BIG BREAKING : ‘ಸಿಗಂಧೂರು ದೇವಾಲಯದಲ್ಲಿ ಗಲಾಟೆ’ ಪ್ರಕರಣ : ‘ಸಿಎಂ ಯಡಿಯೂರಪ್ಪ’ ಮಧ್ಯಪ್ರವೇಶ, ಶಾಸಕರು, ಅಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮ – Kannada News Now


State

BIG BREAKING : ‘ಸಿಗಂಧೂರು ದೇವಾಲಯದಲ್ಲಿ ಗಲಾಟೆ’ ಪ್ರಕರಣ : ‘ಸಿಎಂ ಯಡಿಯೂರಪ್ಪ’ ಮಧ್ಯಪ್ರವೇಶ, ಶಾಸಕರು, ಅಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮ

ಶಿವಮೊಗ್ಗ : ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ದೈವೀಕ ನೆಲೆ ನಿಲ್ದಾಣವಾಗಿರುವಂತ ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ ಅರ್ಚಕರ ಕಿತ್ತಾಟ, ಗಲಾಟೆಯಿಂದಾಗಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಧ್ಯಪ್ರವೇಶಿಸಿದ್ದಾರೆ. ಶಾಸಕ ಹರತಾಳು ಹಾಲಪ್ಪ, ಜಿಲ್ಲಾಧಿಕಾರಿಗಳು ಹಾಗೂ ದೇವಾಲಯದ ಮುಖಂಡರ ಜೊತೆಗೆ ಚರ್ಚೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ಕುರಿತಂತೆ ನಗರದಲ್ಲಿ ಮಾತನಾಡಿದಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಧಾರ್ಮಿಕ, ಪವಿತ್ರ ಕ್ಷೇತ್ರವಾದಂತ ಸಿಗಂಧೂರಿನಲ್ಲಿ ಗಲಾಟೆಯಾಗಿದ್ದು ತಿಳಿದು ಬೇಸರವಾಗಿದೆ. ದೇವರ ಸನ್ನಿಧಿಯಲ್ಲಿ ನಡೆದಂತ ಈ ಘಟನೆ ಯಾರಿಗೂ ಕ್ಷೋಭೆ ತರುವಂತದ್ದು ಅಲ್ಲ ಎಂಬುದಾಗಿ ತಿಳಿಸಿದರು.

ಸಿಗಂಧೂರು ದೇವಾಲಯದಲ್ಲಿನ ಗಲಾಟೆ ವಿಚಾರವಾಗಿ ಜಿಲ್ಲಾಧಿಕಾರಿಗಳು, ಅಧಿಕಾರಿಗಳ ಸಭೆಯನ್ನು ಕರೆಯಲಿದ್ದೇನೆ. ಅಲ್ಲಿನ ಮುಖಂಡರನ್ನು, ನಮ್ಮ ಹರತಾಳು ಹಾಲಪ್ಪ ಅವರನ್ನು ಕರೆದು, ಸಭೆಯಲ್ಲಿ ಚರ್ಚೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದರು.
error: Content is protected !!