ಬೆಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರಲ್ಲಿ ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಮತದಾನ ಮಾಡಲು ಹಲವು ರೀತಿಯ ವಿಶೇಷ ಸೌಲಭ್ಯಗಳಾದ ಗಾಲಿ ಕುರ್ಚಿಗಳು, ಮತಗಟ್ಟೆಗಳಲ್ಲಿ ಇಳಿಜಾರು ಮತ್ತು ರೈಲಿಂಗ್ಸ್, ಮತಯಂತ್ರದಲ್ಲಿ ಬ್ರೈಲ್ ಲಿಪಿ, ಮತಗಟ್ಟೆಗೆ ಬರಲು ಸಾರಿಗೆ ವ್ಯವಸ್ಥೆ, ತರಬೇತಿ ಪಡೆದ ಸ್ವಯಂ ಸೇವಕರು, ಸನ್ನೆ: ಸೂಚನಾ ಪಲಕಗಳು, ವಿಕಲಚೇತನ ಸ್ನೇಹಿ ಶೌಚಾಲಯ, ಮತದಾನ ಮಾಡಲು ಪ್ರತ್ಯೇಕ ಸಾಲಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ವಿಕಲಚೇತನರಿಗೆ ಪ್ರತ್ಯೇಕ ವಾಹನ ನಿಲ್ದಾಣದ ವ್ಯವಸ್ಥೆ, ಅಂಧ ಮತದಾರರಿಗೆ ಒಬ್ಬರು ಸಹಾಯಕರ ವ್ಯವಸ್ಥೆ, ಮನೆಯಿಂದಲೇ ಮತದಾನ ಮಾಡುವ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ತಿವ್ರತೆರನಾದ ವಿಕಲಚೇತನರಿಗೆ ಬ್ಯಾಲೆಟ್ ಪೇಪರ್ ವ್ಯವಸ್ಥೆಯನ್ನು ಒದಗಿಸಲಾಗುವುದು.

ವಿಕಲಚೇತನರಿಗೆ ಆಪ್, ವೋಟರ್ ಹೆಲ್ಪ್ಲೈನ್ ವ್ಯವಸ್ಥೆ, ಶ್ರವಣದೋಷವುಳ್ಳ ಮತದಾರರಿಗೆ ಮತದಾನದ ಬಗ್ಗೆ ಸನ್ನೆ : ಭಾಷೆಯಲ್ಲಿ ಮಾಹಿತಿ ಒದಗಿಸುವುದು. ಈ ಎಲ್ಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಮತದಾನ ಮಾಡುವಂತೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

Share.
Exit mobile version