ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಯಾರನ್ನಾದರೂ ಪ್ರೀತಿಯಿಂದ ತಬ್ಬಿಕೊಂಡರೆ, ಹೃದಯಕ್ಕೆ ಕೊಂಚ ಶಾಂತಿ ಸಿಗುತ್ತೆ ಅಂತಾರೆ. ಆದ್ರೆ, ವಿಚಿತ್ರ ಪ್ರಕರಣವೊಂದು ಮುನ್ನೆಲೆಗೆ ಬಂದಿದ್ದು, ವ್ಯಕ್ತಿಯೊಬ್ಬ ಮಹಿಳೆಯನ್ನ ಬಲವಾಗಿ ಅಪ್ಪಿಕೊಂಡಿದ್ದು, ಆಕೆಯ ಎದೆಯ ಪಕ್ಕೆಲುಬುಗಳು ಮುರಿದಿವೆ. ಹೌದು, ಈ ಪ್ರಕರಣ ಚೀನಾದಲ್ಲಿ ನಡೆದಿದ್ದು, ಚೀನೀ ಮಹಿಳೆ ತನ್ನ ಸಹೋದ್ಯೋಗಿ ವಿರುದ್ಧ ಮೊಕದ್ದಮೆ ಹೂಡಿದ್ದಾಳೆ. ಆಕೆಯ ಸಹೋದ್ಯೋಗಿಯು ಅವಳನ್ನ ತುಂಬಾ ಬಿಗಿಯಾಗಿ ತಬ್ಬಿಕೊಂಡಿದ್ದರಿಂದ ಆಕೆಯ ಎದೆಯ ಮೇಲೆ ಮೂರು ಪಕ್ಕೆಲುಬುಗಳನ್ನ ಮುರಿದು ಹೋಗಿವೆ. ನಂತ್ರ ಆ ಮಹಿಳೆ ಯುಂಕ್ಸಿ ನ್ಯಾಯಾಲಯದ ಮೊರೆಯೋಗಿದ್ದು,  ಅಪ್ಪುಗೆಯ ಕಾರಣದಿಂದಾಗಿ ಚಿಕಿತ್ಸೆಗಾಗಿ ಖರ್ಚು ಮಾಡಿದ ಹಣಕ್ಕೆ ಪರಿಹಾರ ನೀಡುವಂತೆ ಯುವಕನನ್ನ ಒತ್ತಾಯಿಸಿದ್ದಾಳೆ.

ವರದಿಗಳ ಪ್ರಕಾರ, ಈ ಘಟನೆಮೇ 2021ರಲ್ಲಿ ಸಂಭವಿಸಿದೆ. ಚೀನಾದ ಹುನಾನ್ ಪ್ರಾಂತ್ಯದ ಯುಯಾಂಗ್ ನಗರದ ಮಹಿಳೆಯೊಬ್ಬರು ತಮ್ಮ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಯೊಂದಿಗೆ ಹರಟೆ ಹೊಡೆಯುತ್ತಿದ್ದಾಗ ಪುರುಷ ಸಹೋದ್ಯೋಗಿಯೊಬ್ಬ ಆಕೆಯ ಬಳಿಗೆ ಬಂದು ಬಲವಾಗಿ ತಬ್ಬಿಕೊಂಡಿದ್ದಾನೆ. ಆಲಿಂಗನದ ನಂತರ ಮಹಿಳೆ ನೋವಿನಿಂದ ನರಳಿದಳು ಎಂದು ವರದಿಯಾಗಿದೆ. IOL ಪ್ರಕಾರ, ಕೆಲಸದ ನಂತರವೂ ಆಕೆ ಎದೆ ನೋವು ಅನುಭವಿಸುತ್ತಿದ್ದರು. ವೈದ್ಯರ ಬಳಿ ಹೋಗುವ ಬದಲು ಎದೆಗೆ ಬಿಸಿ ಎಣ್ಣೆ ಹಚ್ಚಿ ನಿದ್ದೆಗೆ ಜಾರಿದ್ದಾಳೆ. ಐದು ದಿನಗಳ ನಂತ್ರ ಹೆಚ್ಚುತ್ತಿರುವ ಎದೆನೋವಿನ ನಂತ್ರ ಮಹಿಳೆ ಆಸ್ಪತ್ರೆಗೆ ಹೋಗಿದ್ದಾಳೆ.

ಎಕ್ಸ್-ರೇ ಸ್ಕ್ಯಾನ್‌ನಲ್ಲಿ ಮುರಿದ ಪಕ್ಕೆಲುಬುಗಳು ಪತ್ತೆ
ಎಕ್ಸ್-ರೇ ಸ್ಕ್ಯಾನ್ ಪ್ರಕಾರ, ಮಹಿಳೆಯ ಮೂರು ಪಕ್ಕೆಲುಬುಗಳು ಮರಿದಿವೆ. ಅದರಲ್ಲಿ ಎರಡು ಅವಳ ಬಲಭಾಗದಲ್ಲಿ ಮತ್ತು ಒಂದು ಎಡಭಾಗದಲ್ಲಿವೆ. ನೌಕರಿಯಿಂದ ರಜೆ ಹಾಕುವಂತೆ ಒತ್ತಾಯಿಸಿದ್ದರಿಂದ ಹಣವನ್ನೂ ಕಳೆದುಕೊಂಡಿದ್ದಾರೆ. ಶುಶ್ರೂಷೆ ಮತ್ತು ವೈದ್ಯಕೀಯ ವೆಚ್ಚಗಳನ್ನ ಸಹ ಅವಳು ಪಾವತಿಸಬೇಕಾಗಿತ್ತು. ಚೇತರಿಸಿಕೊಳ್ಳುತ್ತಿರುವಾಗ, ಅವಳು ತನ್ನ ಪಕ್ಕೆಲುಬುಗಳನ್ನ ಮುರಿದ ಪುರುಷ ಸಹೋದ್ಯೋಗಿಯ ಬಳಿಗೆ ಹೋಗಿದ್ದು, ಅವನು ಅವಳೊಂದಿಗೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದನು. ಆ ವ್ಯಕ್ತಿ ತನ್ನ ಗಂಟಲಿಗೆ ಗಾಯವಾಗಿದೆ ಎಂಬುದಕ್ಕೆ ತನ್ನ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ತಕರಾರು ಮಾಡಿದ್ದಾನೆ.

ಕೊನೆಗೆ ಆರೋಪಿಗಳಿಂದ ನಷ್ಟ ಪಡೆದ ಮಹಿಳೆ
ಸ್ವಲ್ಪ ಸಮಯದ ನಂತರ, ಮಹಿಳೆ ತನ್ನ ಸಹೋದ್ಯೋಗಿಯ ಮೇಲೆ ಮೊಕದ್ದಮೆ ಹೂಡಿದಳು, ಹಣಕಾಸಿನ ನಷ್ಟಕ್ಕೆ ಹಾನಿಯನ್ನು ಕೋರಿದಳು. ನ್ಯಾಯಾಧೀಶರು ಸಹೋದ್ಯೋಗಿಗೆ 10,000 ಯುವಾನ್ ಅಥವಾ 1.16 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಇನ್ನು ಆ ಐದು ದಿನಗಳಲ್ಲಿ ಮಹಿಳೆ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದು ಮುರಿತಕ್ಕೆ ಕಾರಣವಾಗಬಹುದೆಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.

Share.
Exit mobile version