ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಆಟವಾಡುತ್ತಿದ್ದ ಬಾಲಕ ಎಲ್ಲರ ಕಣ್ಣೆದುರೇ ಇದ್ದಕ್ಕಿದ್ದಂತೆ ಮಾಯವಾಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಒಂದು ಕ್ಷಣ ಎಲ್ಲರನ್ನು ಚಕಿತಗೊಳಿಸಿದೆ.
ಮಲೇಷ್ಯಾದ ಜೋಹರ್‌ನಲ್ಲಿರುವ ಫನ್ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಜಾತ್ರಾಮಹೋತ್ಸವದ ವೇಳೆ ಫೇರ್‌ಗ್ರೌಂಡ್ ರೈಡ್‌ನಲ್ಲಿ ನೂರ್ ಆಫ್ರಿನಾ ರೋಸ್ನಿ ಎಂಬ ಮಹಿಳೆಯೊಬ್ಬರು ತನ್ನ ಐದು ವರ್ಷದ ಮುಯಿಜ್ ಜಫ್ರಾನ್‌ನನ್ನು ಮತ್ತೊಬ್ಬ ಹುಡುಗನ ಜೊತೆ ಕೂರಿಸುತ್ತಾಳೆ. ನಂತರ ಮಗ ಸವಾರಿಯನ್ನು ಆನಂದಿಸುತ್ತಿರುವುದನ್ನು ಚಿತ್ರೀಕರಣ ಮಾಡುತ್ತಿದ್ದಳು. ಈ ವೇಳೆ ಆ ಹುಡುಗ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾನೆ.
ಹೌದು, ಈ ವಿಡಿಯೋದಲ್ಲಿ, ಮೊದಲ ರೌಂಡ್‌ನಲ್ಲಿ ಇಬ್ಬರು ಬಾಲಕರೂ ಒಟ್ಟಿಗೆ ಕೂತಿರುವುದನ್ನು ನೋಡಬಹುದು. ಆದ್ರೆ, ಮತ್ತೊಂದು ರೌಂಡ್ ಬರುವಷ್ಟರಲ್ಲಿ ಆಕೆಯ ಮಗ ಮಾತ್ರ ಅಲ್ಲಿರುತ್ತಾನೆ. ಮತ್ತೊಬ್ಬ ಬಾಲಕ ಕಣ್ಮರೆಯಾಗುವುದನ್ನು ತೋರಿಸುತ್ತದೆ.
Disappearing boy on fairground ride has everyone baffled – can you work out what’s going on? pic.twitter.com/PK1gWLrPuQ
— The Sun (@TheSun) June 10, 2022
ನೂರ್ ಟಿಕ್‌ಟಾಕ್‌ನಲ್ಲಿ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. “ನನ್ನ ಕಣ್ಣುಗಳನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ರೈಡ್‌ನಲ್ಲಿ ಕೂರಲು ಸೀಟುಗಳು ಚಿಕ್ಕದ್ದಾಗಿದ್ದವು. ಹೀಗಾಗಿ ನಾನು ನನ್ನ ಪತಿ ತನ್ನ ಮಗನ ಜೊತೆ ಹೋಗಲು ಸಾಧ್ಯವಾಗಲಿಲ್ಲ. ಅವನ್ನು ಬೇರೊಂದು ಹುಡುಗನ ಜೊತೆ ಕೂರಿಸಿ ಬಂದೆವು. ಮೊದಲ ಸುತ್ತಿನ ರೈಡ್‌ನಲ್ಲಿ ಇಬ್ಬರೂ ಒಟ್ಟಿಗೆ ಇದ್ದರು. ನಂತ್ರ 2ನೇ ಸುತ್ತಿನಲ್ಲಿ ಆ ಹುಡುಗ ಕಣ್ಮರೆಯಾದನು. ಅಲ್ಲಿ ಏನಾಯಿತು ಎಂಬುದು ನಮಗೆ ತಿಳಿಯಲೇ ಇಲ್ಲ” ಎಂದು ಹೇಳಿದ್ದಾರೆ.
ಗ್ರಾಹಕರಿಗೆ ಗುಡ್‌ನ್ಯೂಸ್ : ಅಡುಗೆ ಎಣ್ಣೆ ಲೀಟರ್‌ಗೆ 20 ರೂ ಇಳಿಕೆ!… ಹೊಸ ದರ ಈಗ ಎಷ್ಟಿದೆ ಗೊತ್ತಾ?