ಕೊಳ್ಳೇಗಾಲದ ಶ್ರೀ ರಾಮಮಂದಿರದಲ್ಲಿ ರಥಸಪ್ತಮಿ ದಿನ ವಿಶೇಷ ಪೂಜೆ

ಬೆಂಗಳೂರು: ರಥ ಸಪ್ತಮಿ ದಿನವಾದ ಫೆಬ್ರವರಿ 16ರಂದು ಕೊಳ್ಳೆಗಾಲದ ಶ್ರೀರಾಮ ದೇವಸ್ಥಾನದಲ್ಲಿ ರಥೋತ್ಸವ ನಡೆಯಿತು. ಜನಪ್ರಿಯ ಉದ್ಯಮಿ ಸುನಿತಾ ತಿಮ್ಮೇಗೌಡ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸುನಿತಾ ಅವರ ತಾಯಿ ದಿ. ಸಾವಿತ್ರಮ್ಮ ತಿಮ್ಮೇಗೌಡ ಅವರ ಜನ್ಮದಿನದ ಅಂಗವಾಗಿ ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮವನ್ನೂ ನೆರವೇರಿಸಲಾಯಿತು. ಹಲವಾರು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನಜನಿತರಾಗಿದ್ದ ಸಾವಿತ್ರಮ್ಮ ಅವರ ಸೇವೆಗಳನ್ನು ಸ್ಮರಿಸಲಾಯಿತು. ಶ್ರೀರಾಮ ದೇವಸ್ಥಾನದಲ್ಲಿ ನಡೆದ ರಥೋತ್ಸವ ಸಂದರ್ಭದಲ್ಲಿ ಸಾವಿತ್ರಮ್ಮ ಅವರ ಭಾವಚಿತ್ರವನ್ನಿಟ್ಟು ಪುಷ್ಪಾರ್ಚನೆ ಮಾಡಲಾಯಿತು ಹಾಗೂ … Continue reading ಕೊಳ್ಳೇಗಾಲದ ಶ್ರೀ ರಾಮಮಂದಿರದಲ್ಲಿ ರಥಸಪ್ತಮಿ ದಿನ ವಿಶೇಷ ಪೂಜೆ