ಬೆಂಗಳೂರು : 2024-25 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೌಚಾಲಯ ಮತ್ತು ಇತರೆ ನಿರ್ವಹಣೆಗಾಗಿ ರಾಜ್ಯ ಸರ್ಕಾರವು ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2024-25 ನೇ ಸಾಲಿನ ಆಯವ್ಯಯದಲ್ಲಿ ಘೋಷಿತವಾದಂತೆ ಉಲ್ಲೇಖಿತ ಸರ್ಕಾರದ ಆದೇಶ (1) ಮತ್ತು (2) ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೌಚಾಲಯ ಮತ್ತು ಇತರೆ ನಿರ್ವಹಣೆಗಾಗಿ , F:2202-01-053-0-020 (059) ಹಾಗೂ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿಯಲ್ಲಿ ಬರುವ ಉಪ ಶೀರ್ಷಿಕೆ-(422)(423) ರಲ್ಲಿ ನಿಗದಿಯಾದ ಅನುದಾನದಲ್ಲಿ ಈ ಕೆಳಕಂಡಂತೆ ಶಾಲೆಗಳಿಗೆ ಘಟಕ ವೆಚ್ಚ ಮತ್ತು ಅನುದಾನವನ್ನು ನಿಗದಿಪಡಿಸಲಾಗಿದೆ.

ಆರ್ಥಿಕ ಇಲಾಖೆಯು ಉಲ್ಲೇಖ(3)ರಲ್ಲಿ ಶಾಲಾ ಸೌಲಭ್ಯಗಳ ನಿರ್ವಹಣೆಗೆ ಒದಗಿಸಲಾದ ಅನುದಾನವನ್ನು ಸಿ.ಟಿ.ಎಸ್-8 ಮುಖಾಂತರ ಸೆಳೆದು ಸಂಬಂಧಿಸಿದ ಶಾಲೆಗಳ ಎಸ್.ಡಿ.ಎಂ.ಸಿ. ಖಾತೆಗೆ. ವರ್ಗಾಯಿಸಲು ಈ ಕೆಳಕಂಡ 3 ಷರತ್ತು ವಿಧಿಸಿ ಅನುಮತಿಸಿದೆ.

ಪ್ರಾಥಮಿಕ ಶಾಲೆಗಳು ಮತ್ತು ಕೆ.ಕೆ.ಜಿ.ಬಿ.ವಿ. ಮುಂತಾದ DDO ಇಲ್ಲದಿರುವ ಶಾಲೆಗಳಲ್ಲಿ ಅನುದಾನವನ್ನು ಸೆಳೆದು SDMC ಬ್ಯಾಂಕ್ ಖಾತೆಯಲ್ಲಿಟ್ಟು ನಿರ್ವಹಿಸುವುದು.

ಪ್ರೌಢಶಾಲೆಗಳು ಮತ್ತು ಕೆ.ಪಿ.ಎಸ್. ಶಾಲೆಗಳಲ್ಲಿ, DDO ರವರು ಇರುವುದರಿಂದ ಡಿ.ಸಿ. ಬಿಲ್ಲಿನ ಮೂಲಕ ಖಜಾನೆಯಲ್ಲಿ ಪ್ರತಿಯೊಂದು ವೆಚ್ಚವನ್ನು ಭರಿಸಬಹುದಾಗಿದೆ.

SDMC ಬ್ಯಾಂಕ್ ಖಾತೆಗಳಿಗೆ ಠೇವಣಿ ಮಾಡಿದ ಹಣವನ್ನು ಅಯಾ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿ.ಇ.ಓ.) ಮೇಲ್ವಿಚಾರಣೆ ಮಾಡುವುದು.

ಮುಂದುವರೆದು ಸದರಿ ಯೋಜನೆಯ ಅನುಷ್ಠಾನಕ್ಕೆ ಉಲ್ಲೇಖ(1) ಮತ್ತು (2)ರನ್ವಯ ಬಿಡುಗಡೆಯಾದ ಅನುದಾನದಲ್ಲಿ ರೂ 1515.00ಲಕ್ಷಗಳ ಅನುದಾನ ಮೊದಲ ತ್ರೈಮಾಸಿಕ ಅವಧಿಗೆ ಲಭ್ಯವಿರುತ್ತದೆ. ಪ್ರೌಢಶಾಲೆಗಳಿಗೆ ಸಂಬಂಧಿಸಿದ ಅನುದಾನವನ್ನು ಉಪನಿರ್ದೇಶಕರು (ಆ) ರವರುಗಳಿಗೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದ ಅನುದಾನವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಕೆಳಕಂಡ ಆದೇಶದಂತೆ ಬಿಡುಗಡೆ ಮಾಡಲಾಗಿದೆ.

