ಬೆಂಗಳೂರು: ರಾಜ್ಯ ಸರ್ಕಾರದಿಂದ ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಕಾರಣದಿಂದಾಗಿಯೇ ಕಾಂಪೌಂಡ್ ನಿರ್ಮಾಣ ಮಾಡೋದಕ್ಕೆ ಅನುದಾನ ಮಂಜೂರು ಮಾಡಿ ಆದೇಶಿಸಿದೆ.

ಈ ಕುರಿತಂತೆ ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಕರ್ನಾಟಕ ರಾಜ್ಯದ ವಕ್ಸ್ ಆಸ್ತಿಗಳಾದ ಖಬರಸ್ಥಾನ್, ಈದಾದ ಜಾಗಗಳನ್ನು ಅಕ್ರಮ ಒತ್ತುವರಿ, ಅನಧಿಕೃತ ಸ್ವಾಧೀನ ಮತ್ತು ವಿವಾದಗಳಿಂದ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ತಡೆಯಲು ಆಸ್ತಿಗಳ ಸುತ್ತ ಬೇಲಿ, ಗೋಡೆಯನ್ನು ಹಾಕುವುದು ಅವಶ್ಯಕವಾಗಿರುವುದರಿಂದ, ಅದನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ಕೆಲವು ನಿಬಂಧನೆಗಳನ್ನು ರೂಪಿಸಿ ಆದೇಶ ಹೊರಡಿಸಲಾಗಿರುತ್ತದೆ ಎಂದಿದ್ದಾರೆ.

ರಾಜ್ಯದ ವಿವಿಧ ವಕ್ಸ್ ಆಸ್ತಿಗಳ ಸಂರಕ್ಷಣೆಗಾಗಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡುವಂತೆ ಕೋರಿ ಪ್ರಸ್ತಾವನೆಗಳು ಸ್ವೀಕೃತವಾಗಿರುತ್ತವೆ. ಸದರಿ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಕೆಳಕಂಡಂತೆ ಆದೇಶಿಸಿದೆ ಎಂದು ಹೇಳಿದ್ದಾರೆ.

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಈ ಆದೇಶದ ಅನುಬಂಧದಲ್ಲಿ ನಮೂದಿಸಿರುವಂತೆ ರಾಜ್ಯದ ಒಟ್ಟು 416 ವಕ್ಸ್ ಆಸ್ತಿಗಳ ಸಂರಕ್ಷಣೆಗಾಗಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು ಒಟ್ಟು ರೂ.3184.50ಲಕ್ಷಗಳ (ಮೂವತ್ತೊಂದು ಕೋಟಿ ಎಂಭತ್ತತನಾಲ್ಕು ಅನುದಾನವನ್ನು ಈ ಕೆಳಕಂಡ
ಲಕ್ಷ ಐವತ್ತುಸಾವಿರ ರೂಪಾಯಿಗಳು ಮಾತ್ರ) ಷರತ್ತಿಗೊಳಪಟ್ಟು ಮಂಜೂರು ಮಾಡಿ ಆದೇಶಿಸಿದೆ.

ಷರತ್ತುಗಳು

1. ಸದರಿ ವೆಚ್ಚವನ್ನು 2023-24ನೇ ಸಾಲಿನ ಕರ್ನಾಟಕ ರಾಜ್ಯ ವಕ್ಸ್ ಆಸ್ತಿಗಳ ಸಂರಕ್ಷಣೆ ಯೋಜನೆ ಅಡಿಯಲ್ಲಿ ಲೆಕ್ಕಶೀರ್ಷಿಕೆ: 2225-04-102-0-03(059) ರಲ್ಲಿ ಹಂಚಿಕೆ ಮಾಡಿರುವ ಅನುದಾನದಲ್ಲಿ ಪ್ರಸಕ್ತ ಸಾಲಿಗೆ ಶೇ.50 ರಷ್ಟನ್ನು ಬಿಡುಗಡೆ ಮಾಡತಕ್ಕದ್ದು.
2. ಕರ್ನಾಟಕ ರಾಜ್ಯ ವಕ್ಸ್ ಮಂಡಳಿಯು ಗ್ರಾಂಟ್-ಇನ್-ಏಡ್ ನಲ್ಲಿರುವ ಸೂಚನೆಗಳನ್ನು ವಕ್ಸ್ ಸಂಸ್ಥೆಗಳಿಗೆ ಹಣ ಬಿಡುಗಡೆಗೊಳಿಸುವ ಮುನ್ನ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

