ಸುಭಾಷಿತ :

Monday, February 17 , 2020 5:15 AM

13ನೇ ದಕ್ಷಿಣ ಏಷ್ಯಾ ಕ್ರೀಡಾಕೂಟ : ಕುಸ್ತಿಯ ಎಲ್ಲಾ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತ


Tuesday, December 10th, 2019 7:18 am

ಕಠ್ಮಂಡು: 13ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಭಾರತವು ಎಲ್ಲಾ 14 ಚಿನ್ನದ ಪದಕಗಳನ್ನು ಗೆದ್ದುಕೊಂಡು ವಿಜಯದ ನಗೆ ಬೀರಿದೆ.

ಸೋಮವಾರ, ಕುಸ್ತಿ ಪಂದ್ಯಗಳ ಅಂತಿಮ ದಿನದಂದು ಗೌರವ್ ಬಾಲಿಯನ್ ಪುರುಷರ 74 ಕೆಜಿ ವಿಭಾಗದಲ್ಲಿ ಮತ್ತು ಮಹಿಳೆಯರ 68 ಕೆಜಿಯಲ್ಲಿ ಅನಿತಾ ಶೋರನ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಭಾರತ 7-7 ಚಿನ್ನದ ಪದಕಗಳನ್ನು ಗೆದ್ದಿದೆ.

ಇದಕ್ಕೂ ಮುನ್ನ ಭಾನುವಾರ ಸಾಕ್ಷಿ ಮಲಿಕ್ (62), ರವೀಂದರ್ (61), ಅನ್ಶು (59), ಪವನ್ ಕುಮಾರ್ (86) ಚಿನ್ನದ ಪದಕ ಗೆದ್ದಿದ್ದಾರೆ. ಭಾರತದ ಇತರ ಚಿನ್ನದ ವಿಜೇತರು ಸತ್ಯವ್ರತ್ ಕಡಿಯನ್ (97), ಸುಮಿತ್ ಮಲಿಕ್ (125), ಗುರ್ಷರನ್‌ಪ್ರೀತ್ ಕೌರ್ (76), ಸರಿತಾ ಮೌರ್ (57), ಶೀತಲ್ ತೋಮರ್ (50), ಪಿಂಕಿ (53), ರಾಹುಲ್ (57) ಮತ್ತು ಅಮಿತ್ ಕುಮಾರ್ (65).

ಕ್ರೀಡಾಕೂಟದ ಎಲ್ಲಾ ವಿಭಾಗದಲ್ಲಿ ಭಾರತವು ಒಟ್ಟಿಗೆ 252 ಪದಕಗಳನ್ನು ಗೆದ್ದುಕೊಂಡಿದೆ. ಅವುಗಳಲ್ಲಿ 132 ಚಿನ್ನ, 78 ಬೆಳ್ಳಿ ಮತ್ತು 42 ಕಂಚಿನ ಪದಕ ಗೆದ್ದುಕೊಂಡಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions