ಬೆಂಗಳೂರು: ಯುವತಿಯನ್ನು ಸೂಟ್ ಕೇಸ್ ನಲ್ಲಿ ತುಂಬಿಕೊಂಡು ಹಾಸ್ಟೆಲ್‍ಗೆ ಕರೆತಂದು ಯುವಕ ಸಿಕ್ಕಿಬಿದ್ದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ತನ್ನ ಗೆಳತಿಯನ್ನು ಹಾಸ್ಟೆಲ್‍ಗೆ ದೊಡ್ಡ ಬ್ಯಾಗ್‍ನಲ್ಲಿ ತುಂಬಿಕೊಂಡು ಹೋಗಿದ್ದಾನೆ. ಗೇಟ್‍ನಲ್ಲಿ ಸೆಕ್ಯೂರಿಟಿ ಗಾರ್ಡ್‍ಗಳು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಗ್ ಎತ್ತಿಕೊಂಡು ಓಡಲು ಯುವಕ ಪ್ರಯತ್ನಿಸಿದ್ದಾನೆ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಸೂಟ್ ಕೇಸ್ ತೆಗೆದು ನೋಡಿದಾಗ ಯುವತಿ ಹೊರಗೆ ಬಂದಿದ್ದಾಳೆ.ಈ ವಿಡಿಯೋ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಉಡುಪಿಯದ್ದಲ್ಲ ಈ ವಿಡಿಯೋ
ಉಡುಪಿ ಜಿಲ್ಲೆಯ ಮಣಿಪಾಲ ವಿವಿಯ ಎಂಐಟಿ ಕ್ಯಾಂಪಸ್‍ನ ವೀಡಿಯೋ ಎಂದು ಸುದ್ದಿ ಹರಿದಾಡುತ್ತಿತ್ತು. ಆದರೆ ಇದು ಎರಡು ವರ್ಷಗಳ ಹಿಂದಿನ ಹಳೆಯ ವೀಡಿಯೋ ಆಗಿದ್ದು ಮಣಿಪಾಲದ ವೀಡಿಯೋ ಅಲ್ಲ ಎಂದು ತಿಳಿದು ಬಂದಿದೆ. ಈ ವೀಡಿಯೋ ಡೆಹ್ರಾಡೂನ್‍ನದ್ದು ಎಂದು ಹೇಳಲಾಗುತ್ತಿದ್ದು, 2019ರಲ್ಲೇ ಈ ವೀಡಿಯೋ ವೈರಲ್ ಆಗಿತ್ತು ಎನ್ನಲಾಗಿದೆ.
BIGG BREAKING: ರಣಜಿ ಟ್ರೋಫಿಗೆ ಡೇಟ್ ಫಿಕ್ಸ್ : ʼಫೆ.10ʼರಿಂದ 2 ಹಂತದ ಪಂದ್ಯಾವಳಿ ಆರಂಭ |Ranji Trophy
In my life, I’ve seen a lot of crazy things. However, that Manipal lad trying to sneak a girl out via a suitcase is right at the top pic.twitter.com/yOteKVCAh3
— Shibubuu (@shibubuu27) February 2, 2022