ಗುವಾಹಟಿ : ಸಾಮಾಜಿಕ ಜಾಲತಾಣಗಳ ಆಗಮನದಿಂದ ವಿರಾಟ್ ಕೊಹ್ಲಿ ಅತ್ಯಂತ ಬೇಡಿಕೆಯ ಕ್ರಿಕೆಟಿಗರಾಗಿದ್ದಾರೆ. ಕ್ರಿಕೆಟ್ ಜಗತ್ತಿನ ಶ್ರೀಮಂತ ಆಟಗಾರನಾಗಿರುವ ಕೊಹ್ಲಿ ಸೋಷಿಯಲ್ ಮೀಡಿಯಾದಿಂದಲೇ ಕೋಟಿ ಕೋಟಿ ಹಣ ಗಳಿಸುತ್ತಾರೆ.

ಹೌದು,  ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತೀಯ ಅಥ್ಲೀಟ್ ಆಗಿರುವ ಕೊಹ್ಲಿ, ತಾವು ಮಾಡುವ ಪ್ರತಿ ಇನ್ಸ್ಟಾಗ್ರಾಮ್ ಪೋಸ್ಟ್ಗೆ 1.088,000 ಯುಎಸ್ಡಿ – ಅಂದರೆ ಸುಮಾರು 8.9 ಕೋಟಿ ರೂಪಾಯಿ. ಭಾರತದ ಮಾಜಿ ನಾಯಕ 200,703,169 ಅನುಯಾಯಿಗಳನ್ನ ಹೊಂದಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್ ಮೆಸ್ಸಿ ಮತ್ತು ನೇಮರ್ ಜೂನಿಯರ್ ಈ ಪಟ್ಟಿಯಲ್ಲಿ ಅವರ  ನಂತರದ ಮೂವರು ಕ್ರೀಡಾ ತಾರೆಗಳಾಗಿದ್ದಾರೆ.

ಇನ್ಸ್ಟಾಗ್ರಾಮ್‍ನಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ 14ನೇ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿ ಅಗ್ರ 15 ಹೆಸರುಗಳಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಕೊಹ್ಲಿ.

ವಿರಾಟ್ ಕೊಹ್ಲಿ ಪ್ರತಿ ತಿಂಗಳು ಇನ್ ಸ್ಟಾಗ್ರಾಂ ನಲ್ಲಿ ಕನಿಷ್ಟ 20 ಪೋಸ್ಡ್ ಮಾಡುತ್ತಾರೆ. ಅದರಲ್ಲಿ ಸ್ಪಾನ್ಸರ್ ಪೋಸ್ಟರ್ ಗಳ ಮೂಲಕವೇ , ಪ್ರತಿ ತಿಂಗಳು 25 ರಿಂದ 30 ಕೋಟಿವರೆಗೂ ಸಂಪಾದನೆ ಮಾಡುತ್ತಿದ್ದಾರೆ.  ಇನ್ನೂ, ಟ್ವಿಟರ್ ನಲ್ಲಿ 50 ಕೋಟಿ ಫಾಲೋವರ್ಸ್ ಹೊಂದಿರುವ ಏಕೈಕ ಕ್ರಿಕೆಟರ್ ಕೊಹ್ಲಿ ಒಂದು ಸ್ಪಾನ್ಸರ್ ಪೋಸ್ಟ್ ಗೆ 3.5 ಕೋಟಿ ಪಡೆಯುತ್ತಾರೆ.

ಹಲವು ಪ್ರತಿಷ್ಟಿತ ಕಂಪನಿಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಕೊಹ್ಲಿ ಜಾಹೀರಾತು ಮೂಲಕವೇ ಕೋಟಿ ಕೋಟಿ ಹಣ ಗಳಿಸತ್ತಾರೆ.  ಹೀಗೆ ಎಲ್ಲಾ ಮೂಲಗಳಿಂದ ಪ್ರತಿ ವರ್ಷ ಸಾವಿರ ಕೋಟಿಗೂ ಅಧಿಕ ಹಣ ಗಳಿಸುತ್ತಾರೆ. ಈ ಮೂಲಕ ವಿಶ್ವದ ಕ್ರಿಕೆಟ್ ನ ನಂ.1 ಆಟಗಾರ ಎನಿಸಿಕೊಂಡಿದ್ದಾರೆ.

BREAKING NEWS : ಬೀದರ್ ಜಿಲ್ಲೆಯಲ್ಲಿ ‘ಲಘು ಭೂಕಂಪನ’ : ಬೆಚ್ಚಿಬಿದ್ದ ಜನತೆ |Earthquake In Bidar

ಪ್ರವಾಸಿಗರೇ ಗಮನಿಸಿ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್‌ ಸಂಚಾರ ಬಂದ್‌

Share.
Exit mobile version