳಬೇಕೆನ್ನುವ ಕುತೂಹಲವಿದೆಯೇ? ಹಾಗಿದ್ದರೆ,
ಈ ಕೆಳಗಿನ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸಿ.

1. ನಿಮ್ಮಲ್ಲಿ ಹಾಗಲುಗನಸು ಕಾಣುವ ಪ್ರವೈತಿ ಜಾಸ್ತಿಯೆ? ಹೌದು – ಇಲ್ಲ.
2. ನಿಮ್ಮ ಮನಸ್ಸು ಸದಾ ಯೋಚನೆಗಳಿಂದ ಕಿಕ್ಕಿರಿದಿರುತ್ತದೆ? ಹೌದು – ಇಲ್ಲ.
3. ನಿಮ್ಮಿಂದ ಯೋಚನೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೆ? ಹೌದು – ಇಲ್ಲ.
4. ಪುಸ್ತಕ ಕೈಯಲ್ಲಿ ಹಿಡಿದಾಗ ಸಿನಿಮಾ ನಟಿಯರ ಭಾವ, ಭಂಗಿಗಳು ಕಣ್ಣೆದುರು ಸುಳಿದಾಡಿದಂತಾಗುತ್ತದೆಯೆ? ಹೌದು – ಇಲ್ಲ.
5. ನಿರ್ದಿಷ್ಟ ಪದ್ಧತಿಯಲ್ಲಿ ಓದುವುದು ನಿಮಗೆ ರೂಢಿ ಇಲ್ಲವೆ? ಹೌದು – ಇಲ್ಲ.
6. ನಿಮ್ಮ ಮನೆಯಲ್ಲಿ ಸದಾ ಜಗಳದ ವಾತಾವರಣವಿರುತ್ತದೆಯೇ? ಹೌದು – ಇಲ್ಲ.
7. ನೀವು ಓದಲು ಕುಳಿತಾಗ ನಿಮ್ಮನ್ನು ಯಾವುಯಾವುದೋ ಸಣ್ಣ-ಪುಟ್ಟ ಕೆಲಸಗಳಿಗೋಸ್ಕರ ಓಡಾಡಿಸುವುದುಂಟೆ? ಹೌದು – ಇಲ್ಲ.
8. ನಡುವೆ ವಿರಾಮ ನೀಡದೆ ನಿರಂತರವಾಗಿ ಓದುವುದು ನಿಮ್ಮ ರೂಡಿಯೇ? ಹೌದು – ಇಲ್ಲ.
9. ಪರೀಕ್ಷೆಗಳಿದ್ದಾಗಲ್ಲೂ ಬೇರೆ ಪುಸ್ತಕಗಳನ್ನು ಓದಬೇಕು ಏನಿಸುತ್ತಿರುತ್ತದೆಯೇ? ಹೌದು – ಇಲ್ಲ.
10. ಪಾಸಾಗಿ ಮಾಡುವುದಾದರೂ ಏನಿದೆ ವಂಥ ನಿರ್ಲಕ್ಷ÷್ಯ ಭಾವನೆ ನಿಮ್ಮಲ್ಲಿದೆಯೆ? ಹೌದು – ಇಲ್ಲ.

ಪ್ರಶ್ನೆಗಳೆಲ್ಲವಕ್ಕೂ ಉತ್ತರವನ್ನು ಗುರುತಿಸಿದಿರಲ್ಲವೇ ಈಗ ನಿಮಗೆ ಎಷ್ಟು ‘ಹೌದು’ ಎಷ್ಟು ‘ಇಲ್ಲ’ ಬಂದಿವೆ ಎನ್ನುವುದನ್ನು ನೋಡಿಕೊಳ್ಳಿ.

ನಿಮಗೆ: 1 ರಿಂದ 10 ರಷ್ಟು ‘ಹೌದು’ ಎನ್ನುವ ಉತ್ತರವನ್ನು ಬಂದಿದ್ದರೆ ನಿಮ್ಮ ಓದು ಶೋಚನೀಯ ಸ್ಥಿತಿಯಲ್ಲಿದೆ. ಏಕಾಗ್ರತೆ ಸಾಧಿಸಲು ನೀವು ಸಾಕಷ್ಟು ಪ್ರಯತ್ನಿಸುವುದು ಅಗತ್ಯ.

3 ರಿಂದ 5 ರಷ್ಟು ‘ಹೌದು’ಗಳು ಬಂದಿದ್ದರೆ, ತುಸು ಪ್ರಯತ್ನ ಮಾಡುವುದರಿಂದ ಏಕಾಗ್ರತೆ ಸಾಧಿಸಬಹುದು. 7 ಅಥವಾ ಅದಕ್ಕಿಂತಲೂ ಕಡಿಮೆ ‘ಹೌದು’ಗಳು ಬಂದಿವೆ ಎಂದಾದರೆ, ನಿಮ್ಮ ಅಧ್ಯಯನ ಅನುಕೂಲಸ್ಥಿತಿಯಲ್ಲಿದೆ.

ನೀವು ಓದುವ ವಾತಾವರಣ ಹೇಗಿದೆ?

ಶ್ರದ್ದೆಯಿಂದ ಓದಬೇಕಾದರೆ ಏಕಾಗ್ರತೆ ಅಗತ್ಯ ಏನ್ನುವುದನ್ನು ನೋಡಿದೆವಲ್ಲವೆ? ಅಂಥ ಏಕಾಗ್ರತೆಯನ್ನು ತಂದುಕೊಳ್ಳಲು ಕೆಳಗಿನ ಮೂರು ಅಂಶಗಳು ಅನುಕೂಲಕರವಾಗಿರಬೇಕು.

1. ಓದಲು ಕುಳಿತುಕೊಳ್ಳುವ ಪರಿಸರ, ವಾತಾವರಣ ಅನುಕೂಲಕರವಾದುದಾಗಿರಬೇಕು. ಸದ್ದು, ಗದ್ದಲ, ತೀಕ್ಷ÷್ಣ ಬೆಳಕು ಇತ್ಯಾದಿಗಳಿಲ್ಲದಿದ್ದರೆ ಸೂಕ್ತ.
2. ಮನಸ್ಸಿಗೆ ತಳಮಳ, ತಲ್ಲಣ ತಂದೊಡ್ಡುವಒತ್ತಡಗಳ್ಳಾವುವೂ ಇರಬಾರದು.
3. ಮನಸ್ಸಿನ ಇತರ ಆಲೋಚನೆಗಳ ಕಾಟವಿರಬಾರದು.

ಎಲ್ಲಕ್ಕಿಂತಲೂ ಮುಖ್ಯವಾಗಿ ವಿದ್ಯಾರ್ಥಿ ಓದಿಕೊಳ್ಳಲು ಪ್ರಶಾಂತ ವಾತಾವರಣ ಅಗತ್ಯ ಅಂಥ ಅನುಕೂಲಕರ ವಾತಾವರಣ ಹೇಗಿರಬೇಕೆನ್ನುವುದನ್ನು ನೋಡೋಣ. ಕುಳಿತು ಕೊಳ್ಳುವ ಕುರ್ಚಿ ತೀರ ಸುಖಾಸನವಾಗಿರಬಾರದು. ಹಾಗೆಂದು ಮುಳ್ಳಿನ ಮೆತ್ತೆಯೂ ಆಗಿರಬಾರದು. ತಳಕ್ಕೆ ಕುಶನ್‌ಗಳಂಥವಿರಬಾರದು. ಬೆನ್ನಾನಿಸುವ ಭಾಗ ನೆಟ್ಟಗಿದ್ದು ಕುರ್ಚಿಗೆ ಕೈಯಾಸರೆಗಳಿರಬಾರದು.

ಓದುವ ಸಮಯದಲ್ಲಿ ಚೆನ್ನಾದ ಬೆಳಕು ಬೀಳುವಂತಹ ವ್ಯವಸ್ಥೆ ಇರಬೇಕು. ದೀಪದ ಬೆಳಕು ಮುಖದ ಎದುರಾಗಿ ಕಣ್ಣಿಗೆ ಬಿಳುವಂತಿರಬಾರದು. ಬೆಳಕು ಭುಜದ ಎಡಗಡೆಯಿಂದ ಹಿಂಭಾಗದಿಂದ ಪುಸ್ತಕದ ಮೇಲೆ ಬೀಳುವಂತಿರಬೇಕು. ಇನ್ನು ಕೋಣೆಯ ತಾಪಮಾನ ತೀರ ಬೆಚ್ಚಗಾಗಲಿ, ತೀರ ತಂಪಾಗಿಯಾಗಲಿ ಇರಬಾರದು.

