ಸುಭಾಷಿತ :

Saturday, February 22 , 2020 8:54 AM

‘ಕಾಗೆ’ ಕೂಗಿದ್ರೆ ‘ನೆಂಟ್ರು’ ಬರ್ತಾರೆ ಅಂತ ಹೇಳೊದು ಯಾಕಂತೆ ಗೊತ್ತಾ…?


Sunday, January 5th, 2020 9:31 pm

ಸ್ಪೆಷಲ್ ಡೆಸ್ಕ್ : ಮನೆ ಬದಿ ಏನಾದರೂ ಕಾಗೆ ಕೂಗುತ್ತಿದ್ದರೆ…ಹೋ ಇವತ್ತು ನೆಂಟರು ಬರುತ್ತಾರೆ ಎಂದು ಹಿರಿಯರು ಹೇಳುವುದು ನೀವು ಕೇಳಿರಬಹುದು…ಹಂಗಾದ್ರೆ ಕಾಗೆ ಕೂಗಿದ ಕೂಡಲೇ ನೆಂಟರು ಬರ್ತಾರಾ…ಏನಿದು ನಂಬಿಕೆ…? ಹಿಂದಿನ ಈ ಸಂಪ್ರದಾಯದ ಬಗ್ಗೆ ಇಂದಿಗೂ ಏನಾದರೂ ಅಚ್ಚರಿಯ ಸತ್ಯ ಇದೆಯಾ..?

ಹೌದು, ಹಳ್ಳಿಗಳಲ್ಲಿ ಮನೆ ಮೇಲೆ ಮರದ ಮೇಲೆ ಕುಳಿತು ಕಾಗೆ ಕೂಗಿತು ಎಂದರೆ ನೆಂಟರು ಬರ್ತಾರೆ ಎಂದು ಹೇಳುತ್ತಾರೆ. ಅದು ಕೂಡ ಸುಮ್ನೆ ಅಲ್ಲ, ಅದರ ಹಿಂದಿದೆ ಬಲವಾದ ಕಾರಣ.

ಹಿಂದೆ ಸಂದೇಶ ಕಳುಹಿಸಲು ಮೊಬೈಲ್. ಲೆಟರ್ ಯಾವುದೂ ಕೂಡ ಇರಲಿಲ್ಲ, ಹೀಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂದೇ ಕಳುಹಿಸಲು ಪಕ್ಷಿಗಳನ್ನು ಅವಲಂಬಿಸಲಾಗಿತ್ತು. ಒಂದು ಊರಿನ ಪಕ್ಷಿಗಳು ಮತ್ತೊಂದು ಊರಿಗೆ ಸಂದೇಶ ಹೊತ್ತು ಹೋಗುತ್ತಿದ್ದವು,  ಆದ್ರೆ ಕಾಗೆಗಳು ಮಾತ್ರ ತಮ್ಮ ಜಾಗಕ್ಕೆ ಬೇರೆ ಪಕ್ಷಿಗಳು ಬಂದ್ರೆ ಜೋರಾಗಿ ಕೂಗುತ್ತಿದ್ದವು, ಅದೇ ತೆರನಾಗಿ ಬೇರೆ ಊರಿನ ಪಕ್ಷಿಗಳು ಸಂದೇಶ ಹೊತ್ತು ಬಂದಾಗಲೂ ಕಾಗೆಗಳು ಕೂಗುತ್ತಿದ್ದವಂತೆ, ಜನ ಇದರಿಂದಲೇ ನಮಗೆ ಸಂದೇಶ ಬಂದಿದೆ ಎಂದು ಗೆಸ್ ಮಾಡುತ್ತಿದ್ದರಂತೆ, ಆ ಸಂಪ್ರದಾಯವೇ ಮುಂದುವರೆದಿದ್ದು, ಕಾಗೆ ಕೂಗಿದ್ರೆ ನೆಂಟರು ಬರ್ತಾರೆ ಎಂದು ಈಗಲೂ ಕೂಡ ಹಿರಿಯರು ಹೇಳುತ್ತಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions