ಹಾವೇರಿ: ಎಸ್.ಎಸ್.ಎಲ್.ಸಿ.ಪೂರಕ ಪರೀಕ್ಷೆಯು ( SSLC supplementary exam ) ಇದೇ 2022ರ ಜೂನ್ 27 ರಿಂದ ಜುಲೈ 04ವರೆಗೆ ಜಿಲ್ಲೆಯ 12 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪಾರದರ್ಶಕ ಹಾಗೂ ಸುಗಮ ಪರೀಕ್ಷೆಗಾಗಿ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.
BIG BREAKING NEWS: ‘ಬಿಬಿಎಂಪಿ ವಾರ್ಡ್’ಗಳನ್ನು 243ಕ್ಕೆ ಏರಿಕೆ ಮಾಡಿ ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ
ಬ್ಯಾಡಗಿ ಎಸ್.ಜೆ.ಜೆ.ಎಂ. ಕೆಪಿಎಸ್, ಹಾನಗಲ್‍ನ ಎನ್.ಸಿ.ಜೆ.ಸಿ.ಪದವಿ ಪೂರ್ವ ಕಾಲೇಜು ಹಾಗೂ ಅಂಜುಮನ್ ಪ್ರೌಢಶಾಲೆ, ಹಾವೇರಿ ನಗರದ ಮುನ್ಸಿಪಲ್ ಪ್ರೌಢಶಾಲೆ, ಸೇಂಟ್ ಆನ್ಸ್ ಪ್ರೌಢಶಾಲೆ, ಜ್ಞಾನಗಂಗಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹಿರೇಕೆರೂರಿನ ಡಿ.ಆರ್.ತಂಬಾಕದ ಪ್ರೌಢಶಾಲೆ, ರಾಣೇಬೆನ್ನೂರಿನ ಶ್ರೀ ಸಿದ್ದೇಶ್ವರ ರೂರಲ್ ರೆಸಿಡೆನ್ಸಿಯಲ್ ಸೆಂಡರಿ ಸ್ಕೂಲ್, ಅಂಜುಮನ್ ಎ ಇಸ್ಲಾಂ ಆಂಗ್ಲ ಉರ್ದು ಪ್ರೌಢಶಾಲೆ, ಸವಣೂರಿನ ಮಜೀದ್ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ ಶಿಗ್ಗಾಂವಿನ ಜೆ.ಎಂ.ಜೆ.ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗಳು ಜರುಗಲಿದೆ.
ಈ ಶಾಲೆಗಳ ಸುತ್ತಲಿನ200 ಮೀಟರ್ ಪ್ರದೇಶವನ್ನು ಭಾರತೀಯ ದಂಡ ಪ್ರಕ್ರಿಯೆ 1973 ಕಲಂ 144ರ ಅನ್ವಯ ನಿಬರ್ಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ದಿನದಂದು ನಿರ್ಬಂದಿತ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿ ಹಾಗೂ ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಝರಾಕ್ಸ್ ಸೆಂಟರ್ ಹಾಗೂ ಟೈಪಿಂಗ್ ಸೆಂಟರ್‍ಗಳನ್ನು ಮುಚ್ಚಲು ಆದೇಶಿಸಲಾಗಿದೆ.ಮೊಬೈಲ್ ಫೋನ್‍ಗಳನ್ನು ನಿಷೇಧಿಸಲಾಗಿದೆ.