ನವದೆಹಲಿ: ನಿನ್ನೆ ಚೀನಾಕ್ಕೆ ಹಾರುತ್ತಿದ್ದ ಸ್ಪೈಸ್‌ಜೆಟ್ ಸರಕು ಸಾಗಣೆ ವಿಮಾನದಲ್ಲಿ ಹವಾಮಾನ ರಾಡಾರ್ ದೋಷ ಕಂಡ ಬಂದಿ ಹಿನ್ನೆಲೆಯಲ್ಲಿ ಕೋಲ್ಕತ್ತಾಗೆ ಹಿಂತಿರುಗಿದೆ ಎಂದು ಮೂಲಗಳು ತಿಳಿಸಿವೆ. ದೋಷಪೂರಿತ ಘಟಕದ ದುರಸ್ತಿ ನಂತರ, ವಿಮಾನವು ಮತ್ತೆ ಟೇಕ್ ಆಫ್ ಆಗಿದೆ ಎಂದು ತಿಳಿದುಬಂದಿದೆ.

ಸ್ಪೈಸ್‌ಜೆಟ್ ಸೇರಿದ ವಿಮಾನದಲ್ಲಿ ಒಂದು ದಿನದಲ್ಲಿ ಮೂರನೇ ಬಾರಿ ದೋಷ ಕಂಡು ಬಂದಿದೆ ಎನ್ನಲಾಗುತ್ತಿದೆ.

ಕಳೆದ ಕೆಲ ದಿನಗಳಿಂದ ಸ್ಪೈಸ್‌ಜೆಟ್‌ ಸಂಸ್ಥೆಯ ವಿಮಾನಗಳಲ್ಲಿ ಸಮಸ್ಯೆಗಳು ಕಂಡು ಬರುತ್ತಿವೆ. ಕಳೆದ ಮೂರು ವಾರಗಳಲ್ಲಿ ಎಂಟು ಅಸಮರ್ಪಕ ಘಟನೆಗಳನ್ನು ವರದಿ ಮಾಡಿದೆ. ಆದರೆ ಘಟನೆಗಳಲ್ಲಿ ಯಾವುದೂ ಸಿಬ್ಬಂದಿ ಅಥವಾ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ.

ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾನೆ, ಸ್ಪೈಸ್‌ಜೆಟ್ ವಿಮಾನವು ಪಾಕಿಸ್ತಾನದ ಕರಾಚಿಯಲ್ಲಿರುವ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು. ಪೈಲಟ್‌ಗಳು ಇಂಧನ ಸೋರಿಕೆಯನ್ನು ಶಂಕಿಸಿದ್ದಾರೆ. ಸುಮಾರು 11 ಗಂಟೆಗಳ ಕಾಲ ಕಾದ ನಂತರ 138 ಪ್ರಯಾಣಿಕರು ಅಂತಿಮವಾಗಿ ಮೂಲಕ ಭಾರತದಿಂದ ಕಳುಹಿಸಲಾದ ಪರ್ಯಾಯ ವಿಮಾನದ ಮೂಲಕ ಕಳುಹಿಸಿಕೊಡಲಾಯಿತು.

Share.
Exit mobile version