ಸುಭಾಷಿತ :

Tuesday, April 7 , 2020 6:04 PM

ವಿಧಾನಸಭೆಯಲ್ಲಿ ಸಿದ್ದರಾಮಯ್ಯ-ಬಿಎಸ್ ವೈ ಜಟಾಪಟಿ


Tuesday, February 18th, 2020 1:37 pm

ಬೆಂಗಳೂರು : ಕಾಂಗ್ರೆಸ್ ನಿಲುವಳಿ ಮಂಡನೆಗೆ ಅವಕಾಶ ಕೊಡದ ಸ್ಪೀಕರ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ಗರಂ ಆದ್ರು. ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚರ್ಚೆ ಮಾಡೋಕೆ ನಿಮಗೆ ಇಷ್ಟ ಇಲ್ವಾ.? ಕುಳಿತುಕೊಳ್ಳಿ ಸಾಕು ಎಂಬ ಮಾತಿಗೆ ಸಿಟ್ಟಾದ ಸಿದ್ದರಾಮಯ್ಯ, ಸದನದಲ್ಲಿ ಸಿಎಂ ವಿರುದ್ಧ ವಾಗ್ಬಾಣಗಳ ಜಟಾಪಟಿ ನಡೆಸಿದ್ರು.

ಮಂಗಳೂರು ಗೋಲಿಬಾರ್, ಸಿಎಎ ವಿರುದ್ಧದ ಪ್ರತಿಭಟನೆಗೆ ಅವಕಾಶ ಕೊಡದ ಬಿಜೆಪಿ ಸರ್ಕಾರದ ನಡೆಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ನಡೆದಂತ ವಿಧಾನಸಭೆಯಲ್ಲಿ ವಾಗ್ದಾಳಿ ನಡೆಸಿದ್ರು. ಅಲ್ಲದೇ ಕಾಂಗ್ರೆಸ್ ನಿಲುವಳಿ ಮಂಡನೆಗೂ ಸ್ಪೀಕರ್ ಅವಕಾಶ ಕೊಡದ ಕಾರಣಕ್ಕೆ ಆಕ್ರೋಶದ ಸುರಿಮಳೆಯನ್ನೇ ಗೈದರು. ಬಿಜೆಪಿ ಕಾಲಹರಣ ಮಾಡುತ್ತಿದೆ ಎಂಬುದಾಗಿ ವಾಗ್ದಾಳಿ ನಡೆಸಿದ್ರು.

ಈ ವೇಳೆ ಸಿದ್ದರಾಮಯ್ಯ ಹೇಳಿಕೆಗೆ ಸಿಡಿದೆದ್ದ ಸಿಎಂ ಯಡಿಯೂರಪ್ಪ ಮಧ್ಯ ಪ್ರವೇಶಿಸಿದ, ನೀವು ಕಾಲ ಹರಣ ಮಾಡುತ್ತಿರೋದು. ನಾವಲ್ಲ… ನಿಮಗೆ ಚರ್ಚೆ ಮಾಡೋಕೆ ಇಷ್ಟ ಇಲ್ವಾ ಎಂಬುದಾಗಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ರು. ಆಗ ಸಿಎಂ ವಿರುದ್ಧ ಮಾತಿನ ಜಟಾಪಟಿಗೆ ಇಳಿದ ಸಿದ್ದರಾಮಯ್ಯ, ನಾವು ಇದನ್ನು ಒಪ್ಪಲ್ಲ. ಯಾಕೆ ಕರೆಯುತ್ತೀರಿ ಸದನ..? ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದ್ರು.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions