ಸುಭಾಷಿತ :

Saturday, February 22 , 2020 8:28 AM

‘ವೊಡಾಪೋನ್-ಐಡಿಯಾ’ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ : ಸರ್ಕಾರದ ನೆರವು ಸಿಗದಿದ್ದರೇ ‘ನೆಟ್ವರ್ಕ್ ಬಂದ್’.?


Friday, December 6th, 2019 5:01 pm

ನವದೆಹಲಿ : ಈಗಾಗಲೇ ಕರೆ, ಡಾಟಾ ದರ ಏರಿಕೆಯ ಬಿಸಿಯನ್ನು ಮುಟ್ಟಿಸುತ್ತಿರುವ ಮೊಬೈಲ್ ನೆಟ್ವರ್ಕ್ ಕಂಪನಿಗಳು, ಇದೀಗ ಸೇವೆಯನ್ನೇ ಬಂದ್ ಮಾಡುವ ಮೂಲಕ, ಗ್ರಾಹಕರಿಗೆ ಮತ್ತಷ್ಟು ಶಾಕ್ ನೀಡಲು ಮುಂದಾಗಿವೆ. ಅದರಲ್ಲೂ ವೋಡಾಪೋನ್-ಐಡಿಯಾ ಕಂಪನಿ, ಕೇಂದ್ರ ಸರ್ಕಾರ ನಿರೀಕ್ಷೆಯಂತೆ ಬೆಂಬಲವನ್ನು ನೀಡದೇ ಹೋದಲ್ಲಿ, ತಮ್ಮ ನೆಟ್ವರ್ಕ್ ಸೇವೆಯನ್ನೇ ನಿಲ್ಲಿಸುವ ಇರಾದೆಯನ್ನು ತಿಳಿಸಿದೆ.

ಈ ಕುರಿತಂತೆ ವೋಡಾಪೋನ್ ಐಡಿಯಾದ ಹಿರಿಯ ಕೈಗಾರಿಕೋದ್ಯಮಿ ಕುಮಾರ್ ಮಂಗಳಂ ಸುದ್ದಿಗಾರರ ಪ್ರಶ್ನೆಗೆ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸುತ್ತಾ ಮಾತನಾಡಿ, ಬಿರ್ಲಾ ಗ್ರೂಪ್ ವೋಡಾಪೋನ್-ಐಡಿಯಾದಲ್ಲಿ ಹೂಡಿಕೆ ಮಾಡುವುದಿಲ್ಲ. ಈ ಮೂಲಕ ಕೆಟ್ಟ ಹಣದ ಜೊತೆಗೆ ಹೂಡಿಕೆ ಮಾಡುವ ಪ್ರಯೋಜನವಿಲ್ಲ. ಸರ್ಕಾರದ ಬೆಂಬಲ ಸಿಗದೇ ಹೋದ್ರೇ, ವೋಡಾಪೋನ್-ಐಡಿಯಾ ನೆಟ್ವರ್ಕ್ ಮುಚ್ಚುವುದಾಗಿ ತಿಳಿಸಿದ್ದಾರೆ.

ಇನ್ನೂ ಮುಂದುವರೆದು ಮಾತನಾಡಿರುವ ಬಿರ್ಲಾ ಕಂಪನಿಯ ಹಿರಿಯ ಕೈಗಾರಿಕೋದ್ಯಮಿ ಕುಮಾರ್ ಮಂಗಳಂ, ಸುಪ್ರೀಂ ಕೋರ್ಟ್ ನೀಡಿರುವ ಎಜಿಆರ್ ಕುರಿತಂತ ತೀರ್ಪಿನಿಂದಾಗಿ ವೋಡಾಪೋನ್-ಐಡಿಯಾ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಅಲ್ಲದೇ ಕಂಪನಿ ಎರಡನೇ ತ್ರೈಮಾಸಿಕ ವರ್ಷದಲ್ಲಿ 50 ಸಾವಿರ ಕೋಟಿ ನಷ್ಟಕ್ಕೆ ಸಿಲುಕಿದೆ. ಹೀಗಾಗಿ ಪರಿಹಾರವಿಲ್ಲದಿದ್ದಲ್ಲಿ ಕಂಪನಿಯು ದಿವಾಳಿತನದ ಹಾದಿ ಹಿಡಿಯುತ್ತಿದೆ ಎಂದು ಹೇಳಿದ್ದಾರೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions