ಮೈಸೂರು: ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ಯಾವ ಕ್ಷೇತ್ರದಿಂದ ಮುಂಬರುವಂತ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Election 2023 ) ಸ್ಪರ್ಧಿಸಲಿದ್ದಾರೆ ಎಂಬುದೇ ತೀವ್ರ ಕುತೂಹಲ ಮೂಡಿಸಿದೆ. ಈ ನಡುವೆ ವರುಣಾ ಕ್ಷೇತ್ರದಿಂದಲೇ ಅವರು ಸ್ಪರ್ಧೆ ನಡೆಸುವುದಾಗಿ ಅವರ ಪುತ್ರ ಡಾ.ಯತೀಂದ್ರ ಸಿದ್ಧರಾಮಯ್ಯ ಸುಳಿವು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ವರುಣಾ ಕ್ಷೇತ್ರದಿಂದಲೇ ಸಿದ್ಧರಾಮಯ್ಯ ಸ್ಪರ್ಧಿಸಲಿದ್ದಾರೆ. ಇನ್ನೂ 2 – 3 ದಿನಗಳಲ್ಲಿ ನಮ್ಮ ತಂದೆ ತಮ್ಮ ನಿರ್ಧಾರ ತಿಳಿಸಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ವರಿಷ್ಠರು ಸಲಹೆ ಮಾಡಿದ್ದಾರೆ. ನಾನು ಕೂಡ ಎರಡು ಬಾರಿ ಆಂತರೀಕ ಸರ್ವೇ ಮಾಡಿಸಿದ್ದೇನೆ. ಸಿದ್ಧರಾಮಯ್ಯ ಪರವಾಗಿಯೇ ಸರ್ವೇ ಫಲಿತಾಂಶ ಬಂದಿದೆ ಎಂದರು.
ಹೈಕಮಾಂಡ್ ಹಾಗೂ ಕಾಂಗ್ರೆಸ್ ನಾಯಕು ಏಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಆದ್ರೇ ನಮ್ಮ ತಂದೆ ಸಿದ್ಧರಾಮಯ್ಯ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸೋ ಬಗ್ಗೆ ಮೂರು ದಿನಗಳಲ್ಲಿಯೇ ಫೈಲನ್ ಆಗಲಿದೆ ಎಂಬುದಾಗಿ ಹೇಳಿದರು.
ಅಂದಹಾಗೇ ವಿಪಕ್ಷ ನಾಯಕ ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧಿಸೋ ಒಲವು ತೋರಿದ್ದರು. ಆದ್ರೇ ಇತ್ತೀಚಿಗೆ ನಡೆದಂತ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ಕೋಲಾರದಿಂದ ಸ್ಪರ್ಧಿಸುವುದು ಬೇಡೆ ಎಂಬುದಾಗಿ ಸಲಹೆ ಮಾಡಿದ್ದರು ಎನ್ನಲಾಗುತ್ತಿದೆ. ಹೀಗಾಗಿ ವರುಣಾ ಇಲ್ಲವೇ ಬಾದಾಮಿಯಿಂದ ಅವರು ಸ್ಪರ್ಧೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
BIG NEWS: ಚೆನ್ನಗಿರಿಯಲ್ಲಿ ಬಿಜೆಪಿ vs ಬಿಜೆಪಿ ನಡುವೆ ತಾರಕಕ್ಕೇರಿದ ಸಮರ: ಅರ್ಧಕ್ಕೆ ನಿಂತ ವಿಜಯಸಂಕಲ್ಪ ಯಾತ್ರೆ
ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್: ಸಹಾಯ ಧನ ವಿಸ್ತರಣೆಗೆ ಕ್ರಮ – ಸಿಎಂ ಬೊಮ್ಮಾಯಿ