ಸುಭಾಷಿತ :

Monday, March 30 , 2020 12:54 AM

ಕಲಾಪಕ್ಕೆ ಪತ್ರಕರ್ತರ ನಿಷೇಧದ ನಂತ್ರ, ಇದೀಗ ಶಾಸಕರ ಭವನಕ್ಕೂ ಪತ್ರಕರ್ತರ ನಿಷೇಧಿಸಿ ಸ್ಪೀಕರ್ ಆದೇಶ.!


Friday, February 21st, 2020 6:23 pm

ಬೆಂಗಳೂರು : ಕಳೆದ ಇತ್ತೀಚೆಗೆ ವಿಧಾನ ಮಂಡಲದ ಅಧಿವೇಶನದ ಕಲಾಪ ಚಿತ್ರೀಕರಣಕ್ಕೆ, ಮಾಧ್ಯಮಗಳಿಗೆ ನಿಷೇಧ ಏರಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಶಾಸಕರ ಭವನಕ್ಕೂ ಪತ್ರಕರ್ತರಿಗೆ ನಿರ್ಬಂಧವನ್ನು ಹೇರಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹೊರಡಿಸಿದ್ದಾರೆ.

ಈ ಕುರಿತಂತೆ ಅಧಿಕೃತ ಆದೇಶ ಹೊರಡಿಸಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರ ಭವನಕ್ಕೆ ದೃಶ್ಯ ಮಾಧ್ಯಮದವರಾಗಲೀ, ಪತ್ರಿಕಾ ಮಾಧ್ಯಮದವರಾಗಲೀ ತೆರಳಿ, ಚಿತ್ರೀಕರಣ ಮಾಡದಂತೆ ನೀರ್ಭಂದ ವಿಧಿಸಿ, ಅಧಿಕೃತ ಆದೇಶ ಹೊರಡಿಸಿದ್ದಾರೆ.

ಅಂದಹಾಗೇ.. ಶಾಸಕರ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ ಎಂಬ ಕಾರಣಕ್ಕಾಗಿ ಇಂತಹ ನಿರ್ಧಾರ ಕೈಗೊಂಡಿರುವುದಾಗಿ ಸ್ಪೀಕರ್ ಆದೇಶದಲ್ಲಿ ತಿಳಿಸಿದ್ದಾರೆ. ಒಂದು ವೇಳೆ ಶಾಸಕರು ಸಂದರ್ಶನಕ್ಕೆ ಒಪ್ಪಿದ್ರೇ, ಶಾಸಕರ ಭವನದ ಹೊರಭಾಗದಲ್ಲಿ ಚಿತ್ರೀಕರಣಕ್ಕೆ ಅವಕಾಶವಿದೆ ಎಂಬುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions