BIG NEWS : ಜನಿವಾರ ಕಾರಣಕ್ಕೆ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗೆ ಮತ್ತೊಮ್ಮೆ ಅವಕಾಶ: ಸಚಿವ ಡಾ.ಎಂ.ಸಿ ಸುಧಾಕರ್

ಬೆಂಗಳೂರು: ಸಿಇಟಿ ಬರೆಯಲು ಬಂದಿದ್ದ ಅಭ್ಯರ್ಥಿಗೆ ಜನಿವಾರ ತೆಗೆಸಿದ ಘಟನೆ ಶಿವಮೊಗ್ಗ, ಬೀದರ್ ನಲ್ಲಿ ವರದಿಯಾಗಿತ್ತು. ಈ ಕಾರಣದಿಂದ ಪರೀಕ್ಷೆ ಬರೆಯದೇ ಅಭ್ಯರ್ಥಿಗಳು ವಾಪಾಸ್ ಆಗಿದ್ದರು. ಈ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಸಿಇಟಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ತಿಳಿಸಿದ್ದಾರೆ. ಲೋಪಗಳಾಗದಂತೆ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡಲಾಗಿತ್ತು. ಆದರೆ, ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಯದ ಕಾರಣ ಪರೀಕ್ಷೆಗೆ ಅನುಮತಿ ನೀಡದಿರುವುದು ಖಂಡನೀಯ. ಎಲ್ಲಾ ಸಂಪ್ರದಾಯಗಳನ್ನು ನಾವು ಗೌರವಿಸಬೇಕು ಎಂದಿದ್ದಾರೆ. … Continue reading BIG NEWS : ಜನಿವಾರ ಕಾರಣಕ್ಕೆ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗೆ ಮತ್ತೊಮ್ಮೆ ಅವಕಾಶ: ಸಚಿವ ಡಾ.ಎಂ.ಸಿ ಸುಧಾಕರ್