ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಾಕರ ಅರ್ಹತಾ ಪರೀಕ್ಷೆ ( K-SET ) ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( KEA) ಮೂಲಕ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ಯುಜಿಸಿಯಿಂದ ಕರ್ನಾಟಕ ರಾಜ್ಯದ ಪರವಾಗಿ 3 ಕೆ-ಸೆಟ್ ಪರೀಕ್ಷೆಗಳನ್ನು ನಡೆಸಲು ಮೈಸೂರು ವಿಶ್ವವಿದ್ಯಾಲಯಕ್ಕೆ ಮಾನ್ಯತೆಯನ್ನು ನೀಡಲು ನಿರ್ಧರಿಸಿ, 41 ವಿಷಯಗಳಲ್ಲಿ ದಿನಾಂಕ 14-01-2020ರಿಂದ 03 ವರ್ಷಗಳವರೆಗೆ ಪ್ರತಿ ಒಂದು ವರ್ಷಕ್ಕೆ ಒಂದು ಬಾರಿಗೆ ಕೆ-ಸೆಟ್ ಪರೀಕ್ಷೆಯನ್ನು ನಡೆಸಲು ಮಾನ್ಯತೆ ನೀಡಿರುತ್ತದೆ ಎಂದಿದ್ದಾರೆ.

ದೆಹಲಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಮಗುವಿನ ಅಪಹರಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

2022ನೇ ಶೈಕ್ಷಣಿಕ ಸಾಲಿನಲ್ಲಿ ಆಯಾ ರಾಜ್ಯ ಸರ್ಕಾರಗಳು ಗುರುತಿಸಿರುವ ರಾಜ್ಯ ನೋಡೆಲ್ ಏಜೆನ್ಸಿಗಳಿಗೆ ಯುಜಿಸಿಯಿಂದ ಮಾನ್ಯತೆ ಅಗತ್ಯವಿರುವ ಕೆ ಎಸ್ ಪರೀಕ್ಷೆಯನ್ನು ನಡೆಸಲು ಮೈಸೂರು ವಿವಿಗೆ ಅನುಮತಿ ನೀಡಿರುತ್ತದೆ ಎಂದು ಹೇಳಿದ್ದಾರೆ.

ಜುಲೈ-2021ರಲ್ಲಿ ಮೈಸೂರು ವಿವಿಯಿಂದ ನಡೆದಂತ ಕೆ-ಸೆಟ್ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂದು, ಪರೀಕ್ಷೆಯ ಸಂಯೋಜಕರು ಹಾಗೂ ಇತರರು ಸಂಪೂರ್ಣ ಹೊಣೆಗಾರರೆಂದು ದೂರುಗಳು ಬಂದಿದ್ದವು. ಈ ಹಿನ್ನಲೆಯಲ್ಲಿ ಕೆ-ಸೆಟ್ ಪರೀಕ್ಷೆಯನ್ನು ಸ್ವತಂತ್ರ ಸಂಸ್ಥೆ ನಡೆಸುವುದು ಸೂಕ್ತವೆಂದು ಮನಗಂಡು, ಕೆಇಎ ಮೂಲಕ ನಡೆಸು ತೀರ್ಮಾನಿಸಿದೆ.

BIGG NEWS: ನಾವು ಯಾರು ಧಮ್ಕಿ ಹಾಕಿಲ್ಲ, ನ್ಯಾಯಯುತ ಬೇಡಿಕೆ ಇಟ್ಟಿದ್ದೇವೆ: ಬಸನಗೌಡ ಪಾಟೀಲ್ ಯತ್ನಾಳ್​

ಈ ಹಿನ್ನಲೆಯಲ್ಲಿ ಯುಜಿಸಿಯಿಂದ ಮಾನ್ಯತೆ ಅಗತ್ಯವಿರುವ ರಾಜ್ಯ ಅರ್ಹತಾ ಪರೀಕ್ಷೆಯನ್ನು ನಡೆಸಲು ಯುಜಿಸಿಯ ಪರಿಕಲ್ಪನೆ ಮತ್ತು ವ್ಯಾಪ್ತಿಯಡಿ ರಾಜ್ಯ ಸರ್ಕಾರವು ಒಂದು ಏಜೆನ್ಸಿಯನ್ನು ಗುರುತಿಸಬಹುದು. ಅದು ವಿಶ್ವವಿದ್ಯಾನಿಯವಾಗಿರಬಹುದು ಅಥವಾ ಪ್ರತಿಷ್ಠಿತ ಪರೀಕ್ಷಾ ಸಂಸ್ಥೆ ಅಥವಾ ಉನ್ನತ ಶಿಕ್ಷಣಕ್ಕಾಗಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸದ ಪ್ರತಿಷ್ಠಿತ ಸಂಸ್ಧೆಯಾಗಿರಬಹುದೆಂಬ ಅವಕಾಶದಡಿ 2022ನೇ ಸಾಲನ್ನು ಒಳಗೊಂಡಂತೆ ಮುಂದಿನ ಆದೇಶದವರೆಗೆ ಕೆ-ಸೆಟ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ದ ಮೂಲಕ ನಡೆಸುವಂತೆ ಆದೇಶಿಸಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ

Share.
Exit mobile version