ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಹೊಸ ಆದ್ಯತಾ ಪಡಿತರ ಚೀಟಿಯನ್ನು  ( New Ration Card ) ಕೋರಿ ಅರ್ಜಿಯನ್ನು ಸಲ್ಲಿಸಿರುವಂತ ಅರ್ಜಿಗಳಲ್ಲಿ 1.55 ಲಕ್ಷ ಅರ್ಜಿಗಳನ್ನು ಮಾನ್ಯಗೊಳಿಸಲಾಗಿದೆ. ಹೀಗೆ ಹೊಸ ಆದ್ಯತಾ ಪಡಿತರ ಚೀಟಿ ಸಲ್ಲಿಸಿದವರಿಗೆ ಪಡಿತರ ಚೀಟಿಗಳನ್ನು ವಿತರಿಸಲು ಸರ್ಕಾರ ಆದೇಶಿಸಿದೆ.

BIGG NEWS: ಚಾಮರಾಜನಗರದಲ್ಲಿ ಜೀಪ್‌ನಿಂದ ಬಿದ್ದು ಸಾವು ಪ್ರಕರಣ: ಮೂವರು ಪೊಲೀಸರ ವಿರುದ್ಧ FIR

ಈ ಕುರಿತಂತೆ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಎಲ್ಲಾ ಜಿಲ್ಲಾಧಿಕಾರಿಗಳಿ ಸೂಚಿಸಿರುವಂತ ಪ್ರತಿ ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದೆ. ಅದರಲ್ಲಿ ರಾಜ್ಯದಲ್ಲಿ ಹೊಸದಾಗಿ ಆದ್ಯತಾ ಪಡಿತರ ಚೀಟಿ ಕೋರಿ ದಿನಾಂಕ 25-08-2022ರವರೆಗೆ 2,73,662 ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ 1,55,927 ಅರ್ಹ ಕುಟುಂಬಗಳಿಗೆ ಹೊಸ ಆದ್ಯತಾ ಪಡಿತರ ಚೀಟಿ ನೀಡುವ ಬಗ್ಗೆ ಜಿಲ್ಲೆಗಳಲ್ಲಿ ವರದಿ ಪಡೆದುಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ ಎಂದಿದೆ.

BREAKING NEWS: ರಾಜ್ಯ ಸರ್ಕಾರದಿಂದ ‘ಅರಣ್ಯ ರಕ್ಷಕ’ರನ್ನು ‘ಗಸ್ತು ಅರಣ್ಯ ಪಾಲಕ’ರೆಂದು ಪುನರ್ ಪದನಾಮೀಕರಿಸಿ ಆದೇಶ

ಹೊಸದಾಗಿ ಆದ್ಯತಾ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವಂತ 2,73,662 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಅದ್ಯಾತಾ ಪಡಿತರ ಚೀಟಿಯನ್ನು ಹೊಂದಲು ಅರ್ಹರಿರುವ ಒಟ್ಟು 1,55,927 ಅರ್ಜಿದಾರರಿಗೆ ಹೊಸ ಆದ್ಯತಾ ಪಡಿತರ ಚೀಟಿಯನ್ನು ವಿತರಿಸಲು ಆದೇಶಿಸಿದೆ.

ವರದಿ: ವಸಂತ ಬಿ ಈಶ್ವರಗೆರೆ

SHOCKING NEWS: ಪೋಷಕರ ಮುಂದೆಯೇ 8 ವರ್ಷದ ಬಾಲಕನನ್ನು ತಿಂದು ತೇಗಿದ ಮೊಸಳೆ

Share.
Exit mobile version