* ಲೀಲಾವತಿ ವಸಂತ ಬಿ ಈಶ್ವರಗೆರೆ
ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ( BBMP Election ) ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದ ಬೆನ್ನಲ್ಲೇ, ಚುನಾವಣೆ ತಯಾರಿಯನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮಾಡಿಕೊಳ್ಳುತ್ತಿವೆ. ಈ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರದಿಂದ ಬಿಬಿಎಂಪಿಯ ವಾರ್ಡ್ ಗಳನ್ನು ಮರು ವಿಂಗಡನೆಗೊಳಿಸಿ, 243ಕ್ಕೆ ಏರಿಕೆ ಮಾಡಿ ಅಧಿಕೃತವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.
BIG NEWS: ಒಂದೇ ದಿನದಲ್ಲಿ ‘ಬಿಬಿಎಂಪಿ ಡಾಂಬಾರ್ ರಸ್ತೆ’ ಹಾಳಾದ ಬಗ್ಗೆ ತನಿಖೆಗೆ ‘ಸಿಎಂ ಬೊಮ್ಮಾಯಿ’ ಆದೇಶ
ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಶೇಷ ರಾಜ್ಯಪತ್ರ ಹೊರಡಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೌನ್ಸಿಲ್ ಗಳ ಸಂಖ್ಯೆಯನ್ನು 243 ಎಂದು ನಿಗದಿಪಡಿಸಲಾಗಿದೆ. ಮುಂದುವರೆದು ಬಿಬಿಎಂಪಿಯ ವಾರ್ಡ್ ಗಳ ಪುನ್ ವಿಂಗಡಣಾ ಸಮಿತಿಯ ವರದಿಯ ಅನುಸಾರ, 243ಕ್ಕೆ ಏರಿಸಲಾಗಿದೆ ಎಂದಿದ್ದಾರೆ.
ಇನ್ನೂ ಬಿಬಿಎಂಪಿಯ ವಾರ್ಡ್ ಗಳ ಸಂಖ್ಯೆ ಏರಿಕೆ, ವಾರ್ಡ್ ಗಳ ಪುನರ್ ವಿಂಗಡಣೆ ಸಂಬಂಧ ಯಾವುದೇ ಆಕ್ಷೇಪಣೆ, ಸಲಹೆಗಳನ್ನು ಸಲ್ಲಿಸುವವರು, ಲಿಖಿತ ರೂಪದಲ್ಲಿ, ಸೂಕ್ತ ಕಾರಣ, ದಾಖಲೆಗಳೊಂದಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸಸೌಧ, ಬೆಂಗಳೂರು-560001ಕ್ಕೆ ಈ ದಿನಾಂಕದಿಂದ 15 ದಿನಗಳ ಒಳಗಾಗಿ ಸಲ್ಲಿಸುವಂತೆ ಸೂಚಿಸಿದ್ದಾರೆ.