ನವದೆಹಲಿ: ಸ್ಟಾಫ್ ಸೆಲೆಕ್ಷನ್ ಕಮಿಷನ್ ( Staff Selection Commission -SSC ) ಈ ವರ್ಷದ ಅಂತ್ಯದ ವೇಳೆಗೆ 42,000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಅಲ್ಲದೆ, ಮುಂದಿನ ಕೆಲವು ತಿಂಗಳುಗಳಲ್ಲಿ 15,247 ಹುದ್ದೆಗಳಿಗೆ ನೇಮಕಾತಿ ಪತ್ರಗಳನ್ನು ನೀಡಲಾಗುವುದು. ಇದನ್ನು ಭಾನುವಾರ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಟ್ವಿಟರ್ ಹ್ಯಾಂಡಲ್ನಲ್ಲಿ ಪ್ರಕಟಿಸಲಾಗಿದೆ.
ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಪೋಷಕರಿಂದ ಪ್ರಧಾನಿ ಮೋದಿ ಭೇಟಿ, ಕುಟುಂಬಸ್ಥರಿಗೆ ಸಾಂತ್ವಾನ
ಈ ಸಂಬಂಧ ಪಿಐಬಿ ಪೋಸ್ಟ್ನಲ್ಲಿ, “42,000 ಹುದ್ದೆಗಳ ನೇಮಕಾತಿಯನ್ನು ಡಿಸೆಂಬರ್ 2022 ರೊಳಗೆ ಪೂರ್ಣಗೊಳಿಸಲಾಗುವುದು. ಇದಲ್ಲದೆ, ಎಸ್ಎಸ್ಸಿ 67 ಸಾವಿರದ 768 ಹುದ್ದೆಗಳನ್ನು ಮುಂಬರುವ ಪರೀಕ್ಷೆಯ ಮೂಲಕ ಆದಷ್ಟು ಬೇಗ ಭರ್ತಿ ಮಾಡಲು ಯೋಜಿಸಿದೆ.
More employment opportunities in Government of India as #SSC to soon complete process for issuance of appointment letters for 15,247 posts; letters to be issued by different departments in the next couple of months.
1/n
— PIB India (@PIB_India) June 19, 2022
ಮುಂದಿನ ಕೆಲವು ತಿಂಗಳುಗಳಲ್ಲಿ ನೀಡಲಿರುವ 15,247 ನೇಮಕಾತಿ ಪತ್ರಗಳ ಬಗ್ಗೆ ಮಾತನಾಡಿದ ಎಸ್ಎಸ್ಸಿ, ಅವುಗಳನ್ನು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ನೀಡಲಾಗುವುದು ಎಂದು ಹೇಳಿದರು.