ಬೆಂಗಳೂರು: ಟಿಕೆಟ್ ಇಲ್ಲದೇ ಬೆಂಗಳೂರು ವಿಭಾಗದ ನೈರುತ್ಯ ರೈಲ್ವೆಯ ರೈಲುಗಳಲ್ಲಿ ( South Western Railway ) ಸಂಚರಿಸಿದಂತ ಪ್ರಯಾಣಿಕರಿಗೆ ಬಿಗ್ ಶಾಕ್ ಕೊಟ್ಟಿದೆ. ನವೆಂಬರ್ ಒಂದೇ ತಿಂಗಳಿನಲ್ಲಿ ದಾಖಲೆಯ 2 ಕೋಟಿ ದಂಡವನ್ನು ಟಿಕೆಟ್ ( Without Ticket Fine ) ಇಲ್ಲದೇ ಪ್ರಯಾಣಿಸಿದಂತ ಪ್ರಯಾಣಿಕರಿಂದ ನೈರುತ್ಯ ರೈಲ್ವೆ ಸಂಗ್ರಹಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬೆಂಗಳೂರು ವಿಭಾಗದ ನೈರುತ್ಯ ರೈಲ್ವೆ ಇಲಾಖೆಯು, ನವೆಂಬರ್ 2021ರ ತಿಂಗಳಿನಲ್ಲಿ ರೈಲುಗಳಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದಂತ 38,479 ಜನರಿಂದ ರೂ.2,18,73,555 ಹಣವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದೆ.
ಇದೇ ಮೊದಲ ಬಾರಿಗೆ 2021ರ ವರ್ಷದಲ್ಲಿ 2 ಕೋಟಿ ದಂಡವನ್ನು ಸಂಗ್ರಹಿಸಲಾಗಿದೆ. ಕಳೆದ ನವೆಂಬರ್ 2020ರಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದಂತ 6,910 ಜನರಿಂದ 44,93,765 ರೂ ದಂಡವನ್ನು ವಸೂಲಿ ಮಾಡಿದ್ದಾಗಿ ತಿಳಿಸಿದೆ.
BEAUTY TIPS: ತೆಂಗಿನೆಣ್ಣೆಯಲ್ಲಿ ಈ ವಸ್ತುಗಳನ್ನು ಬೆರೆಸಿ, ನೈಸರ್ಗಿಕ ಶಾಂಪೂವನ್ನು ಮನೆಯಲ್ಲಿಯೇ ತಯಾರಿಸಿ
ಏಪ್ರಿಲ್ ನಿಂದ ನವೆಂಬರ್ 2021ರವರೆಗೆ ನೈರುತ್ಯ ರೈಲ್ವೆ ಇಲಾಖೆಯಿಂದ 1,66,983 ಜನರಿಂದ 9,33,42,980 ರೂ ದಂಡವನ್ನು ವಸೂಲಿ ಮಾಡಿರೋದಾಗಿ ತಿಳಿಸಿದೆ.