ಮುಖ ಚೆನ್ನಾಗಿ ಕಾಣಬೇಕು ಎಂಬುದು ಎಲ್ಲರಿಗೂ ಆಸೆ ಇರುತ್ತದೆ ಅದರಲ್ಲೂ ಹೆಚ್ಚಿನ ಮಹಿಳೆಯರಿಗೆ ಮುಖದ ಕಪ್ಪು ಕಲೆಗಳು ಹೋಗಿ ಮುಖ ಕಾಂತಿಯುತ ವಾಗಬೇಕು ಎನ್ನುವ ಬಯಕೆ ಇರುತ್ತದೆ. ಆದರೆ ಮುಖದ ಮೇಲಿನ ಕಪ್ಪು ಕಲೆ ಮಾನಸಿಕ ಹಿಂಸೆ ನೀಡುತ್ತದೆ. ಆ ಕಪ್ಪು ಕಲೆಗಳನ್ನು ಹೋಗಲಾಡಿಸಿ, ಮುಖ ಅರಳುವಂತೆ ಮಾಡಲು ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು ಇದರ ಬಗ್ಗೆ ತಿಳಿಯೋಣ.

ಉಷ್ಣವಾಗಿ ಕೂಡ ಮುಖದ ಮೆಲೆ ಕಪ್ಪುಕಲೆಗಳಾಗುತ್ತದೆ ಇಂತಹ ಸಮಯದಲ್ಲಿ ಸೋಗದೆ ಬೇರನ್ನು ನಿಯತವಾಗಿ ಬಳಸಬೇಕು. ಕುದಿಯುತ್ತಿರುವ ನೀರಿಗೆ ಒಂದು ಚಮಚ ಸೊಗದೆಬೇರಿನ ಚೂರ್ಣವನ್ನು ಬೆರಸಿ ಬೆಂಕಿ ಆರಿಸಿ ರಾತ್ರಿ ಈ ಮಿಶ್ರಣವನ್ನು ಮುಚ್ಚಿಡಬೇಕು. ಮರುದಿನ ದಿನವಿಡೀ ಇದೇ ನೀರನ್ನು ಕುಡಿಯಬೇಕು. ಇದರಿಂದ ಮುಖದ ಕಪ್ಪು ಕಲೆ ನಿವಾರಣೆಯಾಗುತ್ತದೆ.

ಮಂಜಿಷ್ಟ, ಯಷ್ಟಿಮಧು ಮತ್ತು ಅರಿಶಿಣವನ್ನು ಹಾಲಿನಲ್ಲಿ ಕಲಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ತೊಳೆಯಬೇಕು. ಹೀಗೆ ಮಾಡುವುದರಿಂದ ಕೂಡ ಮುಖದ ಕಪ್ಪು ಕಲೆ ನಿವಾರಣೆಯಾಗುತ್ತದೆ. ಜೊತೆಗೆ ಮುಖದ ಕಾಂತಿ ಹೆಚ್ಚಾಗುತ್ತದೆ.

ಬೋರೆಹಣ್ಣು, ಬೆಣ್ಣೆ ಮತ್ತು ಜೇನುತುಪ್ಪವನ್ನು ಒಟ್ಟಿಗೆ ಕಲಸಿ ಚೆನ್ನಾಗಿ ಪೇಸ್ಟ್​ ಮಾಡಿಕೊಳ್ಳಬೇಕು ಈ ಈ ಮಿಶ್ರಣವನ್ನು ಕಪ್ಪು ಕಲೆಯಾದ ಜಾಗದಲ್ಲಿ ಹಚ್ಚಿದರೆ ಕಲೆ ಹೋಗುತ್ತದೆ. ಜೊತೆಯಲ್ಲಿ ಚರ್ಮದ ರಕ್ಷಣೆಗೆ ವಿಟಮಿನ್ ಸಿ ಜೀವಸತ್ವ ಹೊಂದಿರುವ ಆಹಾರಪದಾರ್ಥ ಸೇವನೆ ಮಾಡಬೇಕು.

ಹಾಗಾಗಿ ಸೀಬೆಹಣ್ಣು, ನಿಂಬೆಹಣ್ಣು, ಕಿತ್ತಳೆಹಣ್ಣು ಇವುಗಳನ್ನು ಹೆಚ್ಚು ತಿನ್ನಬೇಕು. ಬಿಸಿಮಾಡಿದ ಎಣ್ಣೆ ಚರ್ಮದ ರಕ್ಷಣೆಗೆ ಮಾರಕ. ಕರಿದ ಆಹಾರಪದಾರ್ಥಗಳು, ಬೇಕರಿ ತಿನಿಸುಗಳು, ಜಂಕ್ ಫುಡ್​ಗಳ ಸೇವನೆಯನ್ನು ಬಿಡಬೇಕು.

ಆಹಾರದಲ್ಲಿ ಸಲಾಡ್​ಗಳು ಹೆಚ್ಚು ಬಳಸಬೇಕು ಇದು ತುಂಬಾ ಪರಿಣಾಮಕಾರಿ. ಹಸಿತರಕಾರಿಗಳನ್ನು ಉಪಯೋಗಿಸಿ ಮಾಡಿದ ಸಲಾಡ್​ಗಳನ್ನು ಪ್ರತಿನಿತ್ಯ ಮೂರು ಹೊತ್ತು ಆಹಾರವಾಗಿ ಸೇವನೆ ಮಾಡುವುದರಿಂದ ಕೂಡ ಚರ್ಮದ ರಕ್ಷಣೆ ಮಾಡಬಹುದು.

Share.
Exit mobile version