ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಯಾರಾದರೂ ನಮ್ಮಲ್ಲಿನ ದೋಷವನ್ನ ಪದೇ ಪದೇ ಎತ್ತಿ ತೋರಿಸಿದರೆ ನಾವು ತುಂಬಾ ಕೋಪಗೊಳ್ಳುತ್ತೇವೆ. ಅದ್ರಂತೆ, ಆ ಕೋಪವು ಆ ಕ್ಷಣದವರೆಗೆ ಉಳಿಯುತ್ತೆ. ನಂತ್ರ ಸ್ಥಿತಿ ಸಾಮಾನ್ಯವಾಗಿದೆ. ಆದ್ರೆ, ಇಲ್ಲೊಂದು ಅಘಾತಕಾರಿ ಘಟನೆ ನಡೆದಿದ್ದು, ಕಪ್ಪು ಎಂದು ಗೇಲಿ ಮಾಡಿದ ಪತಿಯನ್ನ ಪತ್ನಿ ಕೊಡಲಿ ಕೊಚ್ಚಿ ಕೊಂದಿದ್ದಾಳೆ.

ಛತ್ತೀಸ್ಗಢದ ದುರ್ಗ್ ಜಿಲ್ಲೆಯ ಅಮ್ಲೇಶ್ವರ ಗ್ರಾಮದ ನಿವಾಸಿ ಅನಂತ್ ಸೋನ್ವಾನಿಯನ್ನ ಆತನ ಪತ್ನಿ ಸಂಗೀತಾ ಸೋನ್ವಾನಿ ಕೊಲೆ ಮಾಡಿದ್ದಾಳೆ. ಸಂಗೀತಾ ಅನಂತ್ ಸೋನ್ವಾನಿ ಎರಡನೇ ಪತ್ನಿಯಾಗಿದ್ದು, ತನ್ನ ಮೊದಲ ಹೆಂಡತಿಯ ಮರಣದ ನಂತ್ರ ಸಂಗೀತಾಳನ್ನ ಮದುವೆಯಾಗಿದ್ದ. ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಅನಂತ್ ಸೋನ್ವಾನಿ ತನ್ನ ಹೆಂಡತಿಯನ್ನ ಸುಂದರವಾಗಿಲ್ಲ ಮತ್ತು ಕಪ್ಪಿ ಎಂದು ಆಗಾಗ್ಗೆ ಬೈಯುತ್ತಿದ್ದ. ಭಾನುವಾರ ರಾತ್ರಿಯೂ ಗಂಡ ಮತ್ತು ಹೆಂಡತಿಯ ನಡುವೆ ದೊಡ್ಡ ಜಗಳವಾಗಿತ್ತು.

ಆ ಸಮಯದಲ್ಲಿ, ಅನಂತ್ ಮತ್ತೆ ಅವಳ ದೇಹದ ಬಣ್ಣ ಅಣುಕಿಸಲು ಶುರು ಮಾಡಿದ. ಇದರಿಂದ ಕುಪಿತಗೊಂಡ ಸಂಗೀತಾ, ತನ್ನ ಗಂಡನನ್ನು ಮನೆಯಲ್ಲಿ ಕೊಡಲಿಯಿಂದ ಇರಿದು ಕೊಲೆ ಮಾಡಿದ್ದಾಳೆ. ಆದ್ರೂ ಆಕೆಯ ಕೋಪ ಕಡಿಮೆಯಾಗದಿದ್ದಾಗ ಆತನ ಜನನಾಂಗಗಳನ್ನ ಸಹ ಕತ್ತರಿಸಿದ್ದಾಳೆ.  ಅನಂತ್ ಸೋನ್ವಾನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇನ್ನು ಮರುದಿನ ಬೆಳಿಗ್ಗೆ, ಆಕೆ ತನ್ನ ನೆರೆಹೊರೆಯವರಿಗೆ ಬೇರೊಬ್ಬರು ಬಂದು ತನ್ನ ಗಂಡನನ್ನ ಕೊಂದಿದ್ದಾನೆ ಎಂದು ನಾಟಕ  ಶುರು ಮಾಡಿದ್ದು, ದೃಶ್ಯ ಬದಲಾಯಿಸಲು ಪ್ರಯತ್ನಿಸಿದ್ದಾಳೆ. ಸ್ಥಳೀಯರು ನೀಡಿದ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಸ್ಥಳಕ್ಕೆ ತಲುಪಿ ಶವವನ್ನ ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದರು. ನಂತ್ರ ಸಂಗೀತಾಳನ್ನ ವಿಚಾರಣೆಗೊಳಪಡಿಸಲಾಯಿತು ಮತ್ತು ಈ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮನುಷ್ಯನು ಕೋಪಗೊಂಡಾಗ ತನ್ನ ಆಲೋಚನಾ ಶಕ್ತಿಯನ್ನ ಕಳೆದುಕೊಳ್ಳುತ್ತಾನೆ. ಆಗ ತೆಗೆದುಕೊಂಡ ನಿರ್ಧಾರಗಳು ಖಂಡಿತ ಒಳ್ಳೆಯದಾಗಿರೋಲ್ಲ. ಸಂಗೀತಾ ಮಾಡಿದ್ದು ಅಕ್ಷರಶಃ ತಪ್ಪು. ಆದ್ರೆ, ಯಾವುದೇ ವ್ಯಕ್ತಿ ಎಂದಿಗೂ ಇತರ ವ್ಯಕ್ತಿಯ ಬಾಡಿ ಶೇಮಿಂಗ್ ಮಾಡಬಾರದು. ಅವರು ಹಾಗೆ ಇರಲು ಬಯಸುವುದಿಲ್ಲ, ಅಲ್ಲವೇ? ಅದು ಇದ್ದರೂ, ಅದು ಅವರಿಗೆ ಬಿಟ್ಟದ್ದು. ನೀವು ದಪ್ಪಗಿದ್ದೀರಿ, ತೆಳ್ಳಗಿದ್ದೀರಿ, ಕಪ್ಪಾಗಿದ್ದೀರಿ ಅಂತಾ  ಹೇಳುವುದನ್ನ ನಿಲ್ಲಿಸಬೇಕು. ಇನ್ನು ಇದನ್ನ ಹೇಳುವ ಅಭ್ಯಾಸ ನಿಮಗಿದ್ದರೆ, ಹುಷಾರಾಗಿರಿ.

Share.
Exit mobile version