ಕೆಲ ವಿದ್ಯಾರ್ಥಿಗಳಿಗೆ ಓದುತ್ತಿರುವಾಗ ನಡುನಡುವೆ ಗೆಳೆಯರೊಂದಿಗೆ, ಕುಟುಂಬದ ಸದಸ್ಯರೋದಿಗೆ ಮಾತಾಡುವ ಚಟವಿರುತ್ತದೆ. ಈ ಬಗೆಯ ಓದಿನಿಂದ ಸಮಯ ಹಾಳಾಗುತ್ತದಷ್ಟೆ. ಬೇರೇನೊ ಪ್ರಯೋಜನವಿಲ್ಲ. ಹಾಗೆ ಮಾತಾಡಬೇಕೆಂದಿದ್ದರೆ. ಓದುವುದನ್ನು ನಿಲ್ಲಿಸಿ ಮಾತಾಡಬಹುದು ಅಥವಾ ಮಾತಾಡಿ ಮುಗಿಸಿ ಓದಲು ಕುಳಿತುಕೊಳ್ಳುಬಹುದು. ಅದು ಬಿಟ್ಟು ಎರಡನ್ನೂ ಒಟ್ಟೊಟ್ಟಿಗೆ ಮಾಡುತ್ತೇವೆಂದರೆ ಅದು ದಡ್ಡತನ ಅಷ್ಟೆ!

ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ‘ಯೋಗ’ ( Yoga ) ಪ್ರಮುಖ ಪಾತ್ರವಹಿಸುತ್ತದೆ. ಮನಸ್ಸು ಅಡ್ಡದಾರಿ ಹಿಡಿದುದಕ್ಕೆ ಶಿಕ್ಷಿಸುವುದು, ವಿಷಯ ಅರ್ಥವಾಯಿತೋ ಇಲ್ಲವೋ ನೋಡಿಕೊಳ್ಳುವುದು, ಮನನ ಮಾಡಿಕೊಳ್ಳುವುದು. ಮನಸ್ಸು ಚಂಚಲವಾದಲ್ಲಿ ಮತ್ತೆ ಆ ವಿಷಯವನ್ನು ಏಕಾಗ್ರತೆಯಿಂದ ಕಲಿಯಬೇಕಿರುತ್ತದೆ.

ಯೋಗ ಒಂದು ಸಮಗ್ರ ವಿಧಾನವೆಂದು ಬಹುತೇಕ ಜನರು ಒಪ್ಪಿಕೊಳ್ಳುತ್ತಾರೆ. ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು, ದೇಹವನ್ನು ಮನಸ್ಸನ್ನು ಹೇಗೆ ನಿಯಂತ್ರಣದಲ್ಲಿರಿಸಿಕೊಳ್ಳಬೇಕು.

ದೇಹ-ಮನಸ್ಸುಗಳೆರಡಕ್ಕೂ ಆತಂರಿಕ ಸಂಬಂಧವಿದೆ ಅವು ಒಂದನ್ನೊಂದು ಅವಲಂಬಿಸಿರುತ್ತವೆ. ಒಂದರ ಮೇಲೆ ಮತ್ತೊಂದರ ಪ್ರಭಾವ ಸಾಕಷ್ಟಿರುತ್ತದೆ. ಚಂಚಲ ಮನಸ್ಸಿನಿಂದ ನರಳುತ್ತಿರುವ ವ್ಯಕ್ತಿಯ ನಡೆನುಡಿಗೂ ಆತ್ಮ ವಿಶ್ವಾಸದಿಂದಿರುವ ವ್ಯಕ್ತಿಯ ನಡೆ-ನುಡಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಅಂದರೆ ನಮ್ಮ ವೈಖರಿ ದೇಹದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತದೆಂದಾಯ್ತು.

ನಮ್ಮ ಮನಸ್ಸು ಸ್ಥಿರವಾಗಿಲ್ಲದಾಗ ದೇಹದ ಮೇಲೂ ಅದರ ಪ್ರಭಾವ ಕಂಡುಬರುತ್ತದೆ. ಆದ್ದರಿಂದ ಮನಸ್ಸಿಗೆ ಸ್ಥಿರತೆ, ಏಕಾಗ್ರತೆ ರೂಢಿಸಿಬೇಕೆಂದರೆ ಶರೀರವನ್ನು ಕಾಪಾಡಬೇಕಿರುತ್ತದೆ. ದಿನ ನಿತ್ಯ 15-20 ನಿಮಿಷಗಳಂತೆ ಕೆಲ ಕಾಲದವರೆಗೆ ಯೋಗಭ್ಯಾಸ ಮಾಡಿದರೆ, ನಿಮ್ಮ ಏಕಾಗ್ರತೆ ಹೆಚ್ಚುವುದರೊಂದಿಗೆ ಮಾನಸಿಕ ಶಾಂತಿಯೂ ಅನುಭವಕ್ಕೆ ಬರುತ್ತದೆ.

ಲೇಖನ: ತನುಜಾ ಗೌಡ, ಚಿಕ್ಕಬಳ್ಳಾಪುರ

Share.
Exit mobile version