ನವದೆಹಲಿ : ಶ್ರದ್ಧಾ ಕೊಲೆ ಪ್ರಕರಣದಲ್ಲಿ ಅಪರಾಧಿಯು ಅತ್ಯಂತ ಕಠಿಣ ಶಿಕ್ಷೆಯನ್ನ ನೀಡೋದನ್ನ ನ್ಯಾಯಾಲಯದ ಮೂಲಕ ಸರ್ಕಾರ ಖಚಿತಪಡಿಸುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

ಶ್ರದ್ಧಾ ಕೊಲೆ ಪ್ರಕರಣದಲ್ಲಿ ಯಾರೇ ಜವಾಬ್ದಾರರಾಗಿದ್ದರೂ ಅವರು ಅತ್ಯಂತ ಕಡಿಮೆ ಸಮಯದಲ್ಲಿ ಕಠಿಣ ಶಿಕ್ಷೆಯನ್ನ ಪಡೆಯುತ್ತಾರೆ. ಇನ್ನು ಅವರು ಇಡೀ ಪ್ರಕರಣದ ಮೇಲೆ ನೇರ ಕಣ್ಣಿಟ್ಟಿದ್ದಾರೆ ಎಂದು ಗೃಹ ಸಚಿವರು ಹೇಳಿದರು.

ಅಲ್ಲಿ ನಮ್ಮ ಸರ್ಕಾರಗಳು ಮತಾಂತರದ ವಿರುದ್ಧ ಕಾನೂನುಗಳನ್ನ ಹೊಂದಿವೆ : ಶಾ
ಮತಾಂತರ ಕಾನೂನು ಕುರಿತ ಸಮಾರಂಭದಲ್ಲಿ ಮಾತನಾಡಿದ ಗೃಹ ಸಚಿವರು, “ನಾವು ರಾಜ್ಯಗಳಲ್ಲಿ ಎಲ್ಲೆಲ್ಲಿ ಸರ್ಕಾರಗಳನ್ನ ಹೊಂದಿದ್ದೇವೆಯೋ ಅಲ್ಲಿ ಮತಾಂತರದ ವಿರುದ್ಧ ಕಾನೂನು ಇದೆ ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಯಾರು ಬೇಕಾದರೂ ತಮ್ಮ ಧರ್ಮವನ್ನ ಪ್ರಚಾರ ಮಾಡಬಹುದು. ಆದ್ರೆ, ಆಮಿಷವೊಡ್ಡುವ ಮೂಲಕ, ಹಣವನ್ನ ನೀಡುವ ಮೂಲಕ ಅಥವಾ ಬಲವಂತವಾಗಿ ಯಾರ ಧರ್ಮವನ್ನ ಬದಲಾಯಿಸಲಾಗುವುದಿಲ್ಲ. ಮತಾಂತರದ ವಿರುದ್ಧ ನಾವು ಕಾನೂನುಗಳನ್ನ ಮಾಡಿದ್ದೇವೆ ಮತ್ತು ಅವುಗಳನ್ನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯಗಳ ಮತಾಂತರ ಕಾನೂನುಗಳು ಆಮಿಷ ಒಡ್ಡುವಿಕೆ ಮತ್ತು ಇತರ ಮಾರ್ಗಗಳ ಮೂಲಕ ಜನರನ್ನ ಮತಾಂತರಗೊಳಿಸುವ ನಡುವಿನ ವ್ಯತ್ಯಾಸವನ್ನ ತೋರಿಸುತ್ತವೆ ಎಂದು ಗೃಹ ಸಚಿವರು ಹೇಳಿದರು. ರಾಷ್ಟ್ರೀಯ ಮಟ್ಟದಲ್ಲಿ ಮತಾಂತರದ ವಿರುದ್ಧ ಕಾನೂನನ್ನ ತರುವುದಕ್ಕೆ ಸಂಬಂಧಿಸಿದಂತೆ ಇದು “ಸೂಕ್ಷ್ಮ” ವಿಷಯವಾಗಿದೆ.

‘370 ನೇ ವಿಧಿಯನ್ನ ರದ್ದುಗೊಳಿಸಿದ ನಂತ್ರ ಜಮ್ಮು ಮತ್ತು ಕಾಶ್ಮೀರದಲ್ಲಿ ಬದಲಾವಣೆ’
370 ನೇ ವಿಧಿಯನ್ನು ತೆಗೆದುಹಾಕುವ ಮತ್ತು ಅದರ ನಂತರ ಕಾಶ್ಮೀರದಲ್ಲಿನ ಬದಲಾವಣೆಗಳ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಒಂದು ಸಮಯದಲ್ಲಿ 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸಲು ಬಾಗಿಲು ಎಂದು ಹೇಳಲಾಗಿತ್ತು. ಅದನ್ನ ಮುಟ್ಟಬೇಡಿ, ನಿಮ್ಮ ಕೈಗಳು ಸುಡುತ್ತವೆ ಎನ್ನುತ್ತಿದ್ರು. ಆದ್ರೆ, ಮೋದಿ ಸರ್ಕಾರ ಅದನ್ನ ತೆಗೆದು ಹಾಕಿದ್ದಲ್ಲದೇ, ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯವನ್ನ ಪ್ರಾರಂಭಿಸಿತು. ಇಂದು 30 ಸಾವಿರ ಸರಪಂಚರು ಇದ್ದಾರೆ, ಇಲ್ಲಿಯವರೆಗೆ 56 ಸಾವಿರ ಕೋಟಿ ಹೂಡಿಕೆ ಬಂದಿದೆ ಮತ್ತು ಮೊದಲ ಬಾರಿಗೆ 80 ಲಕ್ಷ ಪ್ರವಾಸಿಗರು ರಾಜ್ಯಕ್ಕೆ ಬಂದಿದ್ದಾರೆ. ಇದಲ್ಲದೆ, ರಾಜ್ಯದ ಭಾಷೆಗಳಿಗೆ ಸ್ಥಾನ ನೀಡಲಾಗಿದೆ, ಹಿಂದುಳಿದವರಿಗೆ ಮೀಸಲಾತಿ ನೀಡಲಾಗಿದೆ. ರಾಜ್ಯದ ಪ್ರತಿ ಮನೆಗೂ ವಿದ್ಯುತ್, ನಲ್ಲಿಗಳನ್ನು ಒದಗಿಸುವ ಕೆಲಸ ಪೂರ್ಣಗೊಂಡಿದೆ. 5 ಲಕ್ಷ ರೂ.ವರೆಗಿನ ಆಯುಷ್ಮಾನ್ ಭಾರತ್ ಯೋಜನೆಯು ಜನರಿಗೆ ಪ್ರಯೋಜನಕಾರಿಯಾಗಿದೆ.

ಭಾರತದ ಅಭಿಪ್ರಾಯ ಇಂದು ಮುಖ್ಯ: ಶಾ
ವಿಶ್ವದಲ್ಲಿ ಭಾರತದ ಬೆಳೆಯುತ್ತಿರುವ ಸ್ಥಾನಮಾನದ ಬಗ್ಗೆ ಮಾತನಾಡಿದ ಅಮಿತ್ ಶಾ, ವಿಶ್ವ ಶಾಂತಿ, ಹವಾಮಾನ ಬದಲಾವಣೆ ವಿಷಯಕ್ಕೆ ಬಂದರೆ, ಈ ಎಲ್ಲಾ ವಿಷಯಗಳ ಬಗ್ಗೆ ಇಂದು ಭಾರತದ ಅಭಿಪ್ರಾಯವು ಮುಖ್ಯವಾಗುತ್ತದೆ ಎಂದು ಹೇಳಿದರು. ಇಂದು, ಭಾರತದ ದೃಷ್ಟಿಕೋನವು ವಿಶ್ವಕ್ಕೆ ಮುಖ್ಯವಾಗಿದೆ. ಜಿ-20 ಶೃಂಗಸಭೆಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಬಂದಿದೆ. ಈ ಸಮಾವೇಶದ ಮೂಲಕ ನಾವು ಭಾರತೀಯತೆಯ ಅಸ್ಮಿತೆಯನ್ನ ಪ್ರತಿಪಾದಿಸಬಹುದು.

ಅಭಿವೃದ್ಧಿಯ ರಾಜಕಾರಣ ಮಾಡುವವರು ಮಾತ್ರ ಆಡಳಿತ ನಡೆಸುತ್ತಾರೆ: ಶಾ
ದೇಶದಲ್ಲಿ ಶಾಂತಿ ಇಲ್ಲದಿದ್ದರೆ ಯಾವುದೇ ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಗೃಹ ಸಚಿವರು ಹೇಳಿದರು. ಯಾವುದೇ ದೇಶದ ಗೌರವವು ನಿಮ್ಮ ಗಡಿಯನ್ನ ನೀವು ಹೇಗೆ ರಕ್ಷಿಸುತ್ತೀರಿ ಎಂಬುದಕ್ಕೆ ಸಂಬಂಧಿಸಿದೆ. ಸರ್ಜಿಕಲ್ ಸ್ಟ್ರೈಕ್ ಮೂಲಕ ಮೋದಿ ಜೀ ವಿಶ್ವಕ್ಕೆ ತನ್ನ ಸಂದೇಶವನ್ನ ಬಲವಾಗಿ ನೀಡಿದರು. ಮೋದಿ ಸರ್ಕಾರ ಕೃಷಿ ಆರ್ಥಿಕತೆಯನ್ನ ಮುಂದಕ್ಕೆ ಕೊಂಡೊಯ್ದಿದೆ. ಐದು ವರ್ಷಗಳ ನಂತರ, ಕೃಷಿಯನ್ನು ಜಿಡಿಪಿಗೆ ಪ್ರಮುಖ ಕೊಡುಗೆ ಎಂದು ಪರಿಗಣಿಸಲಾಗುತ್ತದೆ.

 

BIG NEWS: ಕರೋನ ಬಳಿಕ ದಡಾರದ ಬಗ್ಗೆ ಎಚ್ಚರಿಕೆ ನೀಡಿದ ಡಬ್ಲ್ಯುಎಚ್ಒ ಮತ್ತು ಸಿಡಿಸಿ ಎಚ್ಚರಿಕೆ| Measles now `an imminent global threat`

Paper : ಪತ್ರಿಕೆ, ಮ್ಯಾಗ್ ಸಿನ್ ಗೆ ಬಳಸುವ ‘ಕಾಗದ’ ಹೇಗೆ ತಯಾರಾಗುತ್ತೆ? ಒಂದು ಮರದಿಂದ ಎಷ್ಟು ಕಾಗದ ತಯಾರಿಸುತ್ತಾರೆ? ಇಲ್ಲಿದೆ ಡಿಟೈಲ್ಸ್

BIG NEWS : ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡ ಇಸ್ಲಾಮಿಕ್ ಸಂಘಟನೆ, ಮತ್ತೊಂದು ದಾಳಿಯ ಎಚ್ಚರಿಕೆ

Share.
Exit mobile version