ಕೊರೋನಾ ಸೋಂಕಿತನ ಸಂಪರ್ಕ ಹಿನ್ನಲೆ : ಸಿದ್ದಗಂಗಾ ಶ್ರೀಗಳು ಸ್ವಯಂ ಕ್ವಾರಂಟೈನ್ – Kannada News Now


State

ಕೊರೋನಾ ಸೋಂಕಿತನ ಸಂಪರ್ಕ ಹಿನ್ನಲೆ : ಸಿದ್ದಗಂಗಾ ಶ್ರೀಗಳು ಸ್ವಯಂ ಕ್ವಾರಂಟೈನ್

ತುಮಕೂರು : ಕೊರೋನಾ ಕೋಂಕಿಗೆ ಒಳಗಾದಂತಹ ವ್ಯಕ್ತಿಯ ಸಂಪರ್ಕಕ್ಕೆ ಬಂದ ಹಿನ್ನಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಸಿದ್ಧಗಂಗಾ ಮಠದ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಗಳು ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಅಲ್ಲದೇ ಪೂಜೆ, ಸಮಾರಂಭಗಳಲ್ಲಿ ಭಾಗವಹಿಸದೇ ಇರಲು ಸಹ ತೀರ್ಮಾನ ಕೈಗೊಂಡಿದ್ದಾರೆ.

ಶ್ರೀಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಂತ ಜಿಎಸ್ ಸೋಮಶೇಖರ್ ಅವರು ಅಕ್ಟೋಬರ್ 15ರಂದು ಮೃತಪಟ್ಟಿದ್ದರು. ಇಂತಹ ಸೋಮಶೇಖರ್ ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು.

ಇಂತಹ ಸೋಮಶೇಖರ್ ಅವರೊಂದಿಗೆ ಸಂಪರ್ಕ ಹೊಂದಿ, ಮೃತರ ಅಂತ್ಯಕ್ರಿಯೆಯಲ್ಲೂ ಭಾಗವಹಿಸಿದ್ದರಿಂದಾಗಿ, ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಅಲ್ಲದೇ ಯಾವುದೇ ಕಾರ್ಯಕ್ರಮ, ಸಭೆ-ಸಮಾರಂಭ ಹಾಗೂ ಪೂಜಾ ಕೈಂಕರ್ಯದಲ್ಲೂ ತೊಡಗಿಸಿಕೊಳ್ಳಂದಂತ ನಿರ್ಧಾರ ಕೈಗೊಂಡಿದ್ದಾರೆ.

 

 
error: Content is protected !!