ಬೀದರ್‌ : ಬೀದರ್‌ ಜಿಲ್ಲೆಯಲ್ಲಿ ಘೋರ ದುರಂತವೊಂದು ನಡೆದಿದ್ದು, ದುಷ್ಕರ್ಮಿಗಳು ಅಂತ್ಯಕ್ರಿಯೆ ಮಾಡಿದ ಒಂದೂವರೆ ವರ್ಷದ ಮಗುವಿನ ಶವವನ್ನು ಹೊರಗೆ ತೆಗೆದು ಶವವನ್ನು ಮರಕ್ಕೆ ಕಟ್ಟಿರುವ ಘಟನೆ ನಡೆದಿದೆ.

ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅನಾರೋಗ್ಯದಿಂದ ಅಂಬಯ್ಯಸ್ವಾಮಿ ಎಂಬುವರ ಒಂದೂವರೆ ವರ್ಷದ ಮಗು ಮೃತಪಟ್ಟಿತ್ತು. ಬಳಿಕ ನಿನ್ನೆ ಮಗುವನ್ನು ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೆ ನಿನ್ನೆ ರಾತ್ರಿ ದುಷ್ಕರ್ಮಿಗಳು ಶವವನ್ನು ಹೊರಗೆ ತೆಗೆದು ಶವಕ್ಕೆ ಕಪ್ಪು ಬಟ್ಟೆ ಕಟ್ಟಿ ಮರಕ್ಕೆ ಕಟ್ಟಿಹೋಗಿದ್ದಾರೆ. ಇದು ಮಾಟಮಂತ್ರ ಮಾಡುವವರಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share.
Exit mobile version