ಆದೇಶ:-

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2024-25ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೌಚಾಲಯ ಮತ್ತು ಶಾಲೆಯ ಇತರೆ ನಿರ್ವಹಣೆಗೆ ಖರ್ಚು ಭರಿಸಲು ‘ಶಾಲಾ ಕಟ್ಟಡಗಳ ನಿರ್ವಹಣೆ’ ಲೆಕ್ಕ ಶೀರ್ಷಿಕೆ:2202-01-053-0-02ರ (059) ಅಡಿಯಲ್ಲಿ ಹಾಗೂ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿಯಲ್ಲಿ ಬರುವ ಉಪ ಶೀರ್ಷಿಕೆ-(422)(423) ರಲ್ಲಿ ಪ್ರಥಮ ತ್ರೈಮಾಸಿಕ ಅನುದಾನ ರೂ 1515.00 ಲಕ್ಷಗಳನ್ನು 2023-24ನೇ ಸಾಲಿನ ಸ್ಯಾಟ್ಸ್‌ನಲ್ಲಿ ಇರುವಂತೆ ಶಾಲೆಗಳ ಸಂಖ್ಯೆಗನುಗುಣವಾಗಿ ಅನುಬಂಧಗಳಂತೆ ಜಿಲ್ಲಾವಾರು ಮತ್ತು ತಾಲ್ಲೂಕುವಾರು ಅನುದಾನ ಹಂಚಿಕೆ ಮಾಡಿ ರಾಜ್ಯದ ಎಲ್ಲಾ ಉಪನಿರ್ದೇಶಕರು (ಆ) ರವರುಗಳಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.

1. ಸರ್ಕಾರಿ ಪ್ರೌಢಶಾಲೆಗಳಿಗೆ ಸಂಬಂಧಿಸಿದ ಅನುದಾನವನ್ನು ರಾಜ್ಯದ ಎಲ್ಲಾ ಉಪನಿರ್ದೇಶಕರು (ಆ) ರವರಿಗೆ ಕೆ-2ನಲ್ಲಿ ಬಿಡುಗಡೆ ಮಾಡಲಾಗಿದೆ. ಅನುಬಂಧಗಳಂತೆ ಅನುದಾನವನ್ನು ಸಂಬಂಧಿಸಿದ ಪ್ರೌಢಶಾಲೆಗಳಿಗೆ ಕೆ-2ನಲ್ಲಿ U-Modeನಲ್ಲಿ ತಮ್ಮ ಜಿಲ್ಲಾ ಸರ್ಕಾರಿ ಪ್ರೌಢಶಾಲೆಗಳಿಗೆ ಕೆ-2 ಖಾತೆಗಳಿಗೆ ಬಿಡುಗಡೆಗೊಳಿಸುವುದು ಹಾಗೂ ಪ್ರೌಢಶಾಲಾ ಮುಖ್ಯ, ಶಿಕ್ಷಕರು ಅನುದಾನವನ್ನು ಬಿಲ್ ಸಿದ್ಧಪಡಿಸಿ ಖಜಾನೆಯಿಂದ ಅನುದಾನವನ್ನು ಸೆಳೆಯುವುದು ಮತ್ತು ಶಾಲಾ ನಿರ್ವಹಣೆಗೆ ಖರ್ಚನ್ನು ನಿಯಮಾನುಸಾರ ಭರಿಸುವುದು.

2. ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದ ಅನುದಾನವನ್ನು ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೆ-2 ನಲ್ಲಿ U-Mode ನಲ್ಲಿ ಬಿಡುಗಡೆ ಮಾಡಲಾಗಿದೆ ಅನುಬಂಧಗಳಂತೆ ಅನುದಾನವನ್ನು ಸಂಬಂಧಿಸಿದ ಪ್ರಾಥಮಿಕ ಶಾಲೆಗಳಿಗೆ ಕೆ-2ನಲ್ಲಿ ಬಿಲ್ ಸಿದ್ಧಪಡಿಸಿ ಖಜಾನೆಯಿಂದ ಅನುದಾನವನ್ನು ಸಳೆದು ಸಂಬಂಧಿಸಿದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ/ಎಸ್.ಡಿ.ಎಂ.ಸಿ ಅಧ್ಯಕ್ಷರ ಜಂಟಿ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡುವುದು ಮತ್ತು ಆಯಾ ಮುಖ್ಯ ಶಿಕ್ಷಕರು ಶಾಲಾ ನಿರ್ವಹಣೆಗೆ ಸಂಬಂಧಿಸಿದ ಖರ್ಚನ್ನು ನಿಯಮಾನುಸಾರ ಭರಿಸುವುದು ಅಥವಾ ನಿರ್ವಹಣಾ ವೆಚ್ಚದ ಸಾಮಗ್ರಿಗಳನ್ನು ಪೂರೈಕೆ ಮಾಡಿದ ಮತ್ತು ನಿರ್ವಹಣಾ ಸೇವೆಯನ್ನು ಪಡೆದ ಬಗ್ಗೆ ಸಂಬಂಧಿತ ವೋಚರ್‌ಗಳನ್ನು ಮುಖ್ಯೋಪಾಧ್ಯಾಯರುಗಳಿಂದ ಪಡೆದು Supplier and Service provider ಗೆ ನೇರವಾಗಿ ಪಾವತಿಸಲು ಸಹ ಅನುಮತಿಸಿದೆ.

3. ಬಿಡುಗಡೆ ಮಾಡಲಾದ ಅನುದಾನವನ್ನು ಶಾಲೆಗಳಲ್ಲಿ ಶೌಚಾಲಯಗಳ ಮತ್ತು ಇತರೇ ಶಾಲಾ ನಿರ್ವಹಣೆಗೆ ವಾರ್ಷಿಕ ನಿರ್ವಹಣೆಯ ಉದ್ಧೇಶಕ್ಕಾಗಿ ಮಾತ್ರ ನಿಯಮಾನುಸಾರ ಭರಿಸತಕ್ಕದ್ದು.

4 . ಶೂನ್ಯ ದಾಖಲಾತಿ ಹೊಂದಿದ ಶಾಲೆಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿರುವುದಿಲ್ಲ.

5. 1 ರಿಂದ 3 ರವರೆಗಿನ ಅನುಬಂಧದಲ್ಲಿ ಅನುದಾನ ಬಿಡುಗಡೆಯ ಘಟಕ ವೆಚ್ಚದ ಪ್ರಮಾಣವನ್ನು ನಮೂದಿಸಲಾಗಿದ್ದು ಅದರಂತೆ ತಮ್ಮ ಶಾಲೆಗಳಿಗನುಗುಣವಾಗಿ ಅನುದಾನ ಬಿಡುಗಡೆಗೆ ಕ್ರಮವಹಿಸುವುದು. ಶಾಲೆಯ ದಾಖಲಾತಿ ಪ್ರಮಾಣವನ್ನು ಹಿಂದಿನ ಸಾಲಿನ ಸ್ಮಾಟ್ಸ್ ದಾಖಲಾತಿ ಆಧರಿಸಿ ಅನುದಾನ ಬಿಡುಗಡೆ ಮಾಡಲಾಗಿದೆ ಆದ್ದರಿಂದ ಹಿಂದಿನ ಸಾಲಿನ ಸ್ಮಾಟ್ಸ್ ದಾಖಲಾತಿ ಆಧರಿಸಿಯೇ ಅನುದಾನವನ್ನು ಶಾಲೆಗಳಿಗೆ ಬಿಡುಗಡೆ ಮಾಡುವುದು.

6. ಸಂಬಂಧಪಟ್ಟ ಜಿಲ್ಲಾ ಆಡಳಿತ ಉಪನಿರ್ದೇಶಕರು ನಿರಂತರವಾಗಿ ಅನುಪಾಲನೆಯಲ್ಲಿದ್ದು ಅನುದಾನ ಸೆಳೆಯಲು ಅಗತ್ಯ ಕ್ರಮಕೈಗೊಳ್ಳುವುದು.

 

Share.
Exit mobile version