CRIME NEWS: ಕುಡಿದು ಜಗಳವಾಡಿ ತಾಯಿಯನ್ನೇ ಹತ್ಯೆಗೈದ ಮಗ

ಚಿತ್ರದುರ್ಗ: ಕುಡಿದ ಮತ್ತಿನಲ್ಲಿ ತಾಯಿಯೊಂದಿಗೆ ಜಗಳಕ್ಕೆ ಇಳಿದಂತ ಮಗನೊಬ್ಬ, ಅದೇ ಮತ್ತಿನಲ್ಲಿ ಹೆತ್ತಮ್ಮನನ್ನೇ ಹತ್ಯೆಗೈದ ಬೆಚ್ಚಿ ಬೀಳಿಸೋ ಘಟನೆ ಚಿತ್ರದುರ್ಗದ ಹಿರಿಯೂರಿನ ಹುಲಗಲಕುಂಟೆ ಗ್ರಾಮದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಲಗಲಕುಂಟೆ ಗ್ರಾಮದ ಆರೋಪಿ ಚಿತ್ರಲಿಂಗ(40) ಎಂಬಾತ ತನ್ನ ತಾಯಿ ಮೃತ ಮಹಿಳೆ ಗಂಗಮ್ಮ(65) ಎಂಬುವರ ಜೊತೆಗೆ ಕುಡಿದು ಜಗಳಕ್ಕೆ ಇಳಿದಿದ್ದಾನೆ. ಜಗಳ ತಾರಕಕ್ಕೆ ಏರಿದಂತ ಸಂದರ್ಭದಲ್ಲಿ ತಾಯಿಯನ್ನೇ ಹೊಡೆದು ಕೊಲೆಗೈದಿದ್ದಾನೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವಂತ ಪೊಲೀಸರು ಆರೋಪಿ ಚಿತ್ರಲಿಂಗನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. … Continue reading CRIME NEWS: ಕುಡಿದು ಜಗಳವಾಡಿ ತಾಯಿಯನ್ನೇ ಹತ್ಯೆಗೈದ ಮಗ