ಬೆಂಗಳೂರು: ಖ್ಯಾತ ಗಾಯಕ ಲಕ್ಕಿ ಆಲಿ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಅವರ ಪತಿ ಹಾಗೂ ಬಾಮೈದನ ವಿರುದ್ಧ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ.

ಈ ಕುರಿತಂತೆ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ಸಲ್ಲಿಸಿರುವಂತ ದೂರಿನ ಪ್ರತಿಯನ್ನು ಎಕ್ಸ್ ನಲ್ಲಿ ಖ್ಯಾತ ಗಾಯಕ ಲಕ್ಕಿ ಆಲಿ ಅವರು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಅವರ ಪತಿ ಸುಧೀರ್ ರೆಡ್ಡಿ ಹಾಗೂ ಬಾಮೈದ ಮಧುಸೂಧನ ರೆಡ್ಡಿ ವಿರುದ್ಧ ದೂರು ನೀಡಿದ್ದಾರೆ.

ಅವರು ನೀಡಿರುವಂತ ದೂರಿನಲ್ಲಿ ಯಲಹಂಕ ನ್ಯೂ ಟೌನ್ ವ್ಯಾಪ್ತಿಯಲ್ಲಿರುವಂತ ತಮ್ಮ ಟ್ರಸ್ಟ್ ಗೆ ಸಂಬಂಧಿಸಿದ ಭೂಮಿಯನ್ನು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಅವರ ಭಾಮೈದ ಮಧುಸೂಧನ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.

ಇದೇ ವಿಚಾರಕ್ಕೆ ಖ್ಯಾತ ಗಾಯಕ ಲಕ್ಕಿ ಆಲಿ ಅವರು 2022ರಲ್ಲಿಯೂ ದೂರು ಸಲ್ಲಿಸಿದ್ದರು. ಅದರಲ್ಲಿ ಯಲಹಂಕ ನ್ಯೂ ಟೌನ್ ಠಾಣೆಯ ಎಸಿಪಿ ಮಂಜುನಾಥ್, ತಾಲೂಕು ಸರ್ವೇ ಅಧಿಕಾರಿಯಾಗಿರುವಂತ ಮನೋಹರ್ ಎಂಬುವರು ಈ ಹಗರದಲ್ಲಿ ಭಾಗಿಯಾಗಿದ್ದಾರೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ.

BREAKING : ʻBMTCʼ ನೌಕರರ ಮುಷ್ಕರಕ್ಕೆ ಬ್ರೇಕ್‌ : 6 ತಿಂಗಳು ಪ್ರತಿಭಟನೆ ನಡೆಸದಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ

ಗಮನಿಸಿ : ʻರೇಷನ್‌ ಕಾರ್ಡ್‌ʼ ನಲ್ಲಿ ನಿಮ್ಮ ಹೆಸರು ಇದೆಯಾ ಅಂತ ಈ ರೀತಿ ಚೆಕ್‌ ಮಾಡಿಕೊಳ್ಳಿ!

Share.
Exit mobile version