ಕೆಎನ್‌ಎನ್‌ಸಿನಿಮಾಡೆಸ್ಕ್: ಕನ್ನಡದ ಮಟ್ಟಿಗೆ ಹೊಸತೆನಿಸೋ, ಸಧ್ಯ ಎಲ್ಲೆಲ್ಲೂ ಸುದ್ದಿ ಮಾಡ್ತಿರುವ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಇನಾಮ್ದಾರ್ ಚಿತ್ರ ಸಖತ್ ಕ್ಯೂರಿಯಾಸಿಟಿನ ಹುಟ್ಟುಹಾಕಿದೆ.ರಿಲೀಸ್ ಆಗಿದ್ದ ಟ್ರೈಲರ್ ನೋಡಿ ಥ್ರಿಲ್ ಆಗಿದ್ದ ಸಿನಿರಸಿಕರಿಗೆ ಮತ್ತದೇ ಚಿತ್ರದ ಗುಂಗಲ್ಲೇ ತೇಲುವಂತೆ ಮಾಡಲು ವೀಡಿಯೋ ಸಾಂಗ್ ಒಂದನ್ನ ರಿಲೀಸ್ ಮಾಡಿ ಪಡ್ಡೆ ಹುಡುಗ್ರ ನಿದ್ದೆ ಕದ್ದಿತ್ತು.ಹೌದು ಸಿಲ್ಕು ಮಿಲ್ಕು ಎಂಬ ಶೀರ್ಷಿಕೆ ಯೊಂದಿಗೆ ಫೇಮಸ್ ಆಗಿರುವ ಈ ವೀಡಿಯೋ ಸಾಂಗ್ ಈಗ ದಾಖಲೆ ವೀವರ್ಸ್ ಗಳನ್ನ ಹೊಂದಿದ್ದು ಸೂಪರ್ ಹಿಟ್ ಆಗಿ ಮುನ್ನುಗ್ಗುತ್ತಲೇ ಇದೆ.
ಈ ಮೊದಲೇ ರಿಲೀಸ್ ಆಗಿದ್ದ ಟ್ರೈಲರಿನ ಜಲಕ್ ಕಂಡು ಥ್ರಿಲ್ ಆಗಿದ್ದವರು ಚಿತ್ರದಿಂದ ಹೊಸ ಅಪ್ಡೇಟ್ ನ ನೀರಿಕ್ಷೆಯಲ್ಲಿದ್ದಾಗ ರಿಲೀಸ್ ಆಗಿದ್ದು ಈ ಸಿಲ್ಕು ಮಿಲ್ಕು ವೀಡಿಯೋ ಸಾಂಗ್. ನಾಯಕ ರಂಜನ್ ಛತ್ರಪತಿ ಮತ್ತು ಎಸ್ತರ್ ನರೋನ್ಹ ಸೊಂಟ ಬಳುಕಿಸುವ ಮೂಲಕ ಹಾಡಿನ ಮಾದಕತೆ ಹೆಚ್ಚಿಸಿರುವ ಈ ಹಾಡನ್ನ ನೋಡಿ ಪಡ್ಡೆ ಹೈಕ್ಳಂತು ನಿದ್ದೆ ಗೆಟ್ಟಿರೋದು ಸುಳ್ಳಲ್ಲ. ಉತ್ತರ ಕರ್ನಾಟಕದ ಜವಾರಿ ಶೈಲಿಯಲ್ಲಿ, ಸಂಪೂರ್ಣವಾಗಿ ಉತ್ತರ ಕರ್ನಾಟಕ ಭಾಗದಲ್ಲಿಯೇ ಚಿತ್ರೀಕರಿಸಿಕೊಳ್ಳಲಾಗಿದೆ.
ಇನ್ನು ಸಿಲ್ಕು ಮಿಲ್ಕು ಹಾಡಿಗೆ ಕುಂಟೂರು ಶ್ರೀಕಾಂತ್ ಸಾಹಿತ್ಯವಿದ್ದು, ರಾಕೇಶ್ ಆಚಾರ್ಯ ಸಂಗೀತ ನಿರ್ದೇಶನ , ರವೀಂದ್ರ ಸೊರಗಾವಿ ಮತ್ತು ಇಂದೂ ನಾಗರಾಜ್ ಧ್ವನಿಯಾಗಿ ಹಾಡಿನ ಮಾದಕತೆಯ ಗಮ್ಮತ್ತು ಹೆಚ್ಚಿದೆ.
ಶ್ರೀ ಕುಂತಿಯಮ್ಮ ಪ್ರೊಡಕ್ಷನ್ ಮತ್ತು ತಸ್ಮೈ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣ ಮಾಡಿರುವ ಚಿತ್ರ ಇನಾಮ್ದಾರ್ ಚಿತ್ರ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗಗಳಿಗೆ ಬೆಸೆದುಕೊಂಡಿರುವ ರೋಚಕ ಕಥೆ ಇದರಲ್ಲಿ ಅಡಕವಾಗಿದೆಯಂತೆ.ಚಿತ್ರದಲ್ಲಿ ರಂಜನ್ ಛತ್ರಪತಿ, ಪ್ರಮೋದ್ ಶೆಟ್ಟಿ, ಸಂದೇಶ್ ಶೆಟ್ಟಿ ಆಜ್ರಿ, ಚಿರಶ್ರೀ ಅಂಚನ್, ಎಸ್ತರ್ ನರೋನ್ಹ, ಶರತ್ ಲೋಹಿತಾಶ್ವ, ಎಂ.ಕೆ ಮಠ, ಅವಿನಾಶ್, ಥ್ರಿಲ್ಲರ್ ಮಂಜು, ಪ್ರಶಾಂತ್ ಸಿದ್ಧಿ, ರಘು ಪಾಂಡೇಶ್ವರ್, ಯಶ್ ಆಚಾರ್ಯ, ಕರಣ್ ಕುಂದರ್, ಚಿತ್ರಕಲಾ, ಸಂಜು ಬಸಯ್ಯ, ಮಹಾಬಲೇಶ್ವರ ಕ್ಯಾದಿಗೆ ಮುಂತಾದವರು ನಟಿಸಿದ್ದಾರೆ. ಅತ್ಯಂತ ಅದ್ದೂರಿಯಾಗಿ ಮೂಡಿ ಬಂದಿರುವ ಇನಾಮ್ದಾರ್ ಚಿತ್ರ ಸಧ್ಯ ದಲ್ಲೇ ತೆರೆಗೆ ಬರಲು ಸಜ್ಜಾಗಿದ್ದು,ಬಿಡುಗಡೆಯ ದಿನಾಂಕವನ್ನ ಘೋಷಣೆ ಮಾಡಲಿದೆ ಚಿತ್ರತಂಡ. ಸ್ಯಾಂಡಲ್ ವುಡ್ ನಲ್ಲಿ ದಾಖಲೆ ಸಿನೆಮಾಗಳ ಪಟ್ಟಿಗೆ ಸೇರಿ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಅವರ ಅದೆಷ್ಟೋ ವರ್ಷಗಳ ಶ್ರಮ ಮತ್ತು ಏಳುಬೀಳುಗಳೆಲ್ಲವೂ ಇನಾಮ್ದಾರ್ ಮೂಲಕ ಸಾರ್ಥಕ್ಯ ಕಾಣುವ ಸಾಧ್ಯತೆಗಳು ಈ ಚಿತ್ರದ ಜಲಕ್ ನಲ್ಲೇ ಎದ್ದುಕಾಣುತ್ತಿವೆ.