ಸುಭಾಷಿತ :

Monday, March 30 , 2020 1:02 AM

‘ಶ್ರೀರಾಮುಲು’ ಪುತ್ರಿ ಮದುವೆಗೆ ಪ್ರಧಾನಿ ಮೋದಿಯಿಂದ ಬಂತು ‘ಶುಭಾಶಯ ಪತ್ರ’..!


Friday, February 21st, 2020 9:15 pm

ನವದೆಹಲಿ : ಮಾರ್ಚ್ 5ರಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಪುತ್ರಿ ರಕ್ಷಿತಾ ಮದುವೆ ನಡೆಯಲಿದ್ದು, ಪುತ್ರಿಯ ವಿವಾಹಕ್ಕೆ, ಸಚಿವ ಶ್ರೀರಾಮುಲು ಸಂಸತ್ತಿನ ಪ್ರಧಾನಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಪುತ್ರಿಯ ವಿವಾಹಕ್ಕೆ ಆಹ್ವಾನ ನೀಡಿದ್ದರು.

ಈ ಹಿನ್ನೆಲೆ ಶ್ರೀರಾಮುಲು ಅವರ ಪುತ್ರಿ ರಕ್ಷಿತಾ ಅವರ ವಿವಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

ನಿಮ್ಮ ಮಗಳ ಮದುವೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು, ಮದುವೆಯಲ್ಲಿ ಸಂಭ್ರಮ, ಸಂತೋಷ ಮನೆ ಮಾಡಿದೆ, ಮದುವೆಯಾಗುತ್ತಿರುವ ನವ ವಧು ವರರು ತಮ್ಮ ಜೀವನದ ಅತ್ಯಂತ ಪ್ರಮುಖ ಘಟ್ಟವನ್ನು ಆರಂಭಿಸುತ್ತಿದ್ದಾರೆ. ಈ ಪ್ರಯಾಣ ಸಂತೋಷದಿಂದ ಮುಂದುವರಿಯಲೆಂದು ಪ್ರಾರ್ಥಿಸುತ್ತಿದ್ದೇನೆ ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ, ನವ ಜೀವನಕ್ಕೆ ಕಾಲಿಡುತ್ತಿರುವ ವಧು ವರರಿಗೆ ಹಾಗೂ ಸ್ನೇಹಿತರು ಪ್ರೀತಿ ಪಾತ್ರರಿಗೆಲ್ಲಾ ಮೋದಿಯವರು ಶುಭಾಶಯ ಕೋರಿದ್ದಾರೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions