ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿರುವಂತ ವಿದ್ಯಾರ್ಥಿಗಳು ಫಲಿತಾಂಶ ಯಾವಾಗ ಅನ್ನೋ ತೀವ್ರ ಕುತೂಹಲದಲ್ಲಿ ಇದ್ದೀರಿ. ಪರೀಕ್ಷೆ ಮುಗಿದ ಬೆನ್ನಲ್ಲೇ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ಕೂಡ ನಡೆಸಲಾಗುತ್ತಿದೆ. ಇನ್ನೇನು ಫಲಿತಾಂಶ ಪ್ರಕಟಿಸೋದು ಮಾತ್ರವೇ ಬಾಕಿ ಉಳಿದಿದೆ. ಹಾಗಾದ್ರೆ ಯಾವಾಗ ಫಲಿತಾಂಶ ಪ್ರಕಟವಾಗಲಿದೆ ಅನ್ನೋ ಬಗ್ಗೆ ಬಿಗ್ ಅಪ್ ಡೇಟ್ ಮುಂದೆ ಓದಿ.

ಪ್ರಸಕ್ತ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಮೇ 10ರಂದು ಪ್ರಕಟವಾಗುವ ನಿರೀಕ್ಷೆಯಿದೆ. ಫಲಿತಾಂಶ ಪ್ರಕಟಿಸಲು ಇಲಾಖೆ ಎಲ್ಲಾ ರೀತಿಯ ಸಿದ್ಧತೆಗಳನ್ನು ತೆಗೆದುಕೊಂಡಿದ್ದು ಎಲ್ಲವೂ ಮೇ 10ರಂದು ಫಲಿತಾಂಶ ಹೊರಬೀಳಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

2024ನೇ ಸಾಲಿನ ಎಸ್ ಎಸ್ ಎಲ್ಲಿ ಪರೀಕ್ಷೆಯಲ್ಲಿ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 4.41 ಲಕ್ಷ ಬಾಲಕರು 4.28 ಲಕ್ಷ ಬಾಲಕಿಯರು. ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು 41,375 ಮರು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ.

Share.
Exit mobile version