ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ( Police Department ) ಖಾಲಿ ಇದ್ದಂತ ವಿಶೇಷ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ( Karnataka Police Sub Inspector Recruitment ) ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಯ ಆಯ್ಕೆಗಾಗಿ ನಡೆದಂತ ದೈಹಿಕ ಪರೀಕ್ಷೆಯ ನಂತ್ರ, ಲಿಖಿತ ಪರೀಕ್ಷೆಗಾಗಿ ಅರ್ಹರಾದಂತ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಲ್ಲದೇ ಲಿಖಿತ ಪರೀಕ್ಷೆಗೆ ದಿನಾಂಕವನ್ನು ಕೂಡ ಪ್ರಕಟಿಸಲಾಗಿದೆ.

ದತ್ತಜಯಂತಿ ಗೆ ಅಡ್ಡಿಪಡಿಸುವ ಹುನ್ನಾರ : ರಸ್ತೆಯುದ್ದಕ್ಕೂ ‘ಮೊಳೆ’ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು |Datta Jayanthi

ಈ ಕುರಿತಂತೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ( Karnataka Police Department ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಕೆ ಎಸ್ ಆರ್ ಪಿ ಮತ್ತು ಐ ಆರ್ ಬಿಯಲ್ಲಿ ಖಾಲಿ ಇದ್ದಂತ ವಿಶೇಷ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ನ 70 ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳನ್ನು ದಿನಾಂಕ 18-12-2022 ರಂದು ಬೆಳಿಗ್ಗೆ 11 ಗಂಟೆಯಿಂದ 12 ಗಂಟೆಗೆ ಪತ್ರಿಕೆ-1, ಮಧ್ಯಾಹ್ನ 2 ರಿಂದ 3.30ರವರೆಗೆ ಪತ್ರಿಕೆ-2ನ್ನು ಬೆಂಗಳೂರು ಸೇರಿದಂತೆ 12 ಕೇಂದ್ರಗಳಲ್ಲಿ ನಡೆಸಲಾಗುತ್ತದೆ ಎಂದಿದೆ.

BIG NEWS: ‘ಕ್ರೀಡಾಪಟುಗಳ ನೇರ ನೇಮಕಾತಿ’ಗೆ ಮುಂದಿನ ‘ಸಂಪುಟ ಸಭೆ’ಯಲ್ಲಿ ಅನುಮೋದನೆ – ಸಿಎಂ ಬೊಮ್ಮಾಯಿ ಘೋಷಣೆ

ಇನ್ನೂ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗೆ ಅರ್ಹರಿರುವಂತ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್ ಸೈಟ್ http://ksp-recruitment.in ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಪರಿಶೀಲಿಸಿ, ಲಿಖಿತ ಪರೀಕ್ಷೆಗೆ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಂಡು, ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿದೆ.

BIGG NEWS: ರಾಜ್ಯದಲ್ಲಿ ಸಿದ್ದರಾಮಯ್ಯಗೆ ಯಾವ ಕ್ಷೇತ್ರವೇ ಇಲ್ಲದಂತಾಗಿದೆ; ಕೆ.ಎಸ್.ಈಶ್ವರಪ್ಪ ವ್ಯಂಗ್ಯ

Share.
Exit mobile version