ನಿದ್ರೆ ಮಾಡುವಾಗ ಉಸಿರಾಟದ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ರೆ ಹೀಗೆ ಮಾಡಿ.. – Kannada News Now


Health Lifestyle

ನಿದ್ರೆ ಮಾಡುವಾಗ ಉಸಿರಾಟದ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ರೆ ಹೀಗೆ ಮಾಡಿ..

ಸ್ಪೆಷಲ್ ಡೆಸ್ಕ್ : ಕೆಲವರಿಗೆ ನಿದ್ರೆ ಮಾಡುವಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಮಾಡಿಲ್ಲ ಎಂದಾದರೆ ಆರೋಗ್ಯದ ಸಮಸ್ಯೆ ಕಾಡುವುದು ಖಚಿತ. ಸಮಸ್ಯೆಗಳು ನಿಮ್ಮೊಳಗೆ ಸೇರುವ ಮುನ್ನ ನೀವೂ ಇವುಗಳನ್ನು ಕಂಟ್ರೋಲ್ ಮಾಡಿ…

ತೂಕ ಇಳಿಸಿ : ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಪ್ರಮುಖ ಕಾರಣ ಬೊಜ್ಜು. ನಿಮ್ಮ ತೂಕ ಸ್ವಲ್ಪ ಇಳಿದರೂ ಅದು ದೊಡ್ಡ ಮಟ್ಟಿನಲ್ಲಿ ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಲ್ಲದು.

ಸ್ಮೋಕಿಂಗ್, ಡ್ರಿಂಕಿಂಗ್ ಗೆ ನೋ ಎನ್ನಿ : ಧೂಮಪಾನ ಮತ್ತು ಮದ್ಯಪಾನ ನಿಮ್ಮ ಆರೋಗ್ಯಕ್ಕೆ ಹಾನಿಕರ. ಜೊತೆಗೆ, ಇವು ನಿದ್ರಾ ಸಮಸ್ಯೆಗೂ ಕಾರಣವಾಗಲ್ಲವು. ಅತಿಯಾದ ಧೂಮಪಾನದಿಂದ ಅಪ್ಪರ್ ಏರ್ ವೇಸ್ ನಲ್ಲಿ ಊತ ಕಾಣಿಸಿಕೊಂಡು ಗೊರಕೆ ಮತ್ತು ನಿದ್ರೆಗೆ ಅಡ್ಡಿಯುಂಟಾಗುತ್ತದೆ. ಮದ್ಯಸೇವನೆಯಿಂದಲೂ ಉಸಿರಾಟದ ಸಮಸ್ಯೆ ಕಾಡುತ್ತದೆ.

ಮೂಗಿನ ಎಲರ್ಜಿ : ನೀವು ಮೂಗಿನ ಅಲರ್ಜಿಯಿಂದ ಬಳಲುತ್ತಿದ್ದರೆ ನಿಮಗೆ ಗೊತ್ತಿರುತ್ತದೆ, ನಿದ್ದೆ ಮಾಡುವಾಗ ಉಸಿರಾಡುವುದು ಎಷ್ಟು ಕಷ್ಟವಾಗುತ್ತದೆ ಎಂಬುದು. ಅಲರ್ಜಿಯಿಂದಾಗಿ ಗಂಟಲಿನ ಮೇಲಿನ ಅಂಗಾಂಶಗಳು ಊದಿಕೊಂಡು ಉಸಿರಾಟದ ಹಾದಿಗೆ ಅಡ್ಡಿಪಡಿಸುತ್ತದೆ. ನಿದ್ರೆಗೆ ಮೊದಲು ಲವಣಯುಕ್ತ ಮೂಗಿನ ಸ್ಪ್ರೇಯನ್ನು ಬಳಸಿದರೆ, ಉಸಿರಾಟದ ಹಾದಿ ಸುಗಮವಾಗಿ ನಿಮಗೆ ಚೆನ್ನಾಗಿ ನಿದ್ರೆ ಬರುತ್ತದೆ.

ಚೆನ್ನಾಗಿ ನಿದ್ರೆ ಮಾಡಿ : ಆರೋಗ್ಯಕರವಾಗಿರಲು ಸಾಕಷ್ಟು ನಿದ್ರೆ ಬೇಕು. ವೈದ್ಯರು ಮತ್ತು ಸಂಶೋಧಕರ ಪ್ರಕಾರ ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಸಮಸ್ಯೆ ಇರುವವರು ಅಂಗಾತ ಮಲಗುವ ಬದಲು ಒಂದು ಬದಿಗೆ ತಿರುಗಿ ಮಲಗುವುದು ಒಳ್ಳೆಯದು. ಏಕೆಂದರೆ ಈ ಸ್ಥಿತಿಯಲ್ಲಿ ಉಸಿರಾಟ ಸರಾಗವಾಗಿರುತ್ತದೆ.