3. ಸದರಿ ವಕ್ಸ್ ಆಸ್ತಿಗಳು ಕರ್ನಾಟಕ ರಾಜ್ಯ ವಕ್ಸ್ ಮಂಡಳಿಯಲ್ಲಿ ನೋಂದಣಿಯಾಗಿರುವ ಬಗ್ಗೆ ವಿವರಗಳನ್ನು ಪಡೆದು ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಗ್ರಾಂಟ್-ಇನ್-ಏಡ್ ನಿಯಮಗಳ ಪ್ರಕಾರ ಅನುದಾನ ಮಂಜೂರು ಮಾಡಲು ಅರ್ಹರಿರುವ ಬಗ್ಗೆ ದೃಢಪಡಿಕೊಂಡ ನಂತರ ಅನುದಾನವನ್ನು ಬಿಡುಗಡೆ ಮಾಡತಕ್ಕದ್ದು.
4. ಕಾಮಗಾರಿಯ ಯೋಜನೆ ಹಾಗೂ ನೀಲಿ ನಕ್ಷೆಯ ಮೇಲೆ ಅಭಿಯಂತರರ ಸಹಿ ಇರುವ ಬಗ್ಗೆ, ವಕ್ಸ್ ಅಧಿಕಾರಿ/ವಕ್ಸ್ ನಿರೀಕ್ಷಕರಿಂದ ದೃಢೀಕರಿಸತಕ್ಕದ್ದು
5. ಸಂಸ್ಥೆಗಳ ಹಿಂದಿನ ಸಾಲಿನ ಲೆಕ್ಕಪರಿಶೋಧನೆ ಬಗ್ಗೆ ಪರೀಶೀಲಿಸಿ ಅನುದಾನ ಬಿಡುಗಡೆ ಮಾಡತಕ್ಕದ್ದು.
6. ವಕ್ಸ್ ಸಂಸ್ಥೆಯಿಂದ Indemnity Bond ಪಡೆದಿರುವ ಬಗ್ಗೆ ಖಚಿತಪಡಿಸಿಕೊಂಡು ಅನುದಾನ ಬಿಡುಗಡೆ ಮಾಡತಕ್ಕದ್ದು,
7. ಸಂಸ್ಥೆಯ ವ್ಯವಸ್ಥಾಪಕ ಸಮಿತಿಗೆ ಕರ್ನಾಟಕ ರಾಜ್ಯ ವಕ್ಸ್ ಮಂಡಳಿಯಿಂದ ಅನುಮೋದನೆ ಪಡೆದಿರುವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು.
8. ಸಂಸ್ಥೆಯ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು ಅನುದಾನ ಬಿಡುಗಡೆ ಮಾಡತಕ್ಕದ್ದು.
9. ಮೊದಲನೇ ಕಂತಿನಲ್ಲಿ ಶೇ.50ರಷ್ಟು ಅನುದಾನವನ್ನು ಮಾತ್ರ ಬಿಡುಗಡೆ ಮಾಡತಕ್ಕದ್ದು. ತದನಂತರ ಕಾಮಗಾರಿಯ ಪ್ರಗತಿಯನ್ನು ಕಡ್ಡಾಯವಾಗಿ ಪರಿಶೀಲಿಸಿ, ಮೊದಲನೇ ಕಂತಿನಲ್ಲಿ ಬಿಡುಗಡೆಯಾದ ಅನುದಾನಕ್ಕೆ ಹಣ ಬಳಕೆ ಪಮಾಣ ಪತ್ರವನ್ನು ಪಡೆದ ನಂತರ ಮುಂದಿನ ಆರ್ಥಿಕ ವರ್ಷದಲ್ಲಿ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡತಕ್ಕದ್ದು.
10. ಸದರಿ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಬಿಡುಗಡೆಗೊಳಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಬಳಸತಕ್ಕದ್ದು.
ಈ ಆದೇಶವನ್ನು ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 01 ಟಿಎಫ್‌ಪಿ 2024 ದಿನಾಂಕ: 05-02-2024 ರಲ್ಲಿ ಸರ್ಕಾರದ ಕಾರ್ಯದರ್ಶಿಗಳಿಗೆ ಪುತ್ಯಾಯೋಜಿಸಿರುವ ಅಧಿಕಾರದನ್ವಯ ಹೊರಡಿಸಲಾಗಿದೆ.

‘ಬಿಜೆಪಿ ಅಂದರೆ ‘ಸುಳ್ಳಿನ ಫ್ಯಾಕ್ಟರಿ’- ಸಚಿವ ಎಂ.ಬಿ ಪಾಟೀಲ್ ವಾಗ್ಧಾಳಿ

ಇನ್ಮುಂದೆ ಸರ್ಕಾರಿ ಕಚೇರಿಯಲ್ಲಿ ‘ಬಸವಣ್ಣ’ನ ಭಾವಚಿತ್ರ ಹಾಕುವುದು ಕಡ್ಡಾಯ – ರಾಜ್ಯ ಸರ್ಕಾರ ಆದೇಶ

Share.
Exit mobile version