ಕಲಬುರಗಿ : ಕಲಬುರಗಿ ಜಿಲ್ಲೆಯ ಅಳಂದದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಲಂಬಾಣಿ ಮಹಿಳೆಯರ ಜೊತೆ ಹೆಜ್ಜೆ ಹಾಕಿ ಗಮನ ಸೆಳೆದರು.
ವಿಡಿಯೋ ಹಂಚಿಕೊಂಡು ಈ ಕುರಿತು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಈ ನೆಲ ವೈಶಿಷ್ಟ್ಯಪೂರ್ಣ ಕಲೆ, ಸಂಸ್ಕೃತಿ, ಸಾಹಿತ್ಯದ ತವರು. ಇಲ್ಲಿನ ಪ್ರತಿ ಸಮುದಾಯದ ಆಚರಣೆ, ನಂಬಿಕೆಗಳ ವೈವಿಧ್ಯದಲ್ಲಿಯೇ ವಿಶಿಷ್ಟತೆಯ ಸೊಬಗಿದೆ. ಇದೇ ಪರಂಪರೆಯ ಲಂಬಾಣಿ ಜನರ ವಿಶಿಷ್ಟ ನೃತ್ಯ ಪ್ರಕಾರಕ್ಕಿಂದು ಅವರೊಳಗೊಬ್ಬನಾಗಿ ಹೆಜ್ಜೆಹಾಕಿದ್ದು ಖುಷಿ ನೀಡಿತು ಎಂದು ಟ್ವೀಟ್ ಮಾಡಿದ್ದಾರೆ.
ಈ ನೆಲ ವೈಶಿಷ್ಟ್ಯಪೂರ್ಣ ಕಲೆ, ಸಂಸ್ಕೃತಿ, ಸಾಹಿತ್ಯದ ತವರು. ಇಲ್ಲಿನ ಪ್ರತಿ ಸಮುದಾಯದ ಆಚರಣೆ, ನಂಬಿಕೆಗಳ ವೈವಿಧ್ಯದಲ್ಲಿಯೇ ವಿಶಿಷ್ಟತೆಯ ಸೊಬಗಿದೆ.
ಇದೇ ಪರಂಪರೆಯ ಲಂಬಾಣಿ ಜನರ ವಿಶಿಷ್ಟ ನೃತ್ಯ ಪ್ರಕಾರಕ್ಕಿಂದು ಅವರೊಳಗೊಬ್ಬನಾಗಿ ಹೆಜ್ಜೆಹಾಕಿದ್ದು ಖುಷಿ ನೀಡಿತು. pic.twitter.com/FG9bhipqFp— Siddaramaiah (@siddaramaiah) February 7, 2023
ಮಂಡ್ಯ: ನಾಳೆ ‘ಮದ್ದೂರು ತಾಲೂಕಿ’ನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut