ಕೋಲಾರ : ಕೋಲಾರದಲ್ಲಿ ಘೋರ ಘಟನೆ ಒಂದು ನಡೆದಿದ್ದು ಎರಡು ವರ್ಷದ ಮಗು ಒಂದು ಬೆಟ್ಟದ ನೆಲ್ಲಿಕಾಯಿ ನುಂಗಿದೆ. ಈ ವೇಳೆ ನೆಲ್ಲಿಕಾಯಿ ಹೊರಗಡೆ ಬಾರದೆ ಗಂಟಲಲ್ಲಿ ಸಿಲುಕಿ ಮಗು ಸಾವನ್ನಪ್ಪಿರುವ ಘಟನೆ, ಕೋಲಾರ ಜಿಲ್ಲೆಯ ಮಾಲೂರಿನ ಗಾಂಧಿ ಸರ್ಕಲ್ ನಲ್ಲಿ ಒಂದು ಘಟನೆ ನಡೆದಿದೆ.
ರವಿ ಮತ್ತು ಮಾಲಾ ದಂಪತಿಯ ಎರಡು ವರ್ಷದ ವಿಜಯೇಂದ್ರ ಎನ್ನುವ ಮಗುವಿನ ಗಂಟಲಲ್ಲಿ ನೆಲ್ಲಿಕಾಯಿ ಸಿಲುಕಿ ಸಾವನಪ್ಪಿದೆ ಬೆಟ್ಟದ ನೆಲ್ಲಿಕಾಯಿ ಗಂಟಲಿನಲ್ಲಿ ಸಿಲುಕಿದ ಕೊಡಲೇ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಬಂದಿದ್ದರು. ಆದರೆ ಗಂಟಲಲ್ಲಿ ಸಿಲುಕಿದ ನೆಲ್ಲಿಕಾಯಿಯನ್ನು ಹೊರಗಡೆ ತೆಗೆಯಲಾಗದೆ ಮಗು ಸಾವನಪ್ಪಿದೆ.








