ಸುಭಾಷಿತ :

Sunday, January 26 , 2020 4:19 AM

ನೀವು ಹಗಲು ಹೊತ್ತು ನಿದ್ರೆ ಮಾಡುತ್ತೀರಾ? ಹಾಗಿದ್ರೆ ನೀವು ಇದನ್ನು ಓದ್ಲೇ ಬೇಕು…


Thursday, November 14th, 2019 12:12 pm

ಸ್ಪೆಷಲ್ ಡೆಸ್ಕ್ : ಕೆಲವರಿಗೆ ರಾತ್ರಿ ಮಾತ್ರವಲ್ಲ ಹಗಲು ಕೂಡ ನಿದ್ರೆ ಮಾಡುವ ಅಭ್ಯಾಸ ಇರುತ್ತದೆ. ನಿದ್ರೆ ಮಾಡಿದ್ರೆ ಆರಾಮವಾಗಿರುತ್ತದೆ ಎಂದು ನಿಮಗೆ ಅನಿಸಿರಬಹುದು. ಆದರೆ ಹಗಲು ಹೊತ್ತಲ್ಲಿ ನಿದ್ರೆ ಮಾಡಿದ್ರೆ ಮನೆಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಲಾಗುತ್ತದೆ. ಯಾಕೆ ಏನು ನೋಡೋಣ…

ಹಗಲು ಹೊತ್ತು ನಿದ್ರೆ ಮಾಡಬಾರದು : ಶಾಸ್ತ್ರದ ಅನುಸಾರ ಹಗಲು ಹೊತ್ತು ನಿದ್ರೆ ಮಾಡೋದು ತಪ್ಪು. ಯಾಕೆಂದರೆ ಹಗಲು ಹೊತ್ತು ನಿದ್ರೆ ಮಾಡಿದರೆ ದೇವರ ಆಶೀರ್ವಾದ ಸಿಗೋದಿಲ್ಲ. ಅಲ್ಲದೆ ಆ ಮನೆಯಲ್ಲಿ ಲಕ್ಷ್ಮೀ ಕೂಡ ವಾಸ ಮಾಡೋದಿಲ್ಲ ಎನ್ನಲಾಗುತ್ತದೆ.

ಸೂರ್ಯೋದಯ ಆದ ನಂತರದವರೆಗೆ ಮಲಗೋದು : ಶಾಸ್ತ್ರದ ಅನುಸಾರ ಸೂರ್ಯೋದಯಕ್ಕೂ ಮೊದಲು ಎದ್ದೇಳಬೇಕು. ಯಾಕೆಂದರೆ ಬೆಳಗಿನ ಗಾಳಿ ಹಲವಾರು ರೋಗಗಳಿಂದ ನಮ್ಮ ರಕ್ಷಣೆ ಮಾಡುತ್ತದೆ. ಯಾರು ಸೂರ್ಯೋದಯದ ನಂತರವೂ ಮಲಗಿದ್ದರೆ ಹಲವಾರು ಸಮಸ್ಯೆಗಳು ಕಾಡುತ್ತವೆ.

ಮಧ್ಯಾಹ್ನ ನಿದ್ರೆ ಮಾಡಬಾರದು : ಮಧ್ಯಾಹ್ನದ ಹೊತ್ತು ಮಲಗಿದರೆ ಜೀರ್ಣಕ್ರಿಯೆ ಸರಿಯಾಗುವುದಿಲ್ಲ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಅಲ್ಲದೆ ಇದರಿಂದ ಮೆಮೊರಿ ಪವರ್‌ ಮೇಲೆ ಸಹ ಪರಿಣಾಮ ಬೀರುತ್ತದೆ.

ಸೂರ್ಯಾಸ್ತದ ಸಮಯ ನಿದ್ರೆ : ಸಂಜೆಯ ಹೊತ್ತು ದೇವ -ದೇವತೆಯರು ಭೂಮಿಯಲ್ಲಿ ಸುತ್ತಾಡುತ್ತಿರುತ್ತಾರೆ. ಅವರು ಆ ಸಮಯದಲ್ಲಿ ಮನೆಗೆ ಪ್ರವೇಶ ಮಾಡುತ್ತಾರೆ. ಈ ಸಮಯದಲ್ಲಿ ಮಲಗಿದ್ದರೆ ದೇವರ ಕೃಪೆ ಸಿಗೋದಿಲ್ಲ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions