ಸುಭಾಷಿತ :

Monday, February 17 , 2020 4:21 AM

ಐ ಆಮ್ ಸಾರಿ, ನಾನು ಬೋರ್ಡ್ ಹಿಡಿದಿದ್ದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ – ನಳಿನಿ ಸ್ಪಷ್ಟನೆ


Saturday, January 11th, 2020 6:42 pm

ಮೈಸೂರು : ನನ್ನಿಂದ ತಪ್ಪಾಗಿದೆ. ನಾನು free kashmir ಪೋಸ್ಟರ್ ಹಿಡಿದಿದ್ದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ನಳಿನಿ ಸ್ಪಷ್ಟಪಡಿಸಿದ್ದಾರೆ.

ಕಳೆದ ಭಾನುವಾರ ಜೆಎನ್ ಯು ನಲ್ಲಿ ನಡೆದಿದ್ದ ಹಿಂಸಾಚಾರ ವಿರೋಧಿಸಿ ಜ.8ರಂದು ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ, ಈ ವೇಳೆ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್​ Free Kashmir ಎಂಬ ಫಲಕವನ್ನು ಹಿಡಿದಿದ್ದು ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿತ್ತು. ಅಲ್ಲದೆ, ಆಕೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಡಗಳು ವ್ಯಕ್ತವಾಗಿದ್ದವು.

ಈ ಮಧ್ಯೆ, ಜಯಲಕ್ಷ್ಮೀಪುರಂ ಠಾಣೆಯ ಪೊಲೀಸರು ನಳಿನಿ ಅವರನ್ನು ಇಂದು ವಿಚಾರಣೆಗೆ ಗುರಿಪಡಿಸಿದರು. ಸತತ ಏಳು ಗಂಟೆಯ ವಿಚಾರಣೆ ವೇಳೆ ಪೊಲೀಸರು 80 ಪ್ರಶ್ನೆಗಳನ್ನು ಕೇಳಿದ್ದು, ನಳಿನಿ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮೌಖಿಕವಾಗಿ ಹೇಳಿದ ಎಲ್ಲ ಉತ್ತರಗಳನ್ನು ಪೊಲೀಸರು ಲಿಖಿತ ರೂಪದಲ್ಲಿ ದಾಖಲಿಸಿಕೊಂಡಿದ್ದಾರೆ.

ಇನ್ನು ವಿಚಾರಣೆ ಬಳಿಕ ಮಾತನಾಡಿದ ನಳಿನಿ, ಐ ಆಮ್ ಸಾರಿ, ನನಗೆ ವಿವಾದ ಸೃಷ್ಠಿಸುವ ಉದ್ದೇಶ ಇರಲಿಲ್ಲ. ಯಾವುದೇ ದುರುದ್ದೇಶದಿಂದಲೂ ಬೋರ್ಡ್ ಹಿಡಿದಿರಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದಂತೆ ಹಿಡಿದಿದ್ದೆ. ದಯವಿಟ್ಟು ನನ್ನ ಮಾತನ್ನು ನಂಬಿ ಎಂದು ಹೇಳಿದರು…